Balaji seva Samiti, G.S.B. Sabha Unit, Vasai Road’s day out
ವಸಾಯಿ ರೋಡ್ ಜಿ.ಎಸ್.ಬಿ. ಬಾಲಾಜಿ ಸೇವಾ ಸಮಿತಿಯವರ ವಿಹಾರಕೂಟ ಇತ್ತೀಚೆಗೆ ವಜ್ರೆàಶ್ವರಿ ಬಳಿಯ ಕಲ್ಯಾಣ್ ರಿಸಾರ್ಟ್ನಲ್ಲಿ ನಡೆಯಿತು.
ಯುವ ವಿಭಾಗದ ಅಧ್ಯಕ್ಷ ಸಚಿನ್ ಪಡಿಯಾರ್ ಕ್ರಿಕೆಟ್, ಆಟೋಟ ಮತ್ತು ಮಹಿಳಾ ವಿಭಾಗದ ಕಾರ್ಯದರ್ಶಿ ಸ್ಮಿತಾ ಗಣೇಶ್ ಪೈ ಅಂತ್ಯಾಕ್ಷರಿ, ಸಂಗೀತ ಕುರ್ಚಿ, ಹೌಸಿ ಹೌಸಿ ಇತ್ಯಾದಿ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿದರು. ವಿಜೇತರಿಗೆ ಬಹುಮಾನ ವಿತರಿಸಿ ಅಭಿನಂದಿಸಲಾಯಿತು.
ಸಮಿತಿಯ ಹಿರಿಯ-ಕಿರಿಯರು ಸೇರಿದಂತೆ ಸುಮಾರು 70 ಮಂದಿ ಸದಸ್ಯರು ಪರಿವಾರ ಸಮೇತ ವಿಹಾರಕೂಟದಲ್ಲಿ ಭಾಗವಹಿಸಿದ್ದರು. ಸಮಿತಿಯ ಕಾರ್ಯದರ್ಶಿ ಪುರುಷೋತ್ತಮ ಶೆಣೈ ವಿಹಾರಕೂಟದಲ್ಲಿ ಭಾಗವಹಿಸಿದ ಯುವ ವಿಭಾಗ, ಮಹಿಳಾ ವಿಭಾಗದ ಸದಸ್ಯರೂ ಸೇರಿದಂತೆ ಎಲ್ಲರನ್ನು ಪ್ರಶಂಸಿ ಧನ್ಯವಾದ ಸಲ್ಲಿಸಿದರು.