Ashad Ekadashi @ Sri Ram Mandir, Wadala 11/07/2011
ಆಷಾಡ ಏಕಾದಶಿಯ ದಿನ ವಡಾಲದಲ್ಲಿರುವ ರಾಮ ಮಂದಿರಕ್ಕೆ ಹೋಗುವುದು ಒಂದು ಸಾಹಸವೇ ಸರಿ, ಕಿಕ್ಕಿರಿದ ಜನಸಂದಣಿಯಲ್ಲಿ ಜನರ ನೂಕುನುಗ್ಗಲನ್ನು ಸಹಿಸಿ ರಾಮ ಮಂದಿರಕ್ಕೆ ತಲುಪಿದಿರೆಂದರೆ ಒಂದು ಯುದ್ದವನ್ನು ಗೆದ್ದಷ್ಟು ಖುಷಿಯನ್ನು ನೀಡುತ್ತದೆ.
ಈ ವರ್ಷವೂ ಕೂಡ ಬಾಲಾಜಿ ಸೇವಾ ಸಮಿತಿಯ ವೆಂಕಟರಮಣ ಭಜನಾ ಮಂಡಳಿ, ರಾಮ ಮಂದಿರದ ಪಕ್ಕದಲ್ಲಿ ಮಂಡಿಸಿದ ವಿಠಲ ರಖುಮಾಯಿ ದೇವರ ಮುಂದೆ ಭಜನಾ ಸೇವೆಯನ್ನು ಸಲ್ಲಿಸಿದರು. ಸಾಯಂಕಾಲ ೮ ಘಂಟೆಗೆ ಪ್ರಾರಂಭವಾದ ಕಾರ್ಯಕ್ರಮ ೧೦ ಘಂಟೆಗೆ ಮುಗಿಯಿತು.
ನಮ್ಮ ಭಾಗ್ಯವೇನೋ ಎನ್ನುವಂತೆ ಈ ಶುಭ ದಿನದಂದು ಪರ್ತಗಾಳಿ ಜೀವೋತ್ತಮ ಮಠದ ಅಧಿಪತಿ ಶ್ರೀಮದ್ ವಿಧ್ಯಧಿರಾಜ ತೀರ್ಥ ಸ್ವಾಮಿಜಿಯವರು ನಮ್ಮ ಭಜನಾ ಮಂಡಳಿಯನ್ನು, ಬಾಲಾಜಿ ಸೇವಾ ಸಮಿತಿಯ ಸದಸ್ಯರನ್ನು ಹಾಗು ವಸಾಯಿ ರೋಡ್ ನಿಂದ ಬಂದ ಎಲ್ಲಾ ಭಕ್ತ ವ್ರಂದರಿಗೆ ಫಲ ಗಂಧ ಪ್ರಸಾದವನ್ನಿತ್ತು ಆಶೀರ್ವದಿಸಿದರು.
Balaji Seva Samiti’s Venkataramana Bhajana Mandali rendered Bhajana Seva at Ram Mandir, Wadala between 8 – 10 PM, on Monday 11th July 2011, on account of Ashad Ekadashi.
Highlight of the day was our Mandali, Balaji Seva Samiti’s members and to all the people who were present from Vasai Road,were blessed by Parama Poojya Srimad Vidhyadhiraja Teertha Swamiji Mathadhipati of Parthagali Jeevotham Gokarn Mutt Saunsthan, Goa.