Tulasi Pooja Thursday 14th November 2013 at Balaji Mandir, Vasai Road
ಶ್ರೀ ತುಳಸಿ ಪೂಜೆಯನ್ನು ಗುರುವಾರ 14ನೆ ತಾರೀಕು ನವೆಂಬರ್ 2013 ರಂದು “ಬಾಲಾಜಿ ಸೇವಾ ಸಮಿತಿ”ಯ ಮಹಿಳಾ ವಿಭಾಗದವರಿಂದ ಆಚರಿಸಲಾಯಿತು.ಪೂಜೆಯನ್ನು “ಜೈ ಅಮ್ಮ ಅನ್ನಪೂರ್ಣ ಹಾಲ್ನಲ್ಲಿ” ನಡೆಸಲಾಯಿತು. ವೇದಮೂರ್ತಿ ಶ್ರೀ ಗಿರಿಧರ ಭಟ್ ಅವರ ಮರ್ಗಾದರ್ಶನದಲ್ಲಿ ನಡೆಸಲಾಯಿತು, ಸಮಿತಿಯ ಸಹ ಸಂಚಾಲಕರಾದ ಸ್ನೇಹಲತಾ ಭಟ್ ಮತ್ತು ದೇವದಾಸ ಭಟ್ ಅವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ತುಳಸಿ ಮಂಟಪವನ್ನು ತುಂಬಾ ಸುಂದರವಾಗಿ ಶ್ರೀ ವಿನಾಯಕ್ ಪೈ ಮತ್ತು ಶ್ರೀ ಕಂಡ್ಲೂರು ವಿಜಯೇಂದ್ರ ಪ್ರಭು ಅವರು ಅಲಂಕರಿಸಿದರು. ಮಹಿಳೆಯರು ಮಂಟಪದ ಸುತ್ತ ಸುಂದರವಾದ ರಂಗೋಲಿಯನ್ನು ಬಿಡಿಸಿದರು, ನಂತರ ಎಲ್ಲರೂ ಸೇರಿ ತುಳಸಿ ಕಟ್ಟೆಯ ಸುತ್ತ ಹಣತೆಯ ದೀಪವನ್ನು ಹಚ್ಚಿದರು.
ಮಹಾ ಆರತಿಯೊಂದಿಗೆ ತುಳಸಿ ಪೂಜೆ ಸಮಾಪ್ತಗೊಂಡಿತು.