Sri Guru Rath, arrives at Balaji Mandir, Vasai Road on 7th May 2104
ಶ್ರೀ ಕಾಶೀ ಮಠಾಧೀಶ ಶ್ರೀಮದ್ ವರದೇಂದ್ರ ತೀರ್ಥ ಸ್ವಾಮೀಜಿ ಅವರ ಶತಮಾನ ಪುಣ್ಯತಿಥಿ ಮಹೋತ್ಸವ ಆಚರಣೆಗಾಗಿ ಕೊಚ್ಚಿನ್ನಿಂದ ಆರಂಭಗೊಂಡ ಸ್ವಾಮೀಜಿ ಅವರ ಭಾವಚಿತ್ರವನ್ನೊಳಗೊಂಡ ವಿಶೇಷ ಅಲಂಕೃತ ಗುರುರಥವು ಮಾ. 7 ರಂದು ವಸಾಯಿರೋಡ್ಗೆ ಆಗಮಿಸಿತು.
ವಸಾಯಿರೋಡ್ನ ಅಂಬಾಡಿರೋಡ್ನಲ್ಲಿ ಸಮಾಜ ಬಾಂಧವರು, ಭಕ್ತಾದಿಗಳು ಪೂರ್ಣಕುಂಭ ಸ್ವಾಗತ, ಭಜನೆ, ವಾದ್ಯ, ನಗಾರಿ, ವೇದ-ಘೋಷಗಳೊಂದಿಗೆ ಗುರುರಥವನ್ನು ಸ್ವಾಗತಿಸಿ ಮೆರವಣಿಗೆಯಲ್ಲಿ ಜಿಎಸ್ಬಿ ಸಮಾಜದ ಬಾಲಾಜಿ ಸೇವಾ ಸಮಿತಿಯ (ಶ್ರೀ ವೆಂಕಟರಮಣ ಭಜನಾ ಮಂಡಳಿ) ಬಾಲಾಜಿ ಮಂದಿರಕ್ಕೆ ಕರೆದೊಯ್ಯಲಾಯಿತು.
ವೇದಮೂರ್ತಿ ಗಿರಿಧರ್ ಭಟ್ ಅವರ ಮಾರ್ಗದರ್ಶನದಲ್ಲಿ ಪೂಜಾ ವಿಧಿ-ವಿಧಾನಗಳು ನೆರವೇರಿತು. ಇದೇ ಸಂದರ್ಭದಲ್ಲಿ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಮಹಾಮಂಗಳಾರತಿ ನಡೆಯಿತು. ಸಮಿತಿಯ ಸಂಚಾಲಕ ಸೋಮೇಶ್ವರ ದೇವೇಂದ್ರ ಭಕ್ತ ಸ್ವಾಗತಿಸಿದರು.
ಉಪಾಧ್ಯಕ್ಷ ವಿನಾಯಕ ಪೈ ಅವರು ವರದೇಂದ್ರ ಸ್ತೋತ್ರ ಪಠಿಸಿದರು. ಜತೆ ಕಾರ್ಯದರ್ಶಿ ಮಂಜೇಶ್ವರದ ವಿವೇಕಾನಂದ ಭಕ್ತ ಅವರು ಸ್ವಾಮೀಜಿ ಅವರ ಗುಣಗಾನ (ಸ್ವಾಮಿಜಿಯವರ ಸಂಕ್ಕ್ಷಿಪ್ತವಾದ ಇತಿಹಾಸ) ಮಾಡಿದರು. ಸಮಿತಿಯವರಿಂದ ಭಜನಾ ಕಾರ್ಯಕ್ರಮ ಜರಗಿತು. ಹಾರ್ಮೋನಿಯಂನಲ್ಲಿ ಮಲ್ಪೆ ವಿಶ್ವನಾಥ ಪೈ, ತಬಲಾದಲ್ಲಿ ಪುರುಷೋತ್ತಮ ಶೆಣೈ ಅವರು ಸಹಕರಿಸಿದರು.
ಈ ಕಾರ್ಯಕ್ರಮಕ್ಕೆ ಜಿಎಸ್ಬಿ ಸಮಾಜದ ಉಮಾನಾಥ ನಾಯಕ್, ಕೃಷ್ಣ ಪೈ ಇತರ ಸಮಾಜದ ವಿವಿಧ ಸಂಸ್ಥೆಗಳಾದ ವಿರಾರ್, ನಾಲಸೋಪರ, ಮೀರಾ-ಭಾಯಂದರ್, ದಹಿಸರ್, ಬೊರಿವಲಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಿತಿಯವರಿಂದ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ನೂರಾರು ಭಕ್ತಾದಿಗಳು, ಸಮಾಜ ಬಾಂಧವರು ಉಪಸ್ಥಿತರಿದ್ದು ಗುರುದೇವ ಅನುಗ್ರಹಕ್ಕೆ ಪಾತ್ರರಾದರು.
ಸಮಿತಿಯ ಅಧ್ಯಕ್ಷ ತಾರನಾಥ ಪೈ, ಗೌರವಾಧ್ಯಕ್ಷ ವಸಂತ ನಾಯಕ್, ಕಾರ್ಯದರ್ಶಿ ಪುರುಷೋತ್ತಮ ಶೆಣೈ, ಕೋಶಾಧಿಕಾರಿ ವೆಂಕಟರಾಯ ಪ್ರಭು, ಸಂಚಾಲಕ ದೇವೇಂದ್ರ ಭಕ್ತ, ಇತರ ಪದಾಧಿಕಾರಿಗಳು, ಮಹಿಳಾ ವಿಭಾಗದ ಪದಾಧಿಕಾರಿಗಳು, ಯುವ ವಿಭಾಗದ ಪದಾಧಿಕಾರಿಗಳು ಹಾಗೂ ಎಲ್ಲಾ ಸದಸ್ಯ ಬಾಂಧವರು ಕಾರ್ಯಕ್ರಮದ ಯಶಸ್ಸಿಗೆ ಪಾತ್ರರಾದರು. ವಿನಾಯಕ ಪೈ, ವಿಜಯೇಂದ್ರ ಪ್ರಭು ಅವರ ನೇತೃತ್ವದಲ್ಲಿ ಅಲಂಕರಿಸಿದ ವರದೇಂದ್ರ ಸ್ವಾಮೀಜಿ ಅವರ ಪೀಠದ ಮಂಟಪ ಮತ್ತು ಬಾಲಾಜಿ ದೇವರ ಮಂಟಪವು ಭಕ್ತಾದಿಗಳನ್ನು ಆಕರ್ಷಿಸಿತು.
.
.
(ವರದಿಗಾರರು ಸಮಿತಿಯ ಕಾರ್ಯದರ್ಶಿ ಶ್ರೀ. ಪುರುಷೋತ್ತಮ ಶೆಣೈ).
.
.
ಶ್ರೀಮದ್ ವರದೇಂದ್ರ ತೀರ್ಥ ಸ್ವಾಮೀಜಿಯವರ ಗುಣಗಾನ ಕೊಂಕಣಿಯಲ್ಲಿ ಅನುವಾದಿಸಿದವರು ಶ್ರೀ ಮಂಜೇಶ್ವರ ವಿವೆಕನಂದ್ ಭಕ್ತಾ ಹಾಗು ಇದನ್ನು ತಿದ್ದುಪಡಿಸಿದವರು ಶ್ರೀ ಸೋಮೇಶ್ವರ ದೇವೇಂದ್ರ ಭಕ್ತ)
.
.
ಶ್ರೀಮದ್ ವರದೇಂದ್ರ ತೀರ್ಥ ಸ್ವಾಮ್ಮ್ಯಾ೦ಗೆಲೆ ಗುಣಗಾನ
ಶ್ರೀಮದ್ ವರದೇಂದ್ರ ತೀರ್ಥ ಸ್ವಾಮೆ ಕಾಶಿಮಠ ಛೆ 18 ಛೆ ಮಠಾಧಿಪತಿ ಜಾವ್ನು ಅಸ್ಶಿಲಿಂತಿ.
ಹಾನ್ಗೆಲೇ ಜನ್ಮು ಕೊಚ್ಚಿ೦ತು 1866 ಇಸ್ಸ್ವಿಂತು ಆಂತು ಜಾಲ್ಲಲೇ ಆಸ್ಸ ಹಾಂಗೆಲೆ ಪೂರ್ವಾಶ್ರಮಾಚೆ ನಾವ “ಗಿರಿ ಮಲ್ಲ್ಯ” .
ಸಾನ್ದಕುನು ಹಾಂಗೆಲೆ ಸುಂದರ ಅಣಿ ಆಕರ್ಷಕ ವ್ಯಕ್ತಿತ್ವ, ಬಾಲ್ಯದಕುನುಚಿ ಮುಂದಾಳತ್ತ್ವ ಗೆತ್ತ ಆಶ್ಹಿಲಿಂತಿ.
ಹಾಂಕ 1876 ಇಸ್ಸ್ವಿಂತು ಪರಮ ಪೂಜ್ಜ್ಯ ಶ್ರೀಮದ್ ಭುವನೇಂದ್ರ ಸ್ವಾಮ್ಮ್ಯನ ಮಂಜೆಶ್ವರಾ೦ತು ಸನ್ಯಾಸ ದೀಕ್ಷೆ ದಿವ್ನು “ವರದೇಂದ್ರ ತೀರ್ಥ” ಮೊಹ್ನು ಪುನರ್ ನಾಮಕರಣ ಕೆಲ್ಲೆ.
ಹಾನ್ನಿ 1886 ದಕುನು 1914 ತಾ೦ಯಿ ಕಾಶಿಮಠಾ ಛೆ ಮಠಾಧಿಪತಿ ಜಾವ್ನು ಆಶ್ಹಿಲೆ೦ತಿ.
10 ವರ್ರ್ಸ ಕಾಶಿ೦ತೂ ಶಿಕ್ಷಣ ಗ್ಹೆವ್ನು ತಾನ್ನಿ ಸಂಸ್ಕೃತ ವಿಧ್ವಾನ್ ಜಾಲ್ಲೆಂತಿ.
ಹೆ ಸ್ವಾಮ್ಮ್ಯನಿ, ಶ್ರೀ ವೇದವ್ಯಾಸಾ ಅಷ್ಟಕ, ಶ್ರೀ ರಾಮಚಂದ್ರ ಅಷ್ಟಕ, ಶ್ರೀ ಕೃಷ್ಣ ಅಷ್ಟಕ ಇತ್ತ್ಯಾದಿ ಅನೇಕ ಸ್ತೋತ್ರ ರಚನೆ ಕೆಲ್ಲ್ಯಾ. ಹಾನ್ನಿ ಧರ್ಮ ಭೋಧನೆ ಮಾರ್ಗಾರಿ ಸಮಾಜ್ ಬಾಂಧವಾಂಕ್ ಧೈರ್ಯ ಕ್ಷಮಾ ಆನಿ ಮನ ಹತೋಟಿ ಹಾಡ್ಚೆ ತಸಲೆ ಗುಣ ಶಿಕ್ಕೈಲೆ .
“ಸತ್ತ್ಯ ಆನಿ ಶಿಕ್ಷಣಾ ವೈರಿ ಅಖಂಡ ವಿಶ್ವಾಸು ಸ್ವಾಮ್ಯೆಂಕ. ತಾಂಗೆಲೆ ದಿವ್ಯ ಹಸ್ಥಾನ ಕೊಡಿಯಲಾಚೆ ಕೆನರಾ ಸ್ಕೂಲ ಆನಿ ಕೊಚ್ಚಿ ಛೇ ತಿರುಮಲ ತಿರುಪತಿ ದೇವಸ್ಥಾನ ಸ್ಕೂಲಾ ಉಧ್ಘಾಟನ ಜಾಲ್ಲೆ.
ಹೆ ಸ್ವಾಮ್ಮ್ಯೆ ಅತ್ತ್ಯಂತ ಬುದ್ಧಿವಂತ ಅಸ್ಶಿಲೆಂತಿ ಕಿತ್ತ್ಲಿಗಿ ಇಂಜಿನೀರಿಂಗ್ ಆಚೆ ಕಠಿಣ ಪ್ರಶ್ನೆ೦ಕ ಉತ್ತರ ಸೊದ್ದುನು ಕಾಳ್ಳ.
ಉಧಾರಣೆಕ ಹಾನ್ನಿ ಲೋಕೊಮೋಟಿವ್ (ಸ್ಟೀಮ್ ಇಂಜಿನ), ಟೆಲಿಗ್ರಾಫ್ ಮೇಷಿನ, ವಾಚ್ ಆನಿ ಗಡಿಯಾರ ಸಕ್ಕಡ ದುರಸ್ತಿ ಕೆಲ್ಲಲೆ ಅಸ್ಸಾ.
ಹಾನ್ನಿ ದ್ವೈತ ಸಿದ್ದಾಂತ ಪ್ರತಿಷ್ಠಾಪನ ಆಚಾರ್ಯ ಜಾವ್ನು ಅಸ್ಸೂನು ಶ್ರೀ ಹರಿ ಸರ್ವೋತ್ತಮ ಸಿದ್ಧಾಂತ ಪ್ರಚಾರ್ ಕೆಲ್ಲೆ ಮ್ಹಲ್ಲೇರಿ…
ದೇವು ಎಕ್ ಅಖಂಡ ಪರಮೊಚ್ಚ್ಯ ಶಕ್ತಿ, ಆನಿ ಆಮ್ಮಿ ದೇವಾಕ ಭಕ್ತೀರಿ ಶರಣ ಜಾವುಕಾ.
“ದೇವು” ಆನಿ “ಆತ್ಮ” ಹೆ ದೊನಿ ವಿಂಗಡ ವಿಂಗಡ.
ದೇವಾನ ತಾಗ್ಗೆಲೆ ನಿರ್ಮಿತ ಪ್ರಕೃತಿ ಮುಖಾಂತರ ಜಗತ್ತ್ಯ ಚೋಲೋಚೆ.
ಅಮ್ಮಿ ಧಾರ್ಮಿಕ ಆಧಾತ್ಮಿಕ ಆನಿ ಸಾಂಕೃತಿಕ ಮಾರ್ಗಾರಿ ಸಂಪೂರ್ಣ ಜಾವ್ನು ದೇವಾಕ ಶರಣ ಜಾತ್ತರಿ ತಾಗ್ಗೆಳೆ ದಯೇನ ಮೊಕ್ಷು ಆತ್ಮಾಂಕ ಶಾಂತಿ ಮ್ಹೆಲ್ಲ್ಚೆ ದೇವಾಲೆ ಅನುಗ್ರಹಾನಿಚಿ ಮೊಹ್ಣು ಸಾಂಗಿಲೆ ಅಸ್ಸಾ.
ಮನುಷ್ಯು ಸ್ವಾರ್ಥ ನಿಮಿತ್ತ ಜಾವ್ನು ವಾಟ್ ಚುಕ್ತಾ ಆನಿ ತೆ ದಿಕುನು ಮನ ಶಾಂತಿ ಸಮೃದ್ಧಿ ಆನಿ ಮೋಕ್ಷಾ ಖಾತಿರಿ ದೈವಿಕ ಮಾರ್ಗು ಧರ್ತಾ.
ಹೆ ಸ್ವಾಮ್ಮ್ಯೆಕ ಕವಿ ಸಾರ್ವಭೌಮ ಮೊಹ್ನುಯಿ ಆಪ್ಪೋಯೇತ ತಾಕ್ಕ ಉಧಾರಾಣೆ ಜಾವ್ನು ತಾನ್ನಿ ಚಕ್ರಬಂಧ ಮಾಲಬಂಧ ಆನಿ ನಾಗಬಂಧ ಮ್ಹಳ್ಳಾಲೆ ಕವಿತಾ ರಚನೆ ಕೆಲ್ಲಲೆ ಅಸ್ಸಾ.
ವೈಧಿಕ ವ್ರಂದಾಲೇ ಮಾರ್ಗದರ್ಷನಾ ಖತಿರಿ ಹೆ ಸ್ವಾಮ್ಮ್ಯೆನ “ಬ್ರಾಹ್ಮಣ ಮಂತ್ರ ಸಂಹಿತ” ಮ್ಹಳ್ಳಾಲೆ ಏಕ ಪುಸ್ತಕ ರಚನೆ ಕೆಲ್ಲಲೆ ಅಸ್ಸಾ..
ಕಲೆ ಕ “Fine Arts ” ಕ ಹಾನ್ನಿ ಅತ್ತ್ಯಂತ ಪ್ರೋತ್ಸಾಹ ದಿಲ್ಲಾ.
ಗಣಿತ ಶಾಸ್ತ್ರ ಜ್ಯೋತಿಷ್ ಶಾಸ್ತ್ರ ಆನಿ ಆಯುರ್ವೇದಾಂತು ನಿಪುಣ ಜಾವ್ನು ಅಶಿಲೆಂತಿ ಆನಿ ಬಹುಭಾಷಾ ಪ್ರವೀಣ್ ಜಾವ್ನು ಅಶಿಲೆಂತಿ ತಾಂತುಯಿ ಕೆಲವು ವಿದೇಶಿ ಭಾಷಾಚೆಯಿ ತಾಂಕ ಜ್ಞಾನ ಆಶ್ಹಿಲೆ .
ಚೆರ್ಡುವ ಮ್ಹಲ್ಲೇರಿ ಭಾರಿ ಪ್ರೀತಿ ಅಶ್ಶಿಲೆ ಹೆ ಸ್ವಾಮ್ಯೆಂಕ….. ಚೆರ್ಡುವಾ೦ ಖತಿರಿ ಸರ್ಕಸ್ ಆಯೋಜನ್ ಕೆಲ್ಲಲೇ ಅಸ್ಸಾ ತಸ್ಶಿಂಚಿ ವೈಧಿಕ ವೃಂದಾಲೆ ಚೆರ್ಡು0ವಾಂಕ ಆವ್0ಗಲೆ, ಪಟಾಕಿ ಪೂರಾ ವಾಂಟಿತ ಅಸ್ಶಿಲಿಂತಿ.
1912 ಇಸ್ಸ್ವಿಂತು ಹಾನ್ನಿ ಶ್ರೀಮದ್ ಸುಕ್ರತೀoದ್ರ ಸ್ವಾಮ್ಮ್ಯೆಕ ತಿರುಚಿರಾಪಳ್ಳಿoತು ದೀಕ್ಷಾ ದಿಲ್ಲೆ.
ಅಂತಿಮ ಜಾವ್ನು ಹೆ ಸ್ವಾಮ್ಮ್ಯಾನ ಆಶಾಡ ಶುದ್ಧ ದ್ವಿತೀಯ ದಿವಸು ಮ್ಹಳೆರಿ 10th JULY 1914 ಕ ಸಮಾಧಿ ಗೆತ್ತಿಲೆ ಅಸ್ಸಾ.
ಓಂ ಶ್ರೀ ವರದೇಂದ್ರ ತೀರ್ಥ ಸ್ವಾಮಿ ಗುರುಭ್ಯೋ ನಮಹ:
.
.
.
.
To commemorate the centenary year of Sri Varadendra Theertha Swamiji, seer of Sri Kashimath Samsthan, Varanasi attaining Samadhi, a rathyatra has been organised. The Rath carrying the photo of the seer will traverse from Cochin to Mumbai Walkeshwar Math, Mumbai.
.
Detailed program of Guru Rath Yatra on Wednesday 7th May 2014.
All samaj bandhav’s assembled at our Balaji Mandir by 6:15 PM.
.
Rath was recieved at Panchavati Hotel Junction with Poorna Kumbha Swagatha by our bhagini’s at 8:00 PM.
.
After receiving Rath, it was taken in procession through various inroads i.e from Panchavati Hotel junction to 100 Feet Road, Samatha Nagar, Sai Nagar, Ambadi Road, Deendayal Nagar, Navyug Nagar, D.G. Nagar to its final destination Balaji Mandir, Vasai Road, Meena Nagar, K.T. Village.
.
Photo of the Swamiji from the Rath was taken inside the Mandir by Taranath Pai and Shirish Acharya and consecrated in the beautifully decorated “Vrindavan” by Vinayak Pai.
Convener delivered a welcome speech to the congregation.
There after reciting Varadendra Ashtakam (by Vinayak Pai) followed by Bhajan (Purushotham Shenoy, S.Devevndra Bhakta, Ashok Shinde & Umanath Bhat and Maha Arati and finally Varadendra Gunagaan (by M.V.Bhaktha).
.
Finally Anna Santarpana was arranged after Prasad Vitharana at jai Amma Annapoorna Hall.