“Karthik Punnav” @ Balaji Mandir Vasai Road, 6th November 2014.
ವಸಾಯಿ ರೋಡ್ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ (ಜಿ. ಎಸ್. ಬಿ) ಸಮಾಜ ಇದರ ಬಾಲಾಜಿ ಸಮಿತಿಯ ಜಿ. ವೆಂಕಟರಮಣ ಭಜನಾ ಮಂಡಳಿ ವತಿಯಿಂದ ಬಾಲಾಜಿ ಸಭಾಗೃಹ ಮತ್ತು ಪ್ರಾರ್ಥನಾ ಮಂದಿರದಲ್ಲಿ ನ. 6 ರಂದು ಕಾರ್ತಿಕ ಮಾಸದ ಕಾರ್ತಿಕ ಹುಣ್ಣಿಮೆ ಉತ್ಸವವನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ವೇದಮೂರ್ತಿ ಗಿರಿಧರ ಭಟ್ ಅವರ ಮಾರ್ಗದರ್ಶನದಲ್ಲಿ ಅಂದಿನ ಧಾರ್ಮಿಕ ಕಾರ್ಯಕ್ರಮ ಜರಗಿತು. ಈ ಸಮಯದಲ್ಲಿ ಸಮಿತಿಯ ಸದಸ್ಯರಿಂದ ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅವರಿಗೆ ಹಿಮ್ಮೇಳದಲ್ಲಿ ಮಲ್ಪೆ ವಿಶ್ವನಾಥ ಪೈ ಅವರು ಹಾರ್ಮೋನಿಯಂನಲ್ಲಿ, ಶೇಷ ಕಾಮತ್ ತಬಲಾದಲ್ಲಿ ಸಹಕರಿಸಿದರು.
ಮಹಾ ಆರತಿ ಸಮಯದಲ್ಲಿ ನೆರೆದ ನೂರಾರು ಭಕ್ತರು ವಿಶ್ವರೂಪ ದರ್ಶನವನ್ನು ವೀಕ್ಷಿಸಿದರು. ಈ ಕಾರ್ಯಕ್ರಮಕ್ಕೆ ಮುಂಬಯಿ ಮತ್ತು ವಸಾಯಿ ಪರಿಸರದ ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ಪೂಜೆಯ ಲಾಭವನ್ನು ಪಡೆದರು. ಪ್ರಸಾದ ರೂಪದಲ್ಲಿ ಅಂದಿನ ವಿಶೇಷ ಸೇವಾದಾರಕರಾಗಿ ವೀಣಾ ಮತ್ತು ಮಂಜೇಶ್ವರ ವಿವೇಕಾನಂದ ಭಕ್¤ ಹಾಗೂ ಅನ್ನದಾನ ವ್ಯವಸ್ಥೆಯಲ್ಲಿ ಹೊಸಮಠ ಮನೋಹರ್ ಶೆಣೈ ಅವರು ಸಹಕರಿಸಿದರು.
ಸಮಿತಿಯ ಅಧ್ಯಕ್ಷ ತಾರಾನಾಥ ಪೈ, ಗೌರವಾಧ್ಯಕ್ಷ ವಸಂತ್ ನಾಯಕ್, ಕಾರ್ಯದರ್ಶಿ ಪುರುಶೋತ್ತಮ ಶೆಣೈ, ಕೋಶಾಧಿಕಾರಿ ವೆಂಕಟರಾಯ ಪ್ರಭು, ಸಂಚಾಲಕ ದೇವೇಂದ್ರ ಭಕ್ತ, ಇತರ ಪದಾಧಿಕಾರಿಗಳು, ಮಹಿಳಾ ಪದಾಧಿಕಾರಿಗಳು ಮತ್ತು ಸಮಿತಿಯ ಎಲ್ಲಾ ಸದಸ್ಯರ ಉಸ್ತುವಾರಿಯಲ್ಲಿ ಈ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಿ ಜರಗಿತು. ವಿನಾಯಕ ಪ್ರಭು ಮತ್ತು ವಿಜಯೇಂದ್ರ ಪ್ರಭು ಅವರ ನೇತೃತ್ವದಲ್ಲಿ ಅಲಂಕರಿಸಿದ ಬಾಲಾಜಿ ದೇವರ ಮಂಟಪ ಅಲ್ಲಿ ಸೇರಿದ ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು.
———————————————————————————————————–
“Karthik Poornima” or “Karthik Punnav” was celebrated at our Balaji Mandir, Vasai Road, on Thursday 6th November 2014. Bhajan seva was performed by our “Sree Venkataramana Bhajana Mandali” from 7 PM to 8:30 PM. Mahaaratri was performed under only the natural lights of Oil lamps only (Ponntees and Divlees). All the electrical lights were swithed off to enable the “Vishwaroopa Darshan” of Lord Sri. Venkataramana, it was a Devine Experience which was enjoyed by everyone. The garbhagudi was beautifully decorated by Sri Vinayak Pai, Sri Kandloor Vijayendra Prabhu . The pooja was performed under the able guidance of Vedamoorthy Giridhar Bhat..
After the Bhajan followed the Maha Aarati under only natural lights of diyas and lamps, followed by Teerha Prasad vitarana.
The programme ended with “Samaradhane Seva” at our “Jai Amma Annapoorna Hall” a regular seva by Sevadars, Sri. Hosamata Manohar Shenoy & Family and Sri. Manjeshwar Vivekanand Bhaktha & Family.
This event was captured by Lekshmana Rao.
—————————————————————————————————————