Swagath Samarambha of Parama Poojya Srimad Shivananda Saraswati Swamiji 12th June 2011
Parama Poojya Srimad Shivananda Saraswati Swamiji, visited our Balaji Sabhagraha & Prarthana Mandir today at 2:30 PM. The programme began as per the schedule with the reception of Swamiji by Smt & Sri. Praveen Govind Nayak, Aarati to Lord Sri Balaji by Swamiji, Pada Pooja by Smt & Sri Ganapati Shanbhag followed by Committtee members of Balaji Seva Samiti, Veda gosh by Vedamoorthy Giridhar Bhat, Sripati Bhat & Vasu Bhat.
Sri. Someshwar Devendra Bhakta gave “Varadi Vachana” & spoke in brief about our activities/projects. Then the programe of felicitating our donors at the august hands of Parama Poojya Srimad Shivananda Saraswati Swamiji commenced (who donated Rs.10000 & above). After the felicitation Swamiji spoke and told the importance of “Dhaan” in this kaliyug and asked our samaj bhandhavs to donate (with Tanu, Mana & Dhana) in whichever possible way however small it may be, towards good cause, but with good intentions or thought, Swamiji was also in praise of our samiti for our Descipline, Co-operation and working with unity Later Swamiji blessed other samaj bhandhavs who were present, with Phal Mantrakshate. Swamiji departed to Walkeshwar at arround 5:30 PM. The programme ended with light refreshments (due to Ekadashi).
ಪೂರ್ವ ಯೋಜಿತ ಪ್ರಕಾರ ಭಾನುವಾರಾ ಜೂನ್ ೧೨ ರಂದು ಕೈವಲ್ಯ ಮಠದ ಅಧಿಪತಿಗಳಾದ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮಿಜಿಯವರು ನಮ್ಮ ಬಾಲಾಜಿ ಸಭಾಗ್ರಹಕ್ಕೆ ಪೂರ್ವಾಹ್ನ ೨:೩೦ ಕ್ಕೆ ಆಗಮಿಸಿದರು. ಅವರ ಪಾದವನ್ನು ತೊಳೆದು ಸ್ವಾಗತಿಸಿದವರು ಶ್ರೀಮತಿ ಮತ್ತು ಶ್ರೀ ಪ್ರವೀಣ್ ಗೋವಿಂದ್ ನಾಯಕ್ ಅವರು. ಸಭಾಗ್ರಹದ ಪ್ರವೇಶ ದ್ವಾರದಲ್ಲಿ ನಮ್ಮ ಮಹಿಳಾ ವೃಂದದವರು ಸ್ವಾಮೀಜಿಯವರನ್ನು ಪೂರ್ಣ ಕುಂಭದಿಂದ ಸ್ವಾಗತಿಸಿದರು. ಒಳಗೆ ಬಂದ ಸ್ವಾಮಿಜಿಯವರು ನೇರವಾಗಿ, ನಮ್ಮ ಗರ್ಭಗುಡಿಯಲ್ಲಿರುವ ಶ್ರೀ ವೆಂಕಟರಮಣ ದೇವರಿಗೆ ಆರತಿಯನ್ನು ಮಾಡಿದರು.
ನಂತರ ಸಭಾ ಕಾರ್ಯಕ್ರಮದಲ್ಲಿ ನಮ್ಮ ವೈಧಿಕ ವೃಂದದವರಿಂದ ವೇದ ಘೋಷ ನಡೆಯಿತು. ಶ್ರೀ ಸೋಮೇಶ್ವರ ದೇವೇಂದ್ರ ಭಕ್ತರು ವರದಿ ವಾಚನ ಮಾಡಿದರು. ಆನಂತರ ಸ್ವಾಮೀಜಿಯವರಿಗೆ ಶ್ರೀಮತಿ ಹಾಗು ಶ್ರೀ ಗಣಪತಿ ಶಾನಭಾಗ್ ಮತ್ತು ಬಾಲಾಜಿ ಸೇವಾ ಸಮಿತಿಯ ಆಡಳಿತ ಸದಸ್ಯರಿಂದ ಅವರು ಪಾದ ಪೂಜೆಯನ್ನು ಮಾಡಿದರು.
ಆ ದಿನದ ಮುಖ್ಯ ಕಾರ್ಯಕ್ರಮ ನಮ್ಮ ಬಾಲಾಜಿ ಸಭಾಗ್ರಹಕ್ಕೆ ಧನ (ರೂ.೧೦,೦೦೦ಕ್ಕೆ ಮೇಲ್ಪಟ್ಟ) ರೂಪದಿಂದ ಸಹಾಯವಿತ್ತ ದಾನಿಗಳನ್ನು ಸ್ವಾಮಿಜಿಯವರ ಹಸ್ತದಿಂದ ಶಾಲು ಹೊದೆಸಿ ಸನ್ಮಾನಿಸಲಾಯಿತು. ನಮ್ಮ ಸಭಾಗ್ರಹದ ನೆನಪಿನ ರೂಪದಲ್ಲಿ ಒಂದು ಪುಟ್ಟ ಬಾಲಾಜಿಯ ಮೂರ್ತಿಯನ್ನು ಕೊಡಲಾಯಿತು. ಸನ್ಮಾನ ಕಾರ್ಯದ ನಂತರ ಸ್ವಾಮಿಜಿಯವರು ಸಭೆಯನ್ನು ಉದ್ದೆಶಿಷಿ ಮಾತನಾಡಿದರು.
ಸ್ವಾಮೀಜಿಯವರು ಕಲಿಯುಗದಲ್ಲಿ ದಾನದ ಪ್ರಾಮುಖ್ಹ್ಯತೆಯನ್ನು ವಿವರಿಸಿದರು. ಇಂತಹ ಕಲಿಯುಗದಲ್ಲಿ ನಾವೆಲ್ಲರೂ ನಮ್ಮ ಶಕ್ತ್ಯಾನುಸಾರ ಸಮಾಜದ ಒಳಿತಿಗಾಗಿ ನಮಗೆ ಸಾಧ್ಯವಾಗುವಷ್ಟು ದಾನ ನೀಡಬೇಕು ಎಂದು ಹೇಳಿದರು. ದಾನ ಮಾಡುವಾಗ ಅದರ ಹಿಂದೆ ಸ್ವಾರ್ಥವನ್ನು ಬಿಟ್ಟು ಒಂದು ಒಳ್ಳೆಯ ಮನೋಭಾವ ಇರಬೇಕು. ಒಳ್ಳೆಯ ವಿಚಾರದಿಂದ ದಾನ ಮಾಡಿದರೆ ಅದು ನಮಗೆ ನಮ್ಮ ಜೀವನದಲ್ಲಿ ಒಳಿತನ್ನು ತಂದು ಕೊಡುತ್ತದೆ ಅಂತ ಸ್ಪಷ್ಟಿಕರಿಸಿದರು. ಸ್ವಾಮಿಜಿಯವರ ವೇದವಾಕ್ಯವನ್ನು ಸಭೆಯಲ್ಲಿ ನೆರೆದ ಜನರು ಮಂತ್ರಮುಗ್ಧರಾಗಿ ಆಲಿಸಿದರು. ಇನ್ನೊಂದು ನಮಗೆ ಅತ್ತ್ಯಂತ ಹೆಮ್ಮೆ ಪಡುವಂತಹ ವಿಷಯವೆಂದರೆ ಸ್ವಾಮಿಜಿಯವರು ನಮ್ಮ ಈ ಸಮಿತಿಯ ಶಿಸ್ತು, ಒಗ್ಗಟ್ಟು, ಭಾಂದವ್ಯ ಹಾಗು ನಮ್ಮ ಭಜನೆ, ಇವೆಲ್ಲವನ್ನೂ ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದು ಶ್ಲಾಘನೀಯ ಅಂತ ತುಂಬು ಹೃದಯದಿಂದ ಹೊಗಳಿದರು.
ಸ್ವಾಮಿಜಿಯವರ ವೇದವಾಕ್ಯದ ನಂತರ, ಸೋಮೇಶ್ವರ ದೇವೇಂದ್ರ ಭಕ್ತರು ಸಭಾಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ವಂದನೆಯನ್ನು ಸಲ್ಲಿಸಿದರು.
ಕಾರ್ಯಮದ ಅಂತದಲ್ಲಿ ಲಘು ಉಪಹರಾದ ವ್ಯವಸ್ತೆಯನ್ನು ಮಾಡಲಾಗಿತ್ತು.
ಸಂಜೆ ೫:೩೦ ಕ್ಕೆ ಸ್ವಾಮಿಜಿಯವರು ವಾಲ್ಕೆಶ್ವರ ಮೊಕ್ಕಾಂಗೆ ತೆರಳಿದರು.