“Tulasi Pooja” held on Sunday 25th November 2012
ಶ್ರೀ ತುಳಸಿ ಪೂಜೆಯನ್ನು ರವಿವಾರ ೨೫ನೆ ತಾರೀಕು ನವೆಂಬರ್ ೨೦೧೨ರಂದು “ಬಾಲಾಜಿ ಸೇವಾ ಸಮಿತಿ”ಯ ಮಹಿಳಾ ವಿಭಾಗದವರಿಂದ ಆಚರಿಸಲಾಯಿತು.ಪೂಜೆಯನ್ನು “ಜೈ ಅಮ್ಮ ಅನ್ನಪೂರ್ಣ ಹಾಲ್ನಲ್ಲಿ” ನಡೆಸಲಾಯಿತು. ವೇದಮೂರ್ತಿ ಶ್ರೀ ಗಿರಿಧರ ಭಟ್ ಮತ್ತು ವೇದಮೂರ್ತಿ ಶ್ರೀಪತಿ ಭಟ್ ಅವರ ಮರ್ಗಾದರ್ಶನದಲ್ಲಿ ಪೂಜಾ ವಿಧಿ ವಿಧಾನಗಳನ್ನು ನಡೆಸಲಾಯಿತು ಹಾಗು ಪೂಜೆಗೆ ಈ ವರ್ಷ ಶ್ರೀ ಶ್ರೀಧರ್ ಪ್ರಭು ಮತ್ತು ಅವರ ಧರ್ಮ ಪತ್ನಿ ಶ್ರೀಮತಿ ಶೋಭಾ ಎಸ್ ಪ್ರಭು ಉಪಸ್ತಿತರಿದ್ದರು.
ತುಳಸಿ ಮಂಟಪವನ್ನು ತುಂಬಾ ಸುಂದರವಾಗಿ ಶ್ರೀ ವಿನಾಯಕ್ ಪೈ ಮತ್ತು ಶ್ರೀ ಕಂಡ್ಲೂರು ವಿಜಯೇಂದ್ರ ಪ್ರಭು ಅವರು ಅಲಂಕರಿಸಿದರು. ಶ್ರೀಮತಿ ವೀಣಾ ಭಕ್ತ, ಶ್ರೀಮತಿ ಸವಿತಾ ಪಿ ಕುಡ್ವ, ಶ್ರೀಮತಿ ವೀಣಾ ಜಿ ಭಟ್ ಅವರು ಮಂಟಪದ ಸುತ್ತ ಸುಂದರವಾದ ರಂಗೋಲಿಯನ್ನು ಬಿಡಿಸಿದರು, ನಂತರ ಎಲ್ಲ ಮಹಿಳೆಯರು ಸೇರಿ ತುಳಸಿ ಕಟ್ಟೆಯ ಸುತ್ತ ಹಣತೆಯ ದೀಪವನ್ನು ಹಚ್ಚಿದರು.
ಮಹಾ ಆರತಿಯೊಂದಿಗೆ ತುಳಸಿ ಪೂಜೆ ಸಮಾಪ್ತಗೊಂಡಿತು.
(ಪೂಜೆಯ ಛಾಯಚಿತ್ರವನ್ನು ತೆಗೆದವರು ಶ್ರೀ ಲೆಕ್ಷ್ಮಣ ರಾವ್)