Sri Puttur Narasimha Nayak @ “SHANTIDHAM”, Vasai Road on 26th July 2012
ಹಲವು ವರ್ಷಗಳಿಂದ ಶ್ರೀಯುತ ಪುತ್ತೂರ್ ನರಸಿಂಹ ನಾಯಕ್ ಅವರು “ವರಮಹಾಲಕ್ಷ್ಮಿಯ” ಪೂಜೆಯ ಪ್ರಯುಕ್ತ ವಸಾಯಿ ರೋಡ್ ಗೆ ಆಗಮಿಸಿ “ಶ್ರೀ ಆದಿ ಶಕ್ತಿಯಮ್ಮ” ದೇವಿಗೆ, ಶ್ರೀ ಆದಿಶಕ್ತಿ ಅಮ್ಮ ಭಕ್ತ ವೃಂದದ “ಶಾಂತಿಧಾಮದಲ್ಲಿ” “ಭಕ್ತಿ ಸುಧಾ” ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಈ ವರ್ಷವೂ ಕೂಡ ದಿನಾಂಕ 26ನೇ ಜೂಲೈ 2012 ರಂದು ಇಲ್ಲಿಗೆ ಆಗಮಿಸಿ ಸಾಯಂಕಾಲ 6ರಿಂದ ರಾತ್ರೆ 9ರವರೆಗೆ “ಭಕ್ತಿ ಸುಧಾ” ಕಾರ್ಯಕ್ರಮವನ್ನು ನೆರವೇರಿಸಿದರು. ತಮ್ಮ ಶುಶ್ರ್ಯಾವ್ಯವಾದ ಕಂಠದಿಂದ ಭಜನೆಗಳನ್ನು ಹಾಡಿ, ಅಲ್ಲಿ ನೆರೆದಿರುವ ಎಲ್ಲಾ ಭಕ್ತ ವೃಂದರಿಗೆ ದೈವ ಭಕ್ತಿಯ ರಸದೌತಣವನ್ನು ಉಣಿಸಿದರು.
ಹಾರ್ಮೋನಿಯಂನಲ್ಲಿ ಶ್ರೀ ಮೂಲ್ಕಿ ಗಣಪತಿ ಪ್ರಭು, ತಬಲಾಗೆ ಶ್ರೀ ರಾಜೇಶ್ ಭಾಗ್ವತ್, ತಾಳಕ್ಕೆ ಶ್ರೀ ದಾಮೋದರ್ ಭಾಗ್ವತ್ ಹಾಗೂ ಶ್ರೀ ರವೀಂದ್ರ ಪ್ರಭು, ಶ್ರೀಯುತ ನರಸಿಂಹ ನಾಯಕರಿಗೆ ಸಾಥಿ ನೀಡಿದರು. ಕಾರ್ಯಕ್ರಮದ ಅಂತ್ಯದಲ್ಲಿ ಇವರೆಲ್ಲರನ್ನು ಶ್ರೀಮತಿ ಲಕ್ಷ್ಮಿ ನರಸಿಂಹ ಪ್ರಭು ಹಾಗೂ ಅವರ ಪತಿ ಶ್ರೀ ನರಸಿಂಹ ಪ್ರಭು ಅವರು ಗೌರವಾನ್ವಿತವಾಗಿ ಸನ್ಮಾನಿಸಲಾಯಿತು.
ಪ್ರಸಾದ ರೂಪದಲ್ಲಿ ಭೂರಿ ಸಮಾರಾಧನೆಯನ್ನೂ ಆಯೋಜಿಸಲಾಗಿತ್ತು.