Bhakti Sudha at Saraswat Cultural & Recreational Center,N.L.Complex, Dahisar
ದಹಿಸರ್ ಪೂರ್ವದ “ಏನ್ ಎಲ್ ಕಾಂಪ್ಲೆಕ್ಸ್” ನ ಸಾರಸ್ವತ್ ಕಲ್ಚರಲ್ ಮತ್ತು ರಿಕ್ರಿಯೇಶನ್ ಸೆಂಟರ್ ಮೈದಾನದಲ್ಲಿ, ಗೌಡ ಬ್ರಾಹ್ಮಣ ಸಭಾ ದಹಿಸರ್-ಬೊರಿವಲಿ, ಇವರ 7 ನೆ ವಾರ್ಷಿಕ ನವರಾತ್ರಿ ಉತ್ಸವವು ಅಕ್ಟೋಬರ್ 1 ರಂದು ವಿವಿಧ ಧಾರ್ಮಿಕ,ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ವಸಾಯಿ ರೋಡಿನ “ಬಾಲಾಜಿ ಸೇವಾ ಸಮಿತಿ”ಯ “ಶ್ರೀ ವೆಂಕಟರಮಣ ಭಜನಾ ಮಂಡಳಿ”ಯ ಸದಸ್ಯರಾದ ಅಮೆಯ ಗಣೇಶ್ ಪೈ ಮತ್ತು ಪಲ್ಲವಿ ಪುರುಶೋಥಮ ಶೆಣೈ ಅವರ “ಭಕ್ತಿ ಸುಧಾ” ಕಾರ್ಯಕ್ರಮವನ್ನು ಇದೇ ಸಂದರ್ಭದಲ್ಲಿ ಆಯೋಜಿಸಲಾಗಿತ್ತು. ಅವರು ಮರಾಠಿ, ಕನ್ನಡ, ಕೊಂಕಣಿ, ಹಿಂದಿ ಭಾಷೆಗಳಲ್ಲ್ಲಿ ಭಾವ ಗೀತೆ, ಭಕ್ತಿ ಗೀತೆಗಳನ್ನು ಹಾಡಿ ನೆರೆದ ಸಭಿಕರ ಮನಸೆಳೆದರು.
ಹಿಮ್ಮೇಳದಲ್ಲಿ ಹಾರ್ಮೋನಿಯಂ ನುಡಿಸಿದವರು ಶ್ರೀ ಹೇಮಂತ್ ಹೆಮ್ಮಾಡಿ, ತಬಲಾ ಬಾರಿಸಿದವರು ಆರಾಧ್ಯ ಸಾವಂತ್, ಪಖ್ವಾಜ್ ನಲ್ಲಿ ಗಣೇಶ್ ಲಕ್ಷ್ಮಣ್ ಪೈ ಮತ್ತು ತಾಳದಲ್ಲಿ ಅನಂತ್ ಗಣೇಶ್ ಪೈ ಸಹಕರಿಸಿದರು. ಕಾರ್ಯಕ್ರಮವನ್ನು ಸ್ಮಿತಾ ಗಣೇಶ್ ಪೈಯವರು ನಿರೂಪಿಸಿದರು. ಕಲಾವಿದರನ್ನು ಗೌರವಿಸಲಾಯಿತು. ಈ ಕಾರ್ಯಕ್ರಮವನ್ನು ಆಯೋಜಿಸಲು ಸಮಿತಿಯ ಪದಾಧಿಕಾರಿಗಳು, ಸದಸ್ಯರು ಮತ್ತು ಭಕ್ತಾದಿಗಳು ಸಹಕರಿಸಿದರು.
The 7th Annniversary of Dahisar-Borivali GSB Sabha was celebrated at Saraswat Cultural & Recreatinal Center, N.L. Complex, Dahisar, Monday 1st October 2014.
On this occassion they organised a “Bhakti Sudha” program and between 3PM to 5PM, two upcomming artistes from our Sri Venkataramana Bhajana Mandali of “Balaji Seva Samiti” Vasai Road, Pallavi Purushtham Shenoy and Ameya Ganesh Pai, gave a splendid performance, by singing a variety of Folk and Devotional songs. They sang in a variety of languages like, Kannada, Konkani, Marathi and Hindi and enthralled the gathered audience.
They were accompanied by Hemant Hemmadi on Harmonium, Aradhya Sawant on Tabla, Ganesh Laxman Pai on Pakhwaz and Anant Ganesh Pai on Taal. The event was hosted by Smita Ganesh Pai.
At the end of their program, the artists were honoured.