Satyamaruti Vrata 2nd August 2014 @Balaji Mandir, Vasai Road
On Saturday 2nd August 2014, 6th “SATYAMARUTI VRATA” was performed at our Balaji Sabhagraha & Prarthana Mandir from 7PM onwards. The pooja was preformed under the able guidance of, Vedamoorthy Sri Ananth Bhat, of Ram Mandir Wadala, Mumbai along with Sri. Lakshman V Pai, Smt. Shalini L Pai and Anant G Pai. The pooja was performed for the betterment and bright future of our children for them to excel in their field of studies or work.
Members of the Yuva Vibhag renderd bhajan seva from 9PM to 10:15PM. A divine atmosphere was created by their good singing of Hindi, Marathi and Kannada bhajans . Children from all age group sang with utmost devotion and their performance was appreciated by all our Mandali seniors with regards Voice / Rendition.
The highlight of the event was the “Station Head” of Vasai Local Police department Sri. Hegaje, Senior Police Inspector, who was off duty had visited our Mandir on this auspicious occasion along with his Wife and Daughter. President of our Samiti, Taranath Pai honored Sri Hegaje with Shawl and a Small Idol of Lord Sri Venkataramana and Srimati Hegaje was offered “Haldi-Kumkum” by Srimati Shalini L Pai.
After bhajan there was Maha Aarati & Teertha Prasad followed by “Samaradhane” at Jai Amma Annapoorna Hall, a Seva by Ganesh L Pai and Family on the occasion of Birthday of his youngest son Anant G Pai.
ವಸಾಯಿ ರೋಡಿನ ಬಾಲಾಜಿ ಸಭಾಗ್ರಹ ಹಾಗೂ ಪ್ರಾರ್ಥನಾ ಮಂದಿರದಲ್ಲಿ ಆಗಸ್ಟ್ 2 ರಂದು ಶನಿವಾರಾ ನಮ್ಮೆಲ್ಲ ಸಮಾಜ ಬಾಂಧವರ ಮತ್ತು ಮುಖ್ಯವಾಗಿ ಮಕ್ಕಳ ಉಜ್ಜ್ವಲ ಭವಿಷ್ಯ ಹಾಗು ಒಳಿತಿಗಾಗಿ 6 ನೇ “ಶ್ರೀ ಸತ್ಯ ಮಾರುತಿ ವ್ರತ”ವನ್ನು ಆಚರಿಸಲಾಯಿತು. ವಾಡಾಲದ ಶ್ರೀ ರಾಮ ಮಂದಿರದ ಅರ್ಚಕರಾದ ವೇದಮೂರ್ತಿ ಶ್ರೀ ಅನಂತ್ ಭಟ್ ಅವರ ನೆತ್ರ್ತ್ವದಲ್ಲಿ ಮತ್ತು ಪೂಜಾ ವಿಧಿ-ವಿಧಾನಗಳನ್ನು ಶ್ರೀ ಲಕ್ಷ್ಮಣ ವಿ ಪೈ, ಶ್ರೀಮತಿ ಶಾಲಿನಿ ಎಲ್ ಪೈ ಹಾಗು ಅವರ ಮೊಮ್ಮೊಗ ಅನಂತ್ ಜಿ ಪೈ ನೆರವೇರಿಸಿದರು. ವ್ರತವು ಸಾಯಂಕಾಲ 6 ಘಂಟೆಯಿಂದ ಆರಂಭವಾಯಿತು. ವ್ರತದ ಮಂಟಪವನ್ನು ಅತಿ ಸುಂದರವಾಗಿ ವೇದಮೂರ್ತಿ ಶ್ರೀ ಅನಂತ್ ಭಟ್ ಮತ್ತು ಶ್ರೀ ವಿನಾಯಕ್ ಪೈ ಹಾಗು ಗರ್ಭಗುಡಿಯನ್ನು ಶ್ರೀ ವಿಜಯೇಂದ್ರ ಪ್ರಭು ಮತ್ತು ಶ್ರೀ ದೇವದಾಸ್ ಭಟ್ ಅವರು ಅಲಂಕರಿಸಿದರು.
ವ್ರತಾನಂತರ ಯುವ ವಿಭಾಗದ ಮಕ್ಕಳಿಂದ ರಾತ್ರಿ 9 ರಿಂದ 10:15 ರ ತನಕ ಭಜನಾ ಕಾರ್ಯಕ್ರಮ ನೆರವೇರಿತು. ಎಲ್ಲಾ ವಯಸ್ಸಿನ ಮಕ್ಕಳು ತುಂಬಾ ಭಕ್ತಿಯಿಂದ ಶುಶ್ರಾವ್ಯವಾಗಿ ಹಾಡಿ, ಜನರ ಮೆಚ್ಚುಗೆಗೆ ಪಾತ್ರರಾದರು. ಭಜನಾ ಕಾರ್ಯಕ್ರಮದ ನಂತರ ಮಹಾ ಆರತಿ ಹಾಗೂ ತೀರ್ಥ ಪ್ರಸಾದವನ್ನು ವಿತರಿಸಲಾಯಿತು.
ದಿನದ ವಿಶೇಷವೆಂದರೆ ವಸಾಯಿ ಪೋಲಿಸ್ ಥಾಣೆಯ ಅಧಿಕಾರಿ, ವರಿಷ್ಠ ಪೋಲಿಸ್ ಇನ್ಸ್ಪೆಕ್ಟರ್ ಶ್ರೀಯುತ ಹೆಗಾಜೆ ಸಾಹೇಬರು ತಮ್ಮ ಪರಿವಾರ ಸಮೇತ ಪೂಜಾ ಸಮಯದಲ್ಲಿ ಉಪಸ್ತಿತರಿದ್ದರು, ಅವರನ್ನು ಬಾಲಾಜಿ ಸೇವಾ ಸಮಿತಿಯ ಅಧ್ಯಕ್ಷರಾದ ತಾರಾನಾಥ್ ಪೈಯವರು ಶಾಲು ಹೊದೆಸಿ ಹಾಗು ಶ್ರೀ ಬಾಲಾಜಿಯ ಪುಟ್ಟ ಮೂರ್ತಿಯನ್ನು ಅರ್ಪಿಸಿ ಸನ್ಮಾನಿಸಲಾಯಿತು ಮತ್ತು ಅವರ ಪತ್ನಿ ಶ್ರೀಮತಿ ಹೇಗಾಜೆಯವರಿಗೆ, ಶ್ರೀಮತಿ ಶಾಲಿನಿ ಪೈಯವರು ಅರಶಿನ-ಕುಂಕುಮ ನೀಡಿ ಗೌರವಿಸಲಾಯಿತು.
ಬಳಿಕ ಜೈ ಅಮ್ಮ ಅನ್ನಪೂರ್ಣ ಹಾಲ್ಲ್ನಲ್ಲಿ ರಾತ್ರಿ ಭೋಜನೆಯ ವ್ಯವಸ್ಥೆಯನ್ನು ಸೇವಾರೂಪದಲ್ಲಿ ಗಣೇಶ್ ಪೈ, ಸ್ಮಿತಾ ಪೈ ಮತ್ತು ಪರಿವಾರದವರು ತಮ್ಮ ಕಿರಿಯ ಮಗನಾದ ಅನಂತ್ ಪೈಯ ಹುಟ್ಟು ಹಬ್ಬದ ಸಲುವಾಗಿ ಮಾಡಲಾಗಿತ್ತು.