Photo Albums

Photo albums of various activities pertaining to Balaji Seva Samiti

Bhajans

Exclusive collection of the best Indian Devotional songs sung by our community artists

eBooks and Downloads

Treasure trove of research and information

Mahila Vibhaag

Activities from our proactive women’s wing.

Our Festivals and Utsavs

Everything about festivals and utsavs done at Balaji Seva Samiti Vasai

Home » Articles, Featured, Highlight, Our Festivals and Utsavs, Our Saraswath Samaj, Photo Albums, ಅಮ್ಗೆಲೆ ಪರ್ಬೋ ಆನಿ ಸಂಸ್ಕೃತಿ

Satya Maruti Vrata, 17th August 2013

Submitted by on August 19, 2013 – 8:35 PMNo Comment


ವಸಾಯಿ ರೋಡಿನ “ಬಾಲಾಜಿ ಸಭಾಗ್ರಹ ಹಾಗೂ ಪ್ರಾರ್ಥನಾ ಮಂದಿರದಲ್ಲಿ” ಆಗಸ್ಟ್ 17 2013ರಂದು ಶನಿವಾರಾ ನಮ್ಮೆಲ್ಲಾ ಸಮಾಜ ಬಾಂಧವದ ಮಕ್ಕಳ ಆರೋಗ್ಯ, ಶಿಕ್ಷಣ, ಉಜ್ಜ್ವಲ ಭವಿಷ್ಯಕ್ಕಾಗಿ ಹಾಗು ಒಳಿತಿಗಾಗಿ 5 ನೇ ವಾರ್ಷಿಕ “ಶ್ರೀ ಸತ್ಯ ಮಾರುತಿ ವ್ರತ”ವನ್ನು ಸಾಯಂಕಾಲ 6 ರಿಂದ ಆಚರಿಸಲಾಯಿತು.
ವಾಡಾಲದ ಶ್ರೀ ರಾಮ ಮಂದಿರದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಅನಂತ್ ಭಟ್ ಹಾಗು ಅವರ ಸಹಯಕರಾಗಿ ವಸಯಿಯ ವೇದಮೂರ್ತಿ ಶ್ರಿ ಗಿರಿಧರ ಭಟ್ ಮತ್ತು ವೇದಮೂರ್ತಿ ಶ್ರಿಪತಿ ಭಟ್ ಅವರ ನೆತ್ರ್ತ್ವದಲ್ಲಿ ಪೂಜಾ ವಿಧಿಗಳನ್ನು ನಡೆಸಲಾಯಿತು, ಪೂಜೆಗೆ ಶ್ರೀ ಮಂಜೇಶ್ವರ ವಿವೇಕಾನಂದ ಭಕ್ತಾ ಹಾಗು ಅವರ ಧರ್ಮ ಪತಿ ಶ್ರಿಮತಿ ವೀಣಾ ವಿ ಭಕ್ತಾ ಭಾಗವಹಿಸಿದರು. ಪ್ರತಿ ವರ್ಷದಂತೆ ಇಂದು ಕೂಡ ವ್ರತದ ಮಂಟಪ ಮತ್ತು ಶ್ರೀ ದೇವರ ಗರ್ಭಗುಡಿಯನ್ನು ತುಂಬಾ ಅದ್ಭುತ ಹಾಗು ಸುಂದರವಾಗಿ ಅಲಂಕರಿಸಿದವರು ವೇದಮೂರ್ತಿ ಶ್ರೀ ಅನಂತ್ ಭಟ್, ಶ್ರೀ ವಿನಾಯಕ್ ಪೈ ಹಾಗು ಶ್ರೀ ವಿಜಯೇಂದ್ರ ಪ್ರಭು ಅವರು.
ವ್ರತಾನಂತರ ಯುವ ವಿಭಾಗದ ಮಕ್ಕಳಿಂದ 8:30 – 10 ರವರೆಗೆ ಭಜನಾ ಕಾರ್ಯಕ್ರಮ ನೆರವೇರಿತು. ಎಲ್ಲಾ ವಯಸ್ಸಿನ ಮಕ್ಕಳು ತುಂಬಾ ಭಕ್ತಿಯಿಂದ ಶುಶ್ರಾವ್ಯವಾಗಿ ಹಾಡಿ, ಮಂದಿರದಲ್ಲಿ ನೆರೆದಿದ್ದ ಭಕ್ತಾದಿಗಳಿಂದ ಮೆಚ್ಚುಗೆಗೆ ಪಾತ್ರರಾದರು.
ಭಜನಾ ಕಾರ್ಯಕ್ರಮದ ನಂತರ ಮಹಾ ಆರತಿ ಹಾಗೂ ತೀರ್ಥ ಪ್ರಸಾದವನ್ನು ವಿತರಿಸಲಾಯಿತು, ಬಳಿಕ ಜೈ ಅಮ್ಮ ಅನ್ನಪೂರ್ಣ ಹಾಲ್ನಲ್ಲಿ ರಾತ್ರಿ ಭೋಜನೆಯ ವ್ಯವಸ್ಥೆಯನ್ನು ಮಾಡಲಾಗಿತ್ತು.
ಇಂದಿನ ದಿನದ ವಿಶೇಷವೇನೆಂದರೆ ಮಂದಿರದ ಗರ್ಭ ಗುಡಿಯಲ್ಲಿರುವ ಶ್ರೀ ವೆಂಕಟರಮಣ ದೇವರ ಫೋಟೋ ಅಕ್ಕಪಕ್ಕದಲ್ಲಿ ಹಿತ್ತಾಳೆ ಲೇಪಿತ ಎರಡು ಕಂಬಗಳನ್ನು ಶ್ರೀ ದೇವರಿಗೆ ನಮ್ಮದೇ ಬಾಲಾಜಿ ಸೇವಾ ಸಮಿತಿಯವತಿಯಿಂದ ಅರ್ಪಿಸಲಾಯಿತು. ಇದರಿಂದ ಗರ್ಭಗುಡಿಯ ಸೌಂದರ್ಯ ಇನ್ನೂ ಹೆಚ್ಚಿತು.

On Saturday 17th August 2013, 5th Annual “SATYA MARUTI VRATA” was performed at our Balaji Sabhagraha & Prarthana Mandir.
The pooja was preformed under the able guidance of, Vedamoorthy Sri Ananth Bhat, of Sri Ram Mandir Wadala assisted by Vedamoorthy Sri. Giridhar Bhat of Vasai and Vedamoorthy Sri. Sripati Bhat of Vasai, along with pooja couples Sri. M.V.Bhaktha & Smt. Veena V Bhaktha. The pooja was performed for Good Health, Betterment & Bright Future of our Samaj children for them to excel in their Academic Achievements or work.
The “Vrat Mantap” and “Garbhagudi” (Sanctum Sanctorum) was amazingly decorated which was spellbounding on the devotees by none other than Sri Anant Bhatmam, Sri Vinayak Pai & Sri Vijayendra Prabhu themselves.
Members of the Yuva Vibhag rendered bhajan seva in place of usual bhajan from 8:30 PM to 10 PM. Children from all age group sang with utmost devotion and amazing rendition,the devotees who gathered where enthralled by their performance.
The days another highlight was “Balaji Seva Samiti” offered the Lord Venkataramana two brass pillars which were fitted by the side of the Lords photo, which enhanced the beauty of the “Sanctum Sanctorum”.
After bhajan there was Maha Aarati & Teertha Prasad vitharana followed by “Samaradhane” at Jai Amma Annapoorna Hall.

Leave a comment!

Add your comment below, or trackback from your own site. You can also Comments Feed via RSS.

Be nice. Keep it clean. Stay on topic. No spam.

You can use these tags:
<a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

This is a Gravatar-enabled weblog. To get your own globally-recognized-avatar, please register at Gravatar.