Narasimha Jayanti Vasai East, 2nd May 2015
ವಸಾಯಿ ರೋಡ್ ಪೂರ್ವದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದವರ ಶ್ರೀ ಆದಿ ನರಸಿಂಹ ದೇವಸ್ಥಾನದಲ್ಲಿ ಮೇ 2ರ೦ದು ಶನಿವಾರ ನರಸಿಂಹ ಜಯಂತಿಯನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು. ವೇದಮೂರ್ತಿ ವಾಸುದೇವ ಭಟ್ ಅವರ ಮಾರ್ಗದರ್ಶನದಲ್ಲಿ ದೇವಸ್ಥಾನದ ಧರ್ಮದರ್ಶಿ ಗೋವರ್ಧನ ತಾರಾನಾಥ್ ನಾಯಕ್ ದಂಪತಿ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು.
ಪ್ರಾತಃ ಕಾಲದಿಂದ ದೇವರ ಪ್ರಾರ್ಥನೆ, ಪಂಚಾಮೃತ ಮತ್ತು ಶಿಯಾಳ ಅಭಿಷೇಕ, ಹವನ ಇತ್ಯಾದಿ ನಡೆಯಿತು.
ಇದೆ ಸಂದರ್ಭದಲ್ಲಿ ಸ್ಥಳೀಯ ಜಿ.ಎಸ್.ಬಿ. ಬಾಲಾಜಿ ಸೇವಾ ಸಮಿತಿಯ ವೆಂಕಟರಮಣ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಜರಗಿತು. ಅವರು ಕೊಂಕಣಿ, ಕನ್ನಡ, ಮರಾಠಿ ಹಾಗೂ ಹಿಂದಿ ಭಜನೆಗಳನ್ನು ಹಾಡಿ ಅಲ್ಲಿ ನೆರೆದ ನೂರಾರು ಭಕ್ತರ ಮನಸೆಳೆದರು. ಹಾರ್ಮೋನಿಯಂನಲ್ಲಿ ನಿಡ್ಡೋಡಿ ಪ್ರಸಾದ್ ಪ್ರಭು, ಪ್ರಕಾಶ್ ಪ್ರಭು, ತಬಲಾದಲ್ಲಿ ಅಮೇಯ ಪೈ ಪಖ್ವಾಜಿನಲ್ಲಿ ಗಣೇಶ್ ಪೈ, ತಾಳದಲ್ಲಿ ವಿಜಯೆಂದ್ರ ಪ್ರಭು ಹಾಗೂ ವಿವೇಕಾನಂದ್ ಭಕ್ತ ಸಹಕರಿಸಿದರು.
ಆನಂತರ ನರಸಿಂಹ ದೇವರಿಗೆ ಮತ್ತು ಇತರ ಪರಿವಾರ ದೇವರಿಗೆ ಆರತಿ ಬೆಳಗಿಸಿ ಪ್ರಸಾದ ವಿತರಣೆ ಮಾಡಲಾಯಿತು. ಶ್ರೀ ಪ್ರಸಾದ ರೂಪದಲ್ಲಿ ನರಸಿಂಹ ದೇವಸ್ಥಾನದ ಸಮಿತಿಯವರಿಂದ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಬಾಲಾಜಿ ಸೇವಾ ಸಮಿತಿಯ ಉಪಾಧ್ಯಕ್ಷರಾದ ಕಟಪಾಡಿ ಗಣೇಶ್ ಕಾಮತ್, ವಿನಾಯಕ್ ಪೈ, ವಿಜಯೆಂದ್ರ ಪ್ರಭು, ಪುರುಷೋತಮ ಕುಡ್ವ, ಕಾರ್ಯದರ್ಶಿ ಪುರುಷೋತಮ ಶೆಣೈ, ಸಹ ಕಾರ್ಯದರ್ಶಿ ವಿವೇಕಾನಂದ ಭಕ್ತ, ರಾಮಚಂದ್ರ ಹೆಗ್ಡೆ, ಸಹ ಕೋಶಾಧಿಕಾರಿ ಶ್ರೀನಿವಾಸ ಪಡಿಯಾರ್, ಗಣೇಶ್ ಪೈ, ಪ್ರಕಾಷ್ ಕಾಮತ್, ಸಹ ಸಂಚಾಲಕ ಶ್ರೀಧರ ಪ್ರಭು, ಚಂದ್ರಕಾಂತ ಕುಡ್ವ, ಪ್ರಬಂಧಕ ಪ್ರಕಾಶ್ ಶೆಣೈ ಉಪಸ್ತಿತರಿದ್ದರು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವಸಾಯಿ ಪರಸರ ಮತ್ತು ಮುಂಬಯಿಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದರು.