Ramnath Damodar Kulavee – Annual Satyanarayana Mahapooja, 12th April 2015
Ramnath Damodar Kulavee, Mumbai organised their annual get-together and Sri Satyanarayana Mahapooja at “Dwaraknath Bhavan”, Sri Ram Mandir, Wadala, on Sunday 12th April 2015.
The Managing Committee had invited Balaji Seva Samiti, Vasai Road (GSB, Samaj Unit), Venkataramana Bhajana Mandali, to perform a Bhajan seva on the ocassion and the Committee also requested to perform this seva every year.
Sri Satyanarayana Mahapooja was performed under the guidance of Vedmoorthy Sri Nithyanand Acharya with couples Goregaon resident Smt & Sri Venkatesh Shanbhag.
The entire audience were thrilled by the devine atmosphere created by the bhajans of Venkataramana Bhajana Mandali, and especially appreciated, with huge round of applause, for the singing of the Mandali’s only female artiste Pallavi Shenoy (daughter of Purushotham Shenoy). Her voice was truly captivating, soothing and melodious. Accompanying on Harmonium was Niddodi Prasad Prabhu, Purushotham Shenoy on Tabla, Ganesh Pai on Pakhwaj.
After bhajan, Maha Arati was performed to Sri Satyanarayan and Lord Ramnath Damodar after arati all the major donors who contributed towards Anna Santarpana, Laddu seva and Secretary Purushotham Shenoy of our Bhajana Mandali were honoured with bouquet by Managing Committee.
The entire success of the event was due to the dedicated involvement of the Managing Committee and its members.
Thanks to Lekshmana Rao, Balaji seva Samiti’s official photographer, for capturing the event.
ಶ್ರೀ ರಾಮನಾಥ ದಾಮೋದರ ಕುಳಾವಿ ಮುಂಬಯಿ ಸಮಿತಿಯ ವಾರ್ಷಿಕೋತ್ಸವ ಮತ್ತು ಶ್ರೀ ಸತ್ಯನಾರಾಯಣ ಮಹಾಪೂಜೆ ಏಪ್ರಿಲ್ 12 ರ೦ದು ರವಿವಾರ ವಾಡಾಲಾ ಶ್ರೀ ರಾಮ ಮಂದಿರದ “ದ್ವಾರಕನಾಥ ಭಾವನ”ದಲ್ಲಿ ವಿಜ್ರಂಭಣೆಯಿಂದ ಜರಗಿತು.
ವೇದಮೂರ್ತಿ ನಿತ್ಯಾನಂದ ಆಚಾರ್ಯ ಅವರ ಮಾರ್ಗದರ್ಶನದಲ್ಲಿ ಗೋರೆಗಾಂವ್ ನಿವಾಸಿ ವೆಂಕಟೇಶ ಎಂ. ಶ್ಯಾನುಭಾಗ್ ದಂಪತಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.
ಇದೆ ಸಂದರ್ಭದಲ್ಲಿ ಮುಂಬಯಿಯ ಖ್ಯಾತ, ಬಾಲಾಜಿ ಸೇವಾ ಸಮಿತಿ, ವಸಾಯಿ ರೋಡಿನ, ಜಿ.ಯೆಸ್.ಬಿ. ಸಮಾಜದ “ಶ್ರೀ ವೆಂಕಟರಮಣ ಭಜನಾ ಮಂಡಳಿ” ಇವರಿಂದ ಭಜನಾ ಕಾರಯಕ್ರಮ ನೆರವೇರಿತು. ಇವರು ಕೊಂಕಣಿ, ಕನ್ನಡ, ಮರಾಠಿ ಮತ್ತು ಹಿಂದಿ ಭಜನೆಗಳನ್ನು ಹಾಡಿ ಅಲ್ಲಿ ನೆರೆದ ನೂರಾರು ಸಭಿಕರ ಮನಸೆಳೆದರು.
ಹಾರ್ಮೋನಿಯಂನಲ್ಲಿ ನಿಡ್ಡೋಡಿ ಪ್ರಸಾದ್ ಪ್ರಭು, ತಬಲಾದಲ್ಲಿ ಪುರುಷೋತಮ್ ಶೆಣೈ, ಪಖ್ವಾಜ್ನಲ್ಲಿ ಗಣೇಶ್ ಪೈ, ತಾಳದಲ್ಲಿ ವಿಜಯೇಂದ್ರ ಪ್ರಭು, ವಿವೇಕಾನ0ದ ಭಕ್ತ ಹಾಗೂ ಸತ್ಯೇಂದ್ರ ನಾಯ್ಕ್ ಸಹಕರಿಸಿದರು,
ತದನಂತರ ಶ್ರೀ ಸತ್ಯನಾರಾಯಣ ಮತ್ತು ಶ್ರೀ ದಾಮೋದರ ದೇವರಿಗೆ ಆರತಿ ಬೆಳಗಿಸಿ ಮತ್ತು ಸೇವಾದಾರರಿಗೆ ಪ್ರಸಾದವಿತರಣೆ ಮಾಡಿಸಲಾಯಿತು, ಪ್ರಸಾದ ರೂಪದಲ್ಲಿ ಸಮಿತಿಯವರು ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಿದರು, ಈ ಪೂಜೆಗೆ ಅನ್ನದಾನ, ಲಡ್ಡು ಸೇವೆ, ಪ್ರಾಯೋಜಿಸಲಾದ ದಾನಿಗಳಿಗೆ, ಸೌಂಡ್ ಸಿಸ್ಟಮ್, ಕೇಟರಿಂಗ್ ಮತ್ತು ಭಜನೆ ಸೇವಾದಾರರಿ0ದ ವೆಂಕಟರಮಣ ಭಜನಾ ಮಂಡಳಿಯ ಕಾರ್ಯಕರ್ತರಾದ ಪುರುಷೋತ್ತಮ ಶೆಣೈಯವರನ್ನು ಸಮಿತಿಯ ವತಿಯಿಂದ ಹೂಗುಚ್ಛ ನೀಡಿ ಸನ್ಮಾನಿಸಲಾಯಿತು,
ಮು0ಬಯಿ ಸಮಿತಿಯ ಅಧ್ಯಕ್ಷ ಜಿ.ಯೆಮ್. ಹೆಗ್ಡೆ, ಉಪಾಧ್ಯಕ್ಷ ಕುತ್ಪಾಡಿ ಜಗದೀಶ್ ಹೆಗ್ಡೆ, ಕಾರ್ಯದರ್ಶಿ ಯೆಸ್. ವಿ. ಶ್ಯಾನ್ ಭಾಗ್ ಸಹ ಕಾರ್ಯದರ್ಶಿ ಹರಿಮಣಿ ಶ್ಯಾನ್ ಭಾಗ್, ಕೋಶಾಧಿಕಾರಿ ಅರವಿಂದ್ ಶೇಣ್ವಿ ಮತ್ತು ಸಮಿತಿಯ ಎಲ್ಲಾ ಸದಸ್ಯರ ಉಸ್ತುವಾರಿಯಲ್ಲಿ ಈ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಿ ಜರಗಿತು,ಈ ಕಾರ್ಯಕ್ರಮಕ್ಕೆ ವಡಾಲ ಶ್ರೀ ರಾಮ ಮಂದಿರದ ಪದಾಧಿಕಾರಿಗಳು ಉಪಸ್ಥಿತರಿದ್ದರು