Photo Albums

Photo albums of various activities pertaining to Balaji Seva Samiti

Bhajans

Exclusive collection of the best Indian Devotional songs sung by our community artists

eBooks and Downloads

Treasure trove of research and information

Mahila Vibhaag

Activities from our proactive women’s wing.

Our Festivals and Utsavs

Everything about festivals and utsavs done at Balaji Seva Samiti Vasai

Home » Articles, eBooks and Downloads, Featured, Highlight, Mahila Vibhaag, Our Festivals and Utsavs, Our Saraswath Samaj, Photo Albums, ಅಮ್ಗೆಲೆ ಪರ್ಬೋ ಆನಿ ಸಂಸ್ಕೃತಿ

Samoohika “CHOODI POOJA” 31/07/2011

Submitted by on July 31, 2011 – 6:40 PMNo Comment


Shravan Maasa- the season of festivals is here, and it was welcomed with utter devotion, at the Balaji Seva Samiti, Vasai Road, with the celebration of the “Annual Samoohik Choodi Puja” at, Jai Amma Annapoorna Hall, by the Mahila Vibhag on Sunday the 31st July 2011, with able bodied support from the men-folk.
The Tulasi Katte at the Annapurna Sabhagriha was decorated with beautiful and colourful ‘choodis’ brought by the ladies.The Choodi Puja was performed under the guidance of Vedamoorthy Shri.Shripati Bhat, followed by rendering of Bhajans by the Mahila Mandali.This was followed by a short but most entertaining ‘Haasya Lahari’ session by Smt.Sandhya Shenoy, who is a professional artiste from Udupi (She is daughter of Smt. Sugandha Manjunath Bhakta & Sri. Someshwar Manjunath Bhakta younger sister of Sri Devendra Bhakta, convenor of our Balaji Seva Samiti).The programme ended with lunch, the highlights of which were ‘Alvati’, ‘Sukke’ and ‘Ambade Nonche’.A superb programme well attended and enjoyed by one and all.
Thanks to Lekshamana Rao for his excellent work behind the camera.

ಶ್ರಾವಣ ಮಾಸ ಬಂತೆಂದರೆ ಸಾಕು, ಯಾಕೆಂದರೆ ನಮ್ಮ ಹಬ್ಬಗಳು ಶುರು ಆಗುವ ತಿಂಗಳು. ಧಾರಾಕಾರವಾಗಿ ಸುರಿಯುವ ಮಳೆಯಲ್ಲಿ ನೆನೆದು, ಗದ್ದೆ, ತೋಟ, ಹಾಗು ರಸ್ತೆಗಳ ಬದಿಯಲ್ಲಿ, ಹರಿದಾಡುವ ಚಿಕ್ಕ ಪುಟ್ಟ ನೀರಿನ “ತೋಡಿನಲ್ಲಿ” ಕಾಲಿನಿಂದ ನೀರನ್ನು ಚೆಲ್ಲಾಡುತ್ತಾ ಆಡುವ, ನಮ್ಮ ಚಿಕ್ಕಂದಿನ ನೆನಪು ಇಗಲೂ ಮನದಲ್ಲಿ ಹಸಿಯಾಗಿ ಉಳಿದಿದೆ. ಶ್ರಾವಣದಲ್ಲಿ ಪ್ರಕೃತಿ ತನ್ನ ಒಡಲಲ್ಲಿ ಬಚ್ಚಿಟ್ಟಿರುವ ಸೌಂದರ್ಯವನ್ನೆಲ್ಲ ಒಮ್ಮೆಗೆ ಹೊರ ಚೆಲ್ಲುವಂತಹ ತಿಂಗಳು, ಎಲ್ಲಿ ನೋಡಿದರಲ್ಲಿ ಬಗೆ ಬಗೆಯ ಗಿಡ, ಮರ,ಬಳ್ಳಿಗಳು, ದೂಳನ್ನು ತೊಳೆದು ಸ್ನಾನಾಮಾಡಿ ನಿಂತಂತೆ ಕಾಣಿಸುತ್ತದೆ, ನಮ್ಮ ಪರಿಸರದಲ್ಲಿ ಒಂದು ಸುಂದರವಾದ ವಾತಾವರಣವನ್ನು ಸೃಷ್ಟಿಸುತ್ತದೆ.
ಶ್ರಾವಣ ತಿಂಗಳು ನಮ್ಮ ಗೌಡ ಸಾರಸ್ವತ ಬ್ರಾಹ್ಮಣ ಮಹಿಳೆಯರಿಗೆ ಅದು ಕೂಡ ಸುಮಂಗಲೆಯರಿಗೆ ತುಂಬಾ ಮಹತ್ವ ಯಾಕೆಂದರೆ, “ಚೂಡಿ ಪೂಜಾ” ಪ್ರಾರಂಭವಾಗುತ್ತದೆ. ಎಲ್ಲಾ ಮನೆಗಳಲ್ಲಿ ಗ್ರಹಿಣಿಯರು,ತರ ತರಹದ ಹೂವುಗಳನ್ನು ತಂದು ಸಂಗ್ರಹಿಸಿ,ಒಂದೊಂದೆ ಹೂವುಗಳನ್ನು ಜೋಡಿಸಿ ಒಟ್ಟಿಗೆ ಸೇರಿಸಿ “ಚೂಡಿ”ಯನ್ನು ಕಟ್ಟುತ್ತಾರೆ, ಆ ಚೂಡಿಯನ್ನು ತುಳಸಿ ಕಟ್ಟೆಯಲ್ಲಿ ಪೂಜಿಸಿ, ಮನೆಯ ಹೊಸ್ತಿಲಲ್ಲಿ ಇತ್ತು ಪೂಜಿಸಿ, ದೇವರಿಗೆ ಅರ್ಪಿಸುತ್ತಾರೆ. ನೈವೇದ್ಯಕ್ಕೆ ಪಂಚಕಜ್ಜಾಯ ಅಥವಾ ಹಣ್ಣುಗಳನ್ನು ಇಡುತ್ತಾರೆ. ಪೂಜಿಸಿದ ಮೊದಲ ಚೂಡಿಯನ್ನು ತಮ್ಮ ತಮ್ಮ, ಹಿರಿಯ ಮುತ್ತೈದೆಯರಿಗೆ ಕೊಟ್ಟು ಆಶೀರ್ವಾದ ಪಡೆಯುತ್ತಾರೆ.ಈ ಚೂಡಿ ವಿನಿಮಯವೇ ಹಿರಿ ಕಿರಿಯರಿಗೆ ಒಂದು ಸಂಭ್ರಮ.
ಚೂಡಿ ಪೂಜೆ ಶ್ರಾವಣ ಮಾಸದಲ್ಲಿ ಬರುವ ಪ್ರತೀ ಶುಕ್ರವಾರ ಹಾಗು ಭಾನುವಾರ ನಡೆಯುತ್ತದೆ. ಇದು ತಲತಲಾಂತರದಿಂದ ನಡೆದು ಬಂದ ಒಂದು ಸುಂದರ ಕ್ರಮ. ಈ ಕ್ರಮ ಗೌಡ ಸಾರಸ್ವತ / ಸಾರಸ್ವತ ಬ್ರಾಹ್ಮಣರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.
ಇಂತಹ ಒಂದು ಸುಂದರವಾದ ಸಾಂಪ್ರದಾಯಿಕ ಚೂಡಿ ಪೂಜಾ ಕಾರ್ಯಕ್ರಮವನ್ನು ವಾಸಾಯಿ ರೋಡಿನ ಮಹಿಳ ಭಾನ್ಧವರು, ಜೈ ಅಮ್ಮ ಅನ್ನಪೂರ್ಣ ಸಭಾಂಗಣದಲ್ಲಿ ವೇದಮೂರ್ತಿ ಶ್ರೀಪತಿ ಭಟ್ ಇವರ ಮಾರ್ಗದರ್ಶನದಲ್ಲಿ ಜುಲೈ ೧೩ನೆ ಭಾನುವಾರದಂದು ಸಂಭ್ರಮದಿಂದ ನಡೆಯಿತು. ಸಾಮೂಹಿಕ ಚೂಡಿಯೊಂದಿಗೆ ನವ ವಧುವಿನ ಹೊಸ ಚೂಡಿಯ ಕಾರ್ಯಕ್ರಮವೂ ನಡೆಯಿತು. ಅನಂತರ ಮಹಿಳ ವ್ರಂದದವರಿಂದ ಸುಮಧುರ ಭಜನ ಕಾರ್ಯಕ್ರಮ ನಡೆಯಿತು. ವಿಶೇಷ ಮನೋರಂಜನ ಕಾರ್ಯಕ್ರಮವಾಗಿ ಉಡುಪಿಯ ಶ್ರೀಮತಿ ಸಂಧ್ಯಾ ಶೆಣೈ ಅವರಿಂದ ಹಾಸ್ಯಾ ಕಾರ್ಯಕ್ರಮ ನಡೆಯಿತು. ಇವರು ಶ್ರೀಯುತ ಸೋಮೇಶ್ವರ ಮಂಜುನಾಥ ಭಕ್ತ ಹಾಗು ಶ್ರೀಮತಿ ಸುಘಂಧಾ ಭಕ್ತ ಇವರ ಸುಪುತ್ರಿಯಾಗಿದ್ದು ಉಡುಪಿಯ ಶ್ರೀಯುತ ವಿಟ್ಟಲದಾಸ ಶೆಣೈಯವರ ಧರ್ಮ ಪತ್ನಿ.ಇವರು ರಾಜ್ಯಾದಂತ ಅಲ್ಲದೆ ಪರರಾಜ್ಯ ಹಾಗು ವಿದೇಶಗಳಲ್ಲೂ ಕಾರ್ಯಕ್ರಮಗಳನ್ನು ನೀಡಿ ಹೆಸರುವಾಸಿಯಾಗಿದ್ದಾರೆ.

ಇವರನ್ನು ಅನೇಕ ಸಂಸ್ಥೆಗಳು ಬಿರುದುಗಳನ್ನಿತ್ತು ಸನ್ಮಾನಿಸಿರುತ್ತಾರೆ, ಇದು ನಮಗೆ ತುಂಬಾ ಸಂತೋಷ ಹಾಗು ಹೆಮ್ಮೆ ತರುವಂತಹ ವಿಷಯ. ಈ ದಿನ ಅವರು ತಮ್ಮ ಜೀವನದಲ್ಲಿ ಆಗಿ ಹೋದ ಸಣ್ಣ ಪುಟ್ಟ ಘಟನೆಯನ್ನು ಆಧಾರವಾಗಿಟ್ಟುಕೊಂಡು ಸಣ್ಣ ಪುಟ್ಟ ಹಾಸ್ಯ ಚಟಾಕಿಯನ್ನು ತಮ್ಮದೇ ಆದ ಸುಂದರ ಶೈಲ್ಯದಲ್ಲಿ ಹಾರಿಸಿ ಜನರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿ ಮನೋರಂಜಿಸಿದರು. ಅಂತ್ಯದಲ್ಲಿ ಬಾಲಾಜಿ ಸೇವಾ ಸಮಿತಿಯ ಸಂಚಾಲಕರಾದ ಶ್ರೀ ಸೋಮೇಶ್ವರ ದೇವೇಂದ್ರ ಭಕ್ತರು, ತಮ್ಮ ಅಪೇಕ್ಷೆ ಮೇರೆಗೆ ಒಪ್ಪಿ ಹಾಸ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟ ತಮ್ಮ ಸ್ವಂತ ತಂಗಿ ಶ್ರೀಮತಿ ಸಂಧ್ಯಾ ಶೆಣೈಯವರಿಗೆ ಧನ್ಯವಾದವನ್ನು ಹೇಳಿದರು. ಬಾಲಾಜಿ ಸೇವಾ ಸಮಿತಿಯವತಿಯಿಂದ ಸಂಧ್ಯರವರನ್ನು ಹಿರಿಯ ಸದಸ್ಯರಾದ ಶ್ರೀ ಕಂಡ್ಲೂರು ವಿಜಯೇಂದ್ರ ಪ್ರಭುಗಳಿಂದ ಸನ್ಮಾನಿಸಲಾಯಿತು. ಮಹಾರತಿಯ ನಂತರ, ಮಹಿಳಾ ವಿಭಾಗದವರು “ಭೂರಿ ಸಮಾರಾಧನೆ” ಯನ್ನು ಆಯೋಜಿಸಿದ್ದರು.

Leave a comment!

Add your comment below, or trackback from your own site. You can also Comments Feed via RSS.

Be nice. Keep it clean. Stay on topic. No spam.

You can use these tags:
<a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

This is a Gravatar-enabled weblog. To get your own globally-recognized-avatar, please register at Gravatar.