Sri Ramnath Damodar Seva Samiti pooja at Wadala 3rd March 2013
.
.
.
.
.
.
.
.
.
.
ಶ್ರೀ ರಾಮನಾಥ ದಾಮೋದರ್ ಸೇವಾ ಸಮಿತಿ ಮುಂಬಯಿ ಇವರ ವಾರ್ಷಿಕ “ಶ್ರೀ ಸತ್ಯನಾರಾಯಣ ಮಹಾಪೂಜೆ” ಮಾರ್ಚ್ ೩ರ ರಂದು ವಡಾಲದ ಶ್ರೀ ರಾಮ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.
ವೇದ ಮೂರ್ತಿ ಶ್ರೀ ಅನಂತ್ ಭಟ್ ಅವರ ಮಾರ್ಗದರ್ಶನದಲ್ಲಿ ಸತ್ವಿಕ್ ಶೆಣೈ ಮತ್ತು ವಿಘ್ನೇಶ್ ಶಾನುಬೋಗ್ ದಂಪತಿ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿ.ಎಸ್.ಬಿ. ಸಮಾಜ ಗೋರೆಗಾಂವ್ ಅವರಿಂದ ಭಜನಾ ಸೇವೆ ನಡೆಯಿತು. ಅನಂತರ ಜರಗಿದ ಸಭಾ ಕಾರ್ಯಕ್ರಮದಲ್ಲಿ ಸಮಿತಿಯ ಕಾರ್ಯದರ್ಶಿ ಎಸ್. ಎ.ಶಾನುಭೋಗ್ ವರದಿ ವಾಚಿಸಿದರು. ಜೊತೆ ಕಾರ್ಯದರ್ಶಿ ಹರಿಮಣಿ ಶಾನುಭೋಗ್ ವಂದಿಸಿದರು.ವಿಶೇಷ ಸೇವಕರ್ತರಾದ ಪ್ರಕಾಶ್ ಎಲ್. ನಾಯಕ್, ವಿನಾಯಕ್ ಎಲ್. ನಾಯಕ್, ಪಾಂಡುರಂಗ ಶಾನುಭೋಗ್, ವೆಂಕಟೇಶ್ ಶಾನುಭೋಗ್, ಪ್ರಭಾಕರ್ ಪೈ, ಎಂ.ಡಿ. ಶಾನುಭೋಗ್ ಉಪಸ್ಥಿತರಿದ್ದರು.
ಸಮಿತಿಯ ಅಧ್ಯಕ್ಷ ಜಿ.ಎಂ. ಹೆಗ್ಡೆ, ಉಪಾದ್ಯಕ್ಷ ಕುತ್ಪಾಡಿ ಜಗದೀಶ್ ಹೆಗ್ಡೆ, ಕೋಶಾಧಿಕಾರಿ ಅರವಿಂದ್ ಶೆಣೈ ಹಾಗೂ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
( ಈ ಮೇಲ್ವರದಿಯನ್ನು ನಿರೂಪಿಸಿದವರು ಶ್ರೀ. ಪುರುಶೋಥಮ ಶೆಣೈ)