“Bhakti Sudha” 31st December 2012
ವಸಾಯಿರೋಡ್ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್ಬಿ) ಸಮಾಜಬಾಂಧವರ ಬಾಲಾಜಿ ಸಭಾಗೃಹ ಮತ್ತು ಪ್ರಾರ್ಥನಾ ಮಂದಿರದಲ್ಲಿ ನಗರದ ಗಾಯಕ ನರೇಂದ್ರ ಕುಟುಂಬಿಕರ್ಮತ್ತು ತಂಡದವರಿಂದ ಭಕ್ತಿ ಸುಧಾ ಕಾರ್ಯಕ್ರಮವು ಡಿ. 31 ರಂದು ಜರಗಿತು. ಸಮಿತಿಯ ಮಾಜಿ ಅಧ್ಯಕ್ಷದಿ| ಮಂಜುನಾಥ ಶಿವರಾಯ ನಾಯಕ್ ಅವರ ಸ್ಮರಣಾರ್ಥ ಈ ಕಾರ್ಯಕ್ರಮವನ್ನುಆಯೋಜಿಸಲಾಗಿತ್ತು.
ನರೇಂದ್ರ ಕುಟುಂಬಿಕರ್ ಅವರ ಶಿಷ್ಯೆಯಂದಿರಾದ ಸಚಿನ್ ಮೋರೆ, ಪ್ರಸಾದ್ ರಾನಡೆ, ಅಮೇಯ ಗಣೇಶ್ ಪೈ ಮತ್ತು ಪಲ್ಲವಿ ಪುರುಷೋತ್ತಮ ಶೆಣೈ ಅವರು ಮರಾಠಿ, ಕನ್ನಡ, ಹಿಂದಿ, ಕೊಂಕಣಿ ಗೀತೆಗಳನ್ನು ಹಾಡಿ ನೆರೆದ ಭಕ್ತಾದಿಗಳನ್ನುರಂಜಿಸಿದರು.
ಹಿಮ್ಮೇಳದಲ್ಲಿ ಹಾರ್ಮೋನಿಯಂನಲ್ಲಿ ಮಂದಾರ ರೂಪಜೀ, ತಬಲಾದಲ್ಲಿ ನಿಲೇಶ್ಕಡಕರ್, ಪಖ್ವಾಜ್ನಲ್ಲಿ ಮಹೇಶ್ ಶೆಟೆÂ ಅವರು ಸಾಥ್ ನೀಡಿದರು. ಕಾರ್ಯಕ್ರಮವನ್ನು ಮೋಹಿನಿಚಾರಿ ಗಡೆಕರ್ ಅವರು ನಿರೂಪಿಸಿದರು. ಇದೇ ಸಂದರ್ಭದಲ್ಲಿ ನರೇಂದ್ರ ಕುಟುಂಬಿಕರ್ ಮತ್ತು ಅವರಶಿಷ್ಯಂದಿಯರನ್ನು ಸಮಿತಿಯ ಪರವಾಗಿ ಗೌರವಾಧ್ಯಕ್ಷ ವಸಂತ ಶಿವರಾಯ ನಾಯಕ್ ಮತ್ತು ಸಮಿತಿಯಪದಾಧಿಕಾರಿಗಳು ಸಮ್ಮಾನಿಸಿ ಶುಭಹಾರೈಸಿದರು.
ಧಾರ್ಮಿಕ ಕಾರ್ಯಕ್ರಮವಾಗಿ ಶ್ರೀ ವೆಂಕಟರಮಣಮತ್ತು ಇತರ ಪರಿವಾರ ದೇವರಿಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು.ಅನ್ನಸಂತರ್ಪಣೆಯು ವಸಂತ ನಾಯಕ್ ಅವರ ಪ್ರಾಯೋಜಕತ್ವದಲ್ಲಿ ನಡೆಯಿತು.