Samoohika Choodi Pooja, 3rd August 2014 @ Balaji Mandir, Vasai Road
ಶ್ರಾವಣ ಮಾಸ ಬಂತೆಂದರೆ ಸಾಕು, ನಮ್ಮ ಹಬ್ಬಗಳು ಶುರು ಆಗುವ ತಿಂಗಳು. ಧಾರಾಕಾರವಾಗಿ ಸುರಿಯುವ ಮಳೆಯಲ್ಲಿ ನೆನೆದು, ಗದ್ದೆ, ತೋಟ, ಹಾಗು ರಸ್ತೆಗಳ ಬದಿಯಲ್ಲಿ, ಹರಿದಾಡುವ ಚಿಕ್ಕ ಪುಟ್ಟ ನೀರಿನ ಕಾಲುವೆಗಳಲ್ಲಿ (ತೋಡಿನಲ್ಲಿ) ಕಾಲಿನಿಂದ ನೀರನ್ನು ಚೆಲ್ಲಾಡುತ್ತಾ ಆಡುವ, ನಮ್ಮ ಚಿಕ್ಕಂದಿನ ನೆನಪು ಇಗಲೂ ಮನದಲ್ಲಿ ಹಸಿಯಾಗಿ ಉಳಿದಿದೆ. ಶ್ರಾವಣದಲ್ಲಿ ಪ್ರಕೃತಿ ತನ್ನ ಮಡಿಲಲ್ಲಿ ಬಚ್ಚಿಟ್ಟಿರುವ ಸೌಂದರ್ಯವನ್ನೆಲ್ಲ ಒಮ್ಮೆಗೆ ಹೊರ ಚೆಲ್ಲುವಂತಹ ತಿಂಗಳು, ಎಲ್ಲಿ ನೋಡಿದರಲ್ಲಿ ಬಗೆ ಬಗೆಯ ಹೂವುಗಳು ಗಿಡ, ಮರ,ಬಳ್ಳಿಗಳು, ಮಳೆಯಿಂದಾಗಿ ಬೇಸಿಗೆಯಲ್ಲಿ ಮೆತ್ತಿದ ದೂಳನ್ನು ತೊಳೆದು ಸ್ನಾನಾಮಾಡಿ ನಿಂತಂತೆ ಕಾಣಿಸುತ್ತದೆ. ನಮ್ಮ ಪರಿಸರದಲ್ಲಿ ಒಂದು ಅತಿ ಸುಂದರವಾದ ವಾತಾವರಣವನ್ನು ಸೃಷ್ಟಿಸುತ್ತದೆ.
ಶ್ರಾವಣ ತಿಂಗಳು ನಮ್ಮ ಗೌಡ ಸಾರಸ್ವತ ಬ್ರಾಹ್ಮಣ ಮಹಿಳೆಯರಿಗೆ ಅದು ಕೂಡ ಸುಮಂಗಲೆಯರಿಗೆ ತುಂಬಾ ಮಹತ್ವವಾದ ತಿಂಗಳು, ಯಾಕೆಂದರೆ,
“ಚೂಡಿ ಪೂಜೆ ” ಪ್ರಾರಂಭವಾಗುತ್ತದೆ. ಎಲ್ಲಾ ಮನೆಗಳಲ್ಲಿ ಗ್ರಹಿಣಿಯರು,ತರ ತರಹದ ಹೂವುಗಳನ್ನು ತಂದು ಸಂಗ್ರಹಿಸಿ,ಒಂದೊಂದೆ ಹೂವುಗಳನ್ನು ಜೋಡಿಸಿ ಒಟ್ಟಿಗೆ ಸೇರಿಸಿ “ಚೂಡಿ”ಯನ್ನು ಕಟ್ಟುತ್ತಾರೆ, ಆ ಚೂಡಿಯನ್ನು ತುಳಸಿಗೆ ಅರ್ಪಿಸಿ ಪೂಜಿಸಿ, ಮನೆಯ ಹೊಸ್ತಿಲಲ್ಲಿ ಇಟ್ಟು ಪೂಜಿಸಿ ಆನಂತರ ದೇವರಿಗೆ ಅರ್ಪಿಸಿ ಪೂಜಿಸುತ್ತಾರೆ. ನೈವೇದ್ಯಕ್ಕೆ ಪಂಚಕಜ್ಜಾಯ ಅಥವಾ ಹಣ್ಣುಗಳನ್ನು ಇಡುತ್ತಾರೆ. ಪೂಜಿಸಿದ ಮೊದಲ ಚೂಡಿಯನ್ನು ತಮ್ಮ ತಮ್ಮ, ಹಿರಿಯ ಮುತ್ತೈದೆಯರಿಗೆ ಕೊಟ್ಟು ಆಶೀರ್ವಾದ ಪಡೆಯುತ್ತಾರೆ.ಈ ಚೂಡಿ ವಿನಿಮಯವೇ ಹಿರಿ ಕಿರಿಯರಿಗೆ ಒಂದು ಸಂಭ್ರಮ.
ಚೂಡಿ ಪೂಜೆ ಶ್ರಾವಣ ಮಾಸದಲ್ಲಿ ಬರುವ ಪ್ರತೀ ಶುಕ್ರವಾರ ಹಾಗು ಭಾನುವಾರ ನಡೆಯುತ್ತದೆ. ಇದು ತಲತಲಾಂತರದಿಂದ ನಡೆದು ಬಂದ ಒಂದು ಸುಂದರ ಕ್ರಮ. ಈ ಕ್ರಮ ಗೌಡ ಸಾರಸ್ವತ / ಸಾರಸ್ವತ ಬ್ರಾಹ್ಮಣರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.
ಆಗಸ್ಟ್ 3 ರಂದು ಭಾನುವಾರ ಬಾಲಾಜಿ ಸಭಾಗ್ರಹ ಹಾಗು ಪ್ರಾರ್ಥನಾ ಮಂದಿರದಲ್ಲಿ “ಸಾಮೂಹಿಕ ಚೂಡಿ ಪೂಜೆ”ಯನ್ನು ಆಚರಿಸಲಾಯಿತು. ವೇದಮೂರ್ತಿ ಶ್ರೀ ಗಿರಿಧರ್ ಭಟ್ ಅವರ ಮಾರ್ಗದರ್ಶನದಲ್ಲಿ ಮತ್ತು ಮಹಿಳಾ ಮಂಡಳಿಯ ವರಿಷ್ಠ ಸದಸ್ಯರಾದ ಶ್ರೀಮತಿ ಜಯಶ್ರೀ ರಾಮಕೃಷ್ಣ ಹೆಗ್ಡೆ ಹಾಗು ಶ್ರೀಮತಿ ಶಾಲಿನಿ ಲಕ್ಷ್ಮಣ್ ಪೈ ಅವರಿಂದ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಚೂಡಿ ಪೂಜೆಯನಂತರ ಮಹಿಳಾ ಮಂಡಳಿಯವರಿಂದ ಸುಂದರ ಭಜನಾ ಕಾರ್ಯಕ್ರಮ ನಡೆಯಿತು ಆನಂತರ ಶ್ರೀ ವೆಂಕಟರಮಣ ದೇವರಿಗೆ ಮಹಾ ಆರತಿ ಮಾಡಲಾಯಿತು.
ಕೊನೆಯಲ್ಲಿ ಅನ್ನಸಂತರ್ಪಣೆಯನ್ನು ಬಾಲಾಜಿ ಸೇವಾ ಸಮಿತಿಯ ವತಿಯಿಂದ ಆಯೋಜಿಸಲಾಗಿತ್ತು .
ಶ್ರೀ ಪುರುಶೋಥಮ ಶೆಣೈಯವರು ಈ ಕಾರ್ಯಮವನ್ನು ಸುಂದರವಾಗಿ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
“Shravan” the season of festivals is here, and it was welcomed with utter devotion, at the Balaji Seva Samiti, Vasai Road, with the celebration of the “Annual Samoohika Choodi Puja” at, Jai Amma Annapoorna Hall, by the Mahila Vibhag on Sunday the 3rd August 2014, under the able guidance of Vedamoorthy Sri Giridhar Bhat along with two senior most members of Mahila Vibhag Smt. Jayashree Ramakrishna Hegde and Smt. Shalini Lakshman Pai.
The Tulasi Katte at the Annapoorna Sabhagraha was decorated with beautiful and colourful ‘choodis’ brought by the ladies. Pooja was followed by Bhajan by our Mahila Mandali and thereafter Maha Arati was performed.
The programme ended with “Annasantarpana” which was organised by Balaji Seva Samiti.
The event was beautifully captured by Sri. Purushotham Shenoy.