Srimad Bhagvat Saptaha, Udyapana, on Saturday, 27th June 2015, organised by Sri Gururaja Manava Jagruti Kendra, Vasai Road.
ಜಿ.ಎಸ್.ಬಿ. ವಸಾಯಿ ರೋಡ್ ಬಾಲಾಜಿ ಸಭಾಗ್ರಹ ಮತ್ತು ಪ್ರಾರ್ಥನಾ ಮಂದಿರದಲ್ಲಿ “ಶ್ರೀಮಧ್ಭಾಗವತ ಪ್ರವಚನ” ಸಪ್ತಾಹ ಇತ್ತೀಚೆಗೆ ಜರಗಿತು.
ಅಧಿಕ ಮಾಸದ ಅಂಗವಾಗಿ ಈ ಅಧ್ಯಾತ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆನಂದ ವಿಹಾರ್ ವಿದ್ಯಾಲಯದ ಪ್ರಾoಶುಪಾಲ ಹಾಗೂ ಬಾಲಾಜಿ ಮಂದಿರ, ವಿರಾರ್ ಇದರ ಪ್ರಧಾನ ಅರ್ಚಕರಾದ, ಪ್ರಹಲ್ಲಾದ ನಾಗರಹಳ್ಳಿ ಆಚಾರ್ಯ ಅವರು ಪ್ರತಿದಿನ ಪ್ರವಚನವನ್ನು ನೀಡಿದರು.
ಭಾಗವತ ಪ್ರವಚನ ಶ್ರೀ ಗುರುರಾಜ ಮಾನವ ಜಾಗೃತಿ ಕೆ0ದ್ರ ವಸಾಯಿ ಅವರ ಆಯೋಜನೆಯಲ್ಲಿ ಜರಗಿತು. ಇದೇ ಸಂದರ್ಬದಲ್ಲಿ ಬಾಲಾಜಿ ಸೇವಾ ಸಮಿತಿ ಶ್ರೀ ವೆಂಕಟರಾಮಣ ಭಜನಾ ಮಂಡಳಿ ವಸಾಯಿ ರೋಡ್ ಅವರಿಂದ ಭಜನ ಸೇವೆ ನಡೆಯಿತು. ಮಂಡಳಿಯ ಸದಸ್ಯರು ಮರಾಠಿ, ಕನ್ನಡ, ಹಿಂದಿ, ಭಜನೆಗಳನ್ನು ಹಾಡಿದರು.
ಹಾರ್ಮೋನಿಯoನಲ್ಲಿ ಮಲ್ಪೆ ವಿಶ್ವನಾಥ ಪೈ, ನಿಡೋಡಿ ಪ್ರಸಾದ್ ಪ್ರಭು, ಪ್ರಕಾಶ್ ಪ್ರಭು, ತಬಲಾದಲ್ಲಿ ಅಮೇಯ ಪೈ, ಪಖ್ವಾಜಿನಲ್ಲಿ ಗಣೇಶ್ ಪೈ, ಅಶೋಕ್ ಶಿಂದೆ ಅವರು ಸಹಕರಿಸಿದರು.
ಸಮಿತಿಯ ಅರ್ಚಕ ವೇ| ಮೂ| ಗಿರಿಧರ ಭಟ್ ನೇತ್ರತ್ವದಲ್ಲಿ ಪೂಜಾ ವಿದಿ-ವಿಧಾನಗಳು ನೆರವೇರಿದವು. ಪ್ರವಚನಾಕಾರ ಪ್ರಹಲ್ಲಾದ ನಾಗರಹಳ್ಳಿ ಆಚಾರ್ಯ ಅವರನ್ನು ಬಾಲಾಜಿ ಸೇವಾ ಸಮಿತಿಯ ಆದ್ಯಕ್ಷ ತಾರಾನಾಥ ಪೈ ಅವರು ಶಾಲು ಹೊದೆಸಿ, ಫಲಪುಷ್ಪ ಮತ್ತು ಬಾಲಾಜಿಯ ಪ್ರತಿಮೆ ನೀಡಿ ಗೌರವಿಸಿದರು. ಸಮಿತಿಯ ಕಾರ್ಯದರ್ಶಿ ಪುರುಷೋತ್ತಮ ಶೆಣೈ ಮತ್ತು ಸಂಚಾಲಕ ದೇವೇಂದ್ರ ಭಕ್ತ ಉಪಸ್ಥಿತರಿದ್ದರು. ಆನಂತರ ಶ್ರೀ ಬಾಲಾಜಿ, ಶ್ರೀ ಕೃಷ್ಣ ಮತ್ತು ಇತರ ಪರಿವಾರ ದೇವರಿಗೆ ಆರತಿ ಬೆಳಗಿಸಿ ಶಾಶ್ವತ ಪೂಜಾ ಪ್ರಾಯೋಜಕರಿಗೆ ಪ್ರಸಾದ ವಿತರಿಸಲಾಯಿತು. ಶ್ರೀ ಗುರುರಾಜ ಮಾನವ ಜಾಗೃತಿ ಕೆ0ದ್ರ ವಸಾಯಿ ಇದರ ವಿಠಲ್ ಪುತ್ರನ್ ಪರಿವಾರದವರನ್ನು ಗೌರವಿಸಲಾಯಿತು. ರೇಖಾ ಉದಯ ಕಾಮತ್ ಅವರಿಂದ ಅರಶಿನ ಕುಂಕುಮ ಕಾರ್ಯಕ್ರಮ ಜರಗಿತು. ಧಾರ್ಮಿಕ ಕಾರ್ಯಕ್ರಮದಲ್ಲಿ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಾಲಾಜಿ ಸೇವಾ ಸಮಿತಿಯ ಉಪಾಧ್ಯಕ್ಷ ವಿನಾಯಕ ಪೈ, ವಿಜಯೆಂದ್ರ ಪ್ರಭು, ಗಣೇಶ್ ಕಾಮತ್, ಮನೋಹರ ಶೆಣೈ, ಪುರುಷೋತ್ತಮ ಕುಡ್ವ ಉಪಕಾರ್ಯದರ್ಶಿಗಳಾದ ವಿವೇಕಾನಂದ ಭಕ್ತ, ಸತ್ಯೇಂದ್ರ ನಾಯಕ್, ಲೆಕ್ಷ್ಮಣ ರಾವ್, ರಾಮಚಂದ್ರ ಹೆಗ್ಡೆ ಕೋಶಾಧಿಕಾರಿ ವೆಂಕಟ್ರಾಯ್ ಪ್ರಭು, ಶ್ರೀನಿವಾಸ ಪಡಿಯಾರ್, ವಿಶ್ವನಾಥ್ ಪೈ, ಗಣೇಶ್ ಪೈ, ಸಂಚಾಲಕ ದೇವೇಂದ್ರ ಭಕ್ತ, ಜತೆ ಸಂಚಾಲಕರಾದ ಶ್ರೀಧರ ಪ್ರಭು, ಜಗದೀಶ್ ಹೆಗ್ಡೆ, ದೇವದಾಸ ಭಟ್ ಪ್ರಬಂಧಕ ಪ್ರಕಾಶ್ ಶೆಣೈ, ರಾಮಕೃಷ್ಣ ಹೆಗ್ಡೆ, ಚಂದ್ರಕಾಂತ ಕುಡ್ವ ಸಮಿತಿಯ ಯುವ ವಿಭಾಗ, ಮಹಿಳಾ ವಿಭಾಗದ ಸದಸ್ಯರು ಉಪಸ್ಥಿತರಿದ್ದರು. ಶ್ರೀ ಗುರುರಾಜ ಮಾನವ ಜಾಗೃತಿ ಕೆ0ದ್ರ ವಸಾಯಿ ಸಮಿತಿಯವರಿಂದ ಅನ್ನ ಸ0ತರ್ಪಣೆ ಆಯೋಜಿಸಲಾಗಿತ್ತು. ವಿನಾಯಕ ಪೈ ಮತ್ತು ವಿಜಯೆಂದ್ರ ಪ್ರಭು ನೇತ್ರತ್ವದಲ್ಲಿ ದೇವರ ಮಂಟಪವನ್ನು ಅಲಂಕರಿಸಲಾಯಿತು.