Photo Albums

Photo albums of various activities pertaining to Balaji Seva Samiti

Bhajans

Exclusive collection of the best Indian Devotional songs sung by our community artists

eBooks and Downloads

Treasure trove of research and information

Mahila Vibhaag

Activities from our proactive women’s wing.

Our Festivals and Utsavs

Everything about festivals and utsavs done at Balaji Seva Samiti Vasai

Home » Articles, Bhajans, Featured, Highlight, Our Festivals and Utsavs, Photo Albums, Project and Progress

“Panchama Pratishta Vardhanti” Day 24th May 2011

Submitted by on May 24, 2011 – 9:37 PMNo Comment

BALAJI SABHAGRIHA & PRARTHANA MANDIR successfully completed 5 year. On this special occassion it was decided earlier through various meetings to offer a Silver Prabhavali & Brass Mantap to Lord Venkataramana. The job was assigned to & undertaken by “AIRODIKARS” of Udupi who are pioneers in this field. They designed the artwork which was approved spontaneously and it took almost two months of their artisans hardwork to complete this and was delivered to us ontime. Sri Sudhakar Dongre was the main artisan who accompanied the consignment and installed the Prabhavali & Mantap.
The days proceedings began with Ganahoma under the guidance of Vedamoorthy Sri Giridhar Bhat with “Smt & Sri Jayanti Ganapathy Shanbhag for ‘Yajmanpan”.
At 9:35 the Silver Prabhavali & Brass Mantap were formerly offerd by BALAJI SEVA SAMITI’S President Smt & Sri Vasant Nayak & Vice President Smt & Sri Satish Kamath.
The highlight for the days programme was “BHAKTI SUDHA” by “BHAJAN SAMRAT SRI KIRAN KAMATH” who also played Harmonium as usual in his impeccable style & SRI U PADMANABH PAI our mentor and Guru, accompanying them on Tabla was well known artist SRI SUSHANT MALLYA and on Taal was SRI RAVINDRA SHENOY. Sri Kiran Kamath was as usual amazing on Harmonium and together with U P Pai kept the audience floating in the “Devine Ambiance” created by their voice and Sushant Mallya on Tabla, I have no words to express, but his Tabla did all the speaking…..!!! and last but not the least Ravindra Shenoy contributed with his Taal, no Bhajan is complete without the sound of Taal, he was innovative by switching taals to change its tone, as per the requirment. All in all, everyone enjoyed every moment which will cherished for a very long time.
ಬಾಲಾಜಿ ಸೇವಾ ಸಮಿತಿಯ “ಪಂಚಮ ಪ್ರತಿಷ್ಟಾ ವರ್ಧಂತಿ” ಉತ್ಸವ ತುಂಬಾ ವಿಜೃಂಭಣೆಯಿಂದ ನಡೆಯಿತು. ಪ್ರಾತಃ ಕಾಲ ೭ ಗಂಟೆಗೆ ಗಣಹೊಮದಿಂದ ಕಾರ್ಯಕ್ರಮವನ್ನು ಆರಂಬಿಸಲಾಯಿತು. ವೇದಮೂರ್ತಿ ಶ್ರೀ ಗಿರಿಧರ್ ಭಟ್ ಅವರ ನೇತ್ರತ್ವದಲ್ಲಿ ಪೂಜಾ ವಿಧಿಗಳನ್ನು ನಡೆಯಿಸಲಾಯಿತು, ಪೂಜೆಗೆ ಶ್ರೀ ಗಣಪತಿ ಶಾನಭಾಗ್ ಹಾಗು ಅವರ ಧರ್ಮ ಪತ್ನಿ ಶ್ರೀಮತಿ ಜಯಂತಿ ಜಿ ಶಾನಭಾಗ್ ಅವರು ಪಾಲ್ಗೊಂಡರು.
ಆ ದಿನದ ಮುಖ್ಯ ಕಾರ್ಯಕ್ರಮ ೯:೩೫ ರಿಂದ ಶ್ರೀ ದೇವರಿಗೆ, ಪಂಚಮ ಪ್ರತಿಷ್ಟಾ ವರ್ಧಂತಿಯ ಸವಿನೆನಪಿಗಾಗಿ ಉಡುಗೊರೆ ರೂಪದಲ್ಲಿ ಬೆಳ್ಳಿಯ ಪ್ರಭಾವಳಿಯನ್ನು ದಾನಿಗಳಾದ ಶ್ರೀಮತಿ ಮತ್ತು ಶ್ರೀ ಗೀತಾ ಗಣಪತಿ ಶಾನುಭಾಗ್, ಶ್ರೀಮತಿ ಮತ್ತು ಶ್ರೀ ವಿಜಯ ತಾರಾನಾಥ್ ಪೈ ಹಾಗು ಶ್ರೀಮತಿ ಮತ್ತು ಶ್ರೀ ವಿದ್ಯಾ ಅನಂದರಾಯ ಪೈಯವರು ಹಸ್ತಾಂತರಿಸಿದರು. ಎಲ್ಲಾ ಸಮಾಜ ಭಾಂದವರ / ಸದಸ್ಸ್ಯರ ಧನ ಸಹಾಯದಿಂದ ಗರ್ಭಗುಡಿಗೆ ನಿರ್ಮಿಸಿದ ಹಿತ್ತಾಳೆಯ ಸುಂದರ ಭವ್ಯ ಮಂಟಪವನ್ನು ಸಮಿತಿಯ ಶ್ರೀಮತಿ ಮಾತ್ತು ಶ್ರೀ ಜ್ಯೋತಿ ಸತೀಶ್ ಕಾಮತ್ ಹಾಗು ಶ್ರೀಮತಿ ಮಾತ್ತು ಶ್ರೀ ವೀಣಾ ವಸಂತ್ ನಾಯಕ್ ಸಮರ್ಪಿಸಿದರು. ಇದೇ ಸಂಧರ್ಭದಲ್ಲಿ ಬೆಳ್ಳಿಯ ನೀಲಾಂಜನ ಆರತಿಯನ್ನು ಶ್ರೀ ಸುನಿಲ್ ಪ್ರಭು ಬೋರಿವಲಿ, ಇನ್ನೊಂದು ಬೆಳ್ಳಿಯ ಆರತಿಯನ್ನು ಶ್ರೀಮತಿ ಮತ್ತು ಶ್ರೀ ಸ್ವಾತಿ ಸದಾಶಿವ ಪ್ರಭು ಅವರು ದೇವರಿಗೆ ಸಮರ್ಪಿಸಿದರು.
ಆನಂತರ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೧ರ ವರೆಗೆ “ಭಕ್ತಿ ಸುಧಾ” ಎಂಬ ಭಜನ ಕಾರ್ಯಕ್ರಮ ನಡೆಯಿತು. ಇದನ್ನು ಹೃತ್ಪೂರ್ವಕವಾಗಿ ನಡೆಸಿಕೊಟ್ಟವರು ನಮ್ಮ ಜಿ.ಎಸ್.ಬಿ. ಸಮಾಜದ ಹೆಸರಾಂತ ಸಂಗೀತಕಾರರಾದ ಶ್ರೀ ಕಿರಣ್ ಕಾಮತ್ ಹಾಗು ಶ್ರೀ ಯು ಪದ್ಮನಾಬ್ ಪೈ. ಶ್ರೀ ಕಿರಣ್ ಕಾಮತರಿಗೆ ಇತ್ತೀಚಿಗೆ ಚೆನ್ನೈಯಲ್ಲಿ ನಡೆದ ಸಂಗೀತ ಸಮಾರಂಭ ಒಂದರಲ್ಲಿ “ಭಜನ ಸಾಮ್ರಾಟ್” ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು. ಅವರಿಗೆ ಸಾಥಿಯಾಗಿ ತಬಲಾದಲ್ಲಿ ಇನ್ನೋರ್ವ ಹೆಸರಾಂತ ಕಲಾವಿದ ಶ್ರೀ ಸುಶಾಂತ್ ಮಲ್ಲ್ಯರವರು ಮತ್ತು ತಾಳದಲ್ಲಿ ಶ್ರೀ ರವಿಂದ್ರ ಶೆಣೈಯವರು ಪಾಲ್ಗೊಂಡರು. ಇವರೆಲ್ಲರೂ ತಮ್ಮ ಅಮೋಘ ಕಂಠದಿಂದ ಸುಶ್ರಾವ್ಯವಾಗಿ ವಿವಿದ ಭಾಷೆಗಳಲ್ಲಿ ಭಜನೆಗಳನ್ನು ಹಾಡಿ ಅಲ್ಲಿ ನೆರೆದಿರುವ ಜನೋಸ್ತೋಮವನ್ನು ರಂಜಿಸಿದರು. ಭಕ್ತಿ ಸುಧಾ ಕಾರ್ಯಕ್ರಮದ ನಂತರ ನಮ್ಮ ಬಾಲಾಜಿ ಸೇವಾ ಸಮಿತಿಯಿಂದ, ಶ್ರೀ ಕಿರಣ್ ಕಾಮತ, ಶ್ರೀ ಪದ್ಮನಾಭ ಪೈ, ಶ್ರೀ ಸುಶಾಂತ್ ಮಲ್ಲ್ಯ ಹಾಗು ಶ್ರೀ ರವಿಂದ್ರ ಶೆಣೈ ಇವರೆಲ್ಲಾರಿಗೂ ಶಾಲು ಹೊದೆಸಿ ಹಾಗು ನೆನಪಿನ ಕಾಣಿಕೆ ರೂಪದಲ್ಲಿ ಒಂದು ಪುಟ್ಟ ಬಾಲಾಜಿಯ ಮೂರ್ತಿಯನ್ನು ಕೊಟ್ಟು ನಮ್ಮದೆ ಸಮಾಜದ ಕೆಲವು ಹಿರಿಯ ವರಿಷ್ಠ ವ್ಯಕ್ತಿಗಳಿಂದ ಸನ್ಮಾನಿಸಲಾಯಿತು. ಇದೆ ಸಂಧರ್ಭದಲ್ಲಿ ಶ್ರೀ ಕಿರಣ್ ಕಾಮತ್ ಹಾಗು ಶ್ರೀ ಯು ಪದ್ಮನಾಭ ಪೈಯವರು ಭಾವುಕರಾಗಿ ನಮ್ಮ ಈ ಮಂಡಳಿಯ ಬಗ್ಗೆ ಹಾಗು ಸಮಾಜ ಸೇವಾ ಮತ್ತು ಇತರ ನಮ್ಮ ಕಾರ್ಯಕ್ರಮಗಳನ್ನು ಹಾಡಿ ಕೊಂಡಾಡಿ ನಮ್ಮ ಈ ಸಮಿತಿಯು ಇನ್ನಷ್ಟು ಎತ್ತರದ ವೈಭವದಿಂದ ಮೆರೆಯಲಿ ಅಂತ ಹಾರೈಸಿದರು.
ಕೊನೆಯದಾಗಿ ಬಾಲಾಜಿ ಸೇವಾ ಸಮಿತಿಯ ಸಂಚಾಲಕರಾದ (Convenor) ಶ್ರೀ ಸೋಮೇಶ್ವರ ದೇವೇಂದ್ರ ಭಕ್ತರು ಒಂದು ಚಿಕ್ಕ ಭಾಷಣದ ಮುಖಾಂತರ ಬಾಲಾಜಿ ಸೇವಾ ಸಮಿತಿಯ ವಿವಿದ ಸಮಾಜ / ಭಜನಾ ಸೇವೆಯ ಕಾರ್ಯಕ್ರಮ ಬಗ್ಗೆ ಸೂಕ್ಷ್ಮವಾಗಿ ವಿವರಿಸಿ, ನಂತರ ಅಲ್ಲಿ ನೆರೆದಿರುವ ಎಲ್ಲಾ ಗಣ್ಯ ವ್ಯಕ್ತಿಗಳು ಹಾಗು “ಭಕ್ತಿ ಸುಧಾ” ಭಜನಾ ಕಾರ್ಯಕ್ರಮ ನಡೆಸಿಕೊಟ್ಟ ಕಿರಣ್ ಕಾಮತ್ ಹಾಗು ಯು ಪಿ ಪೈ ಬಳಗದವಾರಿಗೆ ಮತ್ತು ಉದಾರ ಮನಸ್ಸಿನಿಂದ ತನು ಮನ ಹಾಗು ಧನದಿಂದ ಸಹಾಯವೆತ್ತ ಎಲ್ಲಾ ದಾನಿಗಳಿಗೂ ಹೃತ್ಪೂರ್ವಕವಾಗಿ ಅಭಿನಂದಿಸಿದರು.
ತದನಂತರ ಮಹಾಪೂಜೆ ಹಾಗು ತೀರ್ಥ ಪ್ರಸಾದವನ್ನು ವಿತರಿಸಲಾಯಿತು. ಕೊನೆಯದಾಗಿ ಮಧ್ಯಾಹ್ನ ೩ ಗಂಟೆಯಿಂದ ಭೂರಿ ಸಮಾರಾಧನೆ “ಜೈ ಅಮ್ಮ ಅನ್ನಪೂರ್ಣ” ಹಾಲ್ನಲ್ಲಿ ನಡೆಯಿತು.

Leave a comment!

Add your comment below, or trackback from your own site. You can also Comments Feed via RSS.

Be nice. Keep it clean. Stay on topic. No spam.

You can use these tags:
<a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

This is a Gravatar-enabled weblog. To get your own globally-recognized-avatar, please register at Gravatar.