Varamahalakshmi Pooja @ Shantidham, Vasai Road
ವಸಾಯಿರೋಡ್ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್ಬಿ) ಸಮಾಜದವರ ಶಾಂತಿಧಾಮ ಸೇವಾ ಸಮಿತಿಯಲ್ಲಿ ವರಮಹಾಲಕ್ಷ್ಮೀ ವೃತಾಚರಣೆಯು ಇತ್ತೀಚೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ವೇದಮೂರ್ತಿ ಗಿರಿಧರ ಭಟ್ ಅವರ ಮಾರ್ಗದರ್ಶನದಲ್ಲಿ ಸಮಿತಿಯ ವಿಶ್ವಸ್ಥರಾದ ಲಕ್ಷ್ಮಿ ಪ್ರಭು ಮತ್ತು ನರಸಿಂಹ ಪ್ರಭು ಅವರು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ವರಮಹಾಲಕ್ಷ್ಮಿ ದೇವಿಗೆ ಕುಂಕುಮಾರ್ಚನೆ, ಅಭಿಷೇಕ, ಮಹಾಮಂಗಳಾರತಿ ನೆರವೇರಿತು.
ಇದೇ ಸಂದರ್ಭದಲ್ಲಿ ಮುಲ್ಕಿ ಮಹಾಗಣಪತಿ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಂಡಳಿಯ ಪ್ರಸಿದ್ಧ ಗಾಯಕರುಗಳಾದ ಶ್ರೀನಿವಾಸ ಭಾಗವತ್, ರವೀಂದ್ರ ಪ್ರಭು ಅವರು ಕನ್ನಡ, ಕೊಂಕಣಿ, ಮರಾಠಿ ಭಜನೆಗಳನ್ನು ಹಾಡಿ ನೆರೆದ ನೂರಾರು ಭಕ್ತರ ಮನಸೆಳೆದರು. ಹಿಮ್ಮೇಳದಲ್ಲಿ ಹಾರ್ಮೋನಿಯಂನಲ್ಲಿ ನಿಡ್ಡೋಡಿ ಗಣಪತಿ ಪ್ರಭು, ತಬಲಾದಲ್ಲಿ ದಾಮೋದರ ಭಾಗವತ್, ಪಖ್ವಾಜ್ನಲ್ಲಿ ರಾಜೇಶ್ ಭಾಗವತ್, ತಾಳದಲ್ಲಿ ಗಣೇಶ್ ಪೈ ಅವರು ಸಾಥ್ ನೀಡಿದರು.
ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನಡೆಯಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.
ಶ್ರೀ ವರಮಹಾಲಕ್ಷ್ಮಿಯ ಮಹಾ ಪೂಜೆಯ ನಂತರ. ಭೂರಿ ಸಮಾರಾಧನೆಯನ್ನು ಆಯೋಜಿಸಲಾಗಿತ್ತು.