Janmashtami 9th August 2012
ಆಗಸ್ಟ್ ೨೦೧೨ ೯ನೇ ತಾರೀಕು ಬ್ರಹಸ್ಪತಿವಾರ, ನಮ್ಮ ಬಾಲಾಜಿ ಮಂದಿರ ಹಾಗು ಪ್ರಾರ್ಥನಾ ಮಂದಿರದಲ್ಲಿ “ಶ್ರೀ ಕೃಷ್ಣ ಜನ್ಮಾಷ್ಟಮಿ”ಯನ್ನು ಆಚರಿಸಲಾಯಿತು. ರಾತ್ರೆ ೮ ರಿಂದ “ತುಳಸಿ ಅರ್ಚನೆ” ಹಾಗು “ಸಹಸ್ರನಾಮ”ದಿಂದ ಕಾರ್ಯಕ್ರಮ ಪ್ರಾರಂಭವಾಯಿತು. ವೇದಮೂರ್ತಿ ಶ್ರೀ ಗಿರಿಧರ್ ಭಟ್ ಅವರ ಮಾರ್ಗ ದರ್ಶನದಲ್ಲಿ ಈ ಕಾರ್ಯಕ್ರಮ ನಡೆಯಿತು. “ತುಳಸಿ ಅರ್ಚನೆ” ಹಾಗು “ಸಹಸ್ರನಾಮ”ಕ್ಕೆ ಸಮಿತಿಯವತಿಯಿಂದ ಶ್ರೀ ತಾರಾನಾಥ್ ಪೈ ಹಾಗು ಅವರ ಧರ್ಮ ಪತ್ನಿ ಶ್ರೀಮತಿ ವಿಜಯ (ವ್ರಂದಾ) ತಾರಾನಾಥ್ ಪೈ ದಂಪತಿಗಳು ಪಾಲ್ಗೊಂಡರು. ಸಹಸ್ರನಾಮ ತುಳಸಿ ಅರ್ಚನೆಯನಂತರ, ಉಪವಾಸ ಮಾಡಿದ ದಂಪತಿಗಳಿಂದ “ಅರ್ಘ್ಯ”ವನ್ನು ನೀಡಲಾಯಿತು. ರಾತ್ರೆ ೧೦ಕ್ಕೆ ಮಹಾರತಿ ಮಾಡಲಾಯಿತು.