ಕನ್ನಡ ಪಾಠಶಾಲೆ – ಕನ್ನಡ ಕಲಿ ನಲಿ
ಮೂಲತಃ ಕರ್ನಾಟಕದಿಂದ ಬಂದು ವಸಯಿಯಲ್ಲಿ ನೆಲೆಸಿರುವ ನಮ್ಮ ಅನೇಕ ಸಮಾಜ ಭಾಂಧವರ ಒಳಿತಿಗಾಗಿ ಹಾಗು ಅವರ ಇಚ್ಚಾ ಪೂರಕವಾಗಿ, ದಿನಾಂಕ ೧೫ನೆ ಆಗಸ್ಟ್ ೨೦೧೦ ರಂದು, ನಮ್ಮ ಬಾಲಾಜಿ ಸಭಾಗ್ರಹ ಹಾಗು ಪ್ರಾರ್ಥನಾ ಮಂದಿರದಲ್ಲಿ ಒಂದು “ಕನ್ನಡ ಪಾಠಶಾಲೆ”ಯಾನ್ನು ಪ್ರಾರಂಭಿಸಿದೆವು. ಈ ಪಾಠವನ್ನು ಪ್ರಾರಂಭಿಸಿದವರು ನಮ್ಮದೇ ಬಾಲಾಜಿ ಸಭಾಗ್ರಹದ ಸಕ್ರಿಯ ಕಾರ್ಯಕರ್ತರಾದ ಶ್ರೀಯುತ ಶಿರೀಶ್ ಶುಕನಾಥ್ ಆಚಾರ್ಯರು. ನಮ್ಮ ಬಾಲಾಜಿ ಸಭಾಗ್ರಹದ ಪದಾದಿಕಾರಿಗಳು ಇವರಿಗೆ ಅನಂತಾನಂತ ಧನ್ಯವಾದಗಳನ್ನು ಅರ್ಪಿಸುತ್ತಾರೆ. ಇದರ ಲಾಭವನ್ನು ಅನೇಕ ಕಿರಿಯರು, ಮಕ್ಕಳು ಹಾಗು ಹಿರಿಯರು ಪಡೆಯುತ್ತಿದ್ದಾರೆ.
ಕರ್ನಾಟಕದ ರಾಜ್ಯ ಗೀತೆ………….
ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ! ಜಯ ಸುಂದರ ನದಿ ವನಗಳ ನಾಡೇ, ಜಯ ಹೇ ರಸಋಷಿಗಳ ಬೀಡೆ!
ಭೂದೇವಿಯ ಮಕುಟದ ನವಮಣಿಯೆ, ಗಂಧದ ಚಂದದ ಹೊನ್ನಿನ ಗಣಿಯೆ; ರಾಘವ ಮಧುಸೂಧನರವತರಿಸಿದ
ಭಾರತ ಜನನಿಯ ತನುಜಾತೆ ! ಜನನಿಯ ಜೋಗುಳ ವೇದದ ಘೋಶ, ಜನನಿಗೆ ಜೀವವು ನಿನ್ನಾವೇಶ, ಹಸುರಿನ ಗಿರಿಗಳ ಸಾಲೇ, ನಿನ್ನಯ ಕೊರಳಿನ ಮಾಲೆ, ಕಪಿಲ ಪತಂಜಲ ಗೌತಮ ಜಿನನುತ, ಭಾರತ ಜನನಿಯ ತನುಜಾತೆ !
ಶಂಕರ ರಾಮಾನುಜ ವಿದ್ಯಾರಣ್ಯ, ಬಸವೇಶ್ವರ ಮಧ್ವರ ದಿವ್ಯಾರಣ್ಯ ರನ್ನ ಶಡಕ್ಷರಿ ಪೊನ್ನ, ಪಂಪ ಲಕುಮಿಪತಿ ಜನ್ನ ಕುಮಾರವ್ಯಾಸನ ಮಂಗಳ ಧಾಮ, ಕವಿ ಕೋಗಿಲೆಗಳ ಪುಣ್ಯಾರಾಮ ನಾನಕ ರಾಮಾನಂದ ಕಬೀರರ ಭಾರತ ಜನನಿಯ ತನುಜಾತೆ !
ತೈಲಪ ಹೊಯ್ಸಳರಾಳಿದ ನಾಡೇ, ಡಂಕಣ ಜಕಣರ ನಚ್ಚಿನ ಬೀಡೆ ಕೃಷ್ಣ ಶರಾವತಿ ತುಂಗ, ಕಾವೇರಿಯ ವರ ರಂಗ ಚೈತನ್ಯ ಪರಮಹಂಸ ವಿವೇಕರ, ಭಾರತ ಜನನಿಯ ತನುಜಾತೆ !
ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ ಹಿಂದೂ ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರುದ್ಯಾನ ಜನಕನ ಹೋಲುವ ದೊರೆಗಳ ಧಾಮ, ಗಾಯಕ ವೈಣಿಕರಾರಾಮ ಕನ್ನಡ ನುಡಿ ಕುಣಿದಾಡುವ ಗೇಹ, ಕನ್ನಡ ತಾಯಿಯ ಮಕ್ಕಳ ದೇಹ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ…
Tags: ಶಿರಿಶ್ ಆಚಾರ್ಯ ಕನ್ನಡ ಪಾಠ ಶಾಲೆ