“Bhakti Sudha” Thursday, 31st December 2014
ಯಾವುದೇ ಕೆಲಸ ಮಾಡುವ ಮುನ್ನ ದೇವರನ್ನು ಸ್ಮರಿಸಿ ಆರಂಭಿಸುತ್ತೇವೆ ಹಾಗೂ ಆ ಕೆಲಸ ಸಾಕ್ಷಾತ್ಕಾರವಾದ ನಂತರ ಪುನಃ ದೇವೇರಿಗೆ ಕೃತಜ್ನತೆಯನ್ನು ಸಲ್ಲಿಸುತ್ತೇವೆ. ಹಾಗೆಯೇ 2014ನೇ ಇಸವಿಯ ಕೊನೆಯ ದಿನದಂದು ನಮ್ಮ ಬಾಲಾಜಿ ಸಭಾಗ್ರಹ ಮತ್ತು ಪ್ರಾರ್ಥನಾ ಮಂದಿರದಲ್ಲಿ ಒಂದು “ಭಕ್ತಿ ಸುಧಾ” ಕಾರ್ಯಕ್ರಮವನ್ನು ನಮ್ಮ “ವ್ಯಾವಸ್ಥಾಪಕ ಅಧ್ಯಕ್ಷ”ರಾಗಿದ್ದ ದಿ|| ಶ್ರೀ ಮಂಜುನಾಥ್ ಶಿವ್ರಾಯ್ ನಾಯಕ್ ಅವರ “ಪುಣ್ಯತಿಥಿಯ” ಸಂದರ್ಭದಲ್ಲಿ ಅವರ ತಮ್ಮನಾದ ಶ್ರೀ ವಸಂತ್ ನಾಯಕ್ ಅವರು, ವಸಾಯಿ ರೋಡ್ ಜಿ.ಎಸ್.ಬಿ ಸಮಾಜದ, ಶ್ರೀ ಬಾಲಾಜಿ ಮಂದಿರ ಹಾಗು ಪ್ರಾರ್ಥನಾ ಮಂದಿರದಲ್ಲಿ ಆಯೋಜಿಸಿದರು. ರಾತ್ರಿ 9 ರಿಂದ 10 :30 ರ ವರೆಗೆ ಈ ಕಾರ್ಯಕ್ರಮ ನಡೆಯಿತು.
ಪ್ರಖ್ಯಾತ ಗಾಯಕರಾದ ಶ್ರೀ ನರೇಂದ್ರ ಕೊಟುಂಬಿಕರ್ ಮತ್ತು ಅವರ ಶಿಷ್ಯರಾದ ಪಲ್ಲವಿ ಪುರುಶೊಥಮ್ ಶೆಣೈ, ಈ ಭಕ್ತಿ ಸುಧಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮರಾಠಿ, ಕನ್ನಡ, ಹಿಂದಿ ಹಾಗೂ ಕೊಂಕಣಿ ಭಾಷೆಗಳಲ್ಲಿ ಅಭಂಗಗಳನ್ನು ತುಂಬಾ ಭಾವಪೂರಕವಾಗಿ ಮತ್ತು ಸುಶ್ರಾವ್ಯವಾಗಿ ಹಾಡಿ ಅಲ್ಲಿ ನೆರೆದಿರುವ ಭಕ್ತರನ್ನೆಲ್ಲಾ ದೈವ ಭಕ್ತಿಯಲ್ಲಿ ಮುಳುಗಿಸಿದರು. ಅವರಿಗೆ ಸಾತಿಯಾಗಿ ಶ್ರೀ ಮಂದಾರ್ ರೂಪಜಿ ಹಾರ್ಮೋನಿಯಂನಲ್ಲಿ, ಶ್ರೀ ನಿಲೇಶ್ ಗಡೆಕರ್ ತಬಲಾ, ವಿಕಾಸ್ ಡಿ ವಿದ್ರೂಪ್ ಪಖ್ವಾಜ್ ಮತ್ತು ತಾಳದಲ್ಲಿ ಅಶೋಕ್ ಶಿಂದೆ ಸಾಥಿ ನೀಡಿದರು.
ಬಾಲಾಜಿ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ವಸಂತ್ ನಾಯಕರು, ನರೇಂದ್ರ ಕೊಟುಂಬಿಕರ್, ಮಂದಾರ್ ರೂಪ್ಜಿಯವರನ್ನು, ಶ್ರೀ ನಿಲೇಶ್ ಗಡೆಕರ್, ವಿಕಾಸ್ ಡಿ ವಿದ್ರೂಪ್ ಮತ್ತು ಅಶೋಕ್ ಶಿಂದೆಯವರನ್ನು ಸನ್ಮಾನಿಸಿದರು.
ಮಹಾ ಆರತಿಯ ನಂತರ ಭೂರಿ ಸಮಾರಾಧನೆಯನ್ನು ಸೇವಾ ರೂಪದಲ್ಲಿ ಶ್ರೀ ವಸಂತ್ ನಾಯಕ್ ಮತ್ತು ಪರಿವರದವರು ನಡೆಸಿಕೊಟ್ಟರು.
On the occassion of “Punyatithi” of founder president of Balaji Seva Samiti, Vasai Road, Late Sri Manjunath Shivaray Nayak a “BHAKTI SUDHA” was organised by his brother and present Hon. President Sri Vasant Nayak at Balaji Sabhagraha & Prarthana Mandir on 31st December 2014. Program began at 9 PM Bhajan and ended at 10:30 PM.
Reknowned artiste Sri Narendra Kotumbikar and his disciple Pallavi P Shenoy gave a wonderful performance by singing Marathi, Kannada, Konkani and Hindi Abhangs and created a devine ambience, which was enjoyed by all the devotees who were present. Accompanying them were Sri Mandar Roopji on Harmonium, Sri Nilesh Gadekar on Tabla, Sri Vikas D Vidroop on Pakhwaj and Sri Ashok Shinde on Taal
Sri Narendra Kotumbikar, Mandar Roopji, Nilesh Gadekar, Vikas D Vidroop & Pallavi Shenoy were honoured by Sri Vasant Nayak.
After Maharati “Bhoori Samaradhane” was organised a Seva by Sri Vasant Nayak.