Annual Function & Satyanarayan Pooja of Sri Damodar Kulavi, Mumbai
ಶ್ರೀ ರಾಮನಾಥ ದಾಮೋದರ ಕುಳಾವಿ ಮುಂಬಯಿ ಸಮಿತಿಯ ವಾರ್ಷಿಕೋತ್ಸವ ಮತ್ತು ಶ್ರೀ ಸತ್ಯನಾರಾಯಣ ಮಹಾಪೂಜೆ ಏಪ್ರಿಲ್ 20 ರಂದು ವಡಾಲ ಶ್ರೀ ರಾಮ ಮಂದಿರದ “ದ್ವಾರಕನಾಥ ಭವನ”ದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ವೇದಮೂರ್ತಿ ಶ್ರೀ ಅನಂತ್ ಭಟ್ ಅವರ ಮಾರ್ಗದರ್ಶನದಲ್ಲಿ ಸಂದೀಪ್ ಶಾನುಭಾಗ್ ದಂಪತಿಗಳು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮುಂಬಯಿ ಜಿ.ಎಸ್.ಬಿ. “ಬಾಲಾಜಿ ಸೇವಾ ಸಮಿತಿಯ” ಶ್ರೀ ವೆಂಕಟರಮಣ ಭಜನಾ ಮಂಡಳಿ” ವಸಾಯಿ ರೋಡ್ ಅವರಿಂದ ಭಜನೆ ಸೇವೆ ನಡೆಯಿತು. ಕಲಾವಿದರು ಕೊಂಕಣಿ, ಕನ್ನಡ, ಮರಾಠಿ ಮತ್ತು ಹಿಂದಿ ಭಜನೆಗಳನ್ನು ಹಾದಿ ಅಲ್ಲಿ ನೆರೆದ ಅನೇಕ ಭಕ್ತಾದಿಗಳ ಮನಸೆಳೆದರು.
ಹಿಮ್ಮೇಳದಲ್ಲಿ ಹಾರ್ಮೋನಿಯಂನಲ್ಲಿ ಮಲ್ಪೆ ವಿಶ್ವನಾಥ ಪೈ, ತಬಲಾದಲ್ಲಿ ಅಮೆಯ ಪೈ ಹಾಗು ವಿನಾಯಕ ಪೈ, ಪಖ್ವಾಜ್ನಲ್ಲಿ ಗಣೇಶ್ ಪೈ, ತಾಳದಲ್ಲಿ ವಿಜಯೇಂದ್ರ ಪ್ರಭು, ವಿವೇಕಾನಂದ ಭಕ್ತ ಮತ್ತು ಸತ್ಯೇಂದ್ರ ನಾಯಕ್ ಸಹಕರಿಸಿದರು.
ಕಾರ್ಯದರ್ಶಿ ಎಸ್.ಎ. ಶಾನುಭಾಗ್ ವರದಿ ವಾಚಿಸಿದರು, ಜತೆ ಕಾರ್ಯದರ್ಶಿ ಹರಿಮಣಿ ಶ್ಯಾನ್ ಭಾಗ್ ಸಂಸ್ಥೆಯ ಸಾಧನೆಗಳನ್ನು ವಿವರಿಸಿದರು.
ಅಧ್ಯಕ್ಷ ಜಿ.ಎಂ.ಹೆಗ್ಡೆ, ಉಪಾಧ್ಯಕ್ಷ ಕುತ್ಪಾಡಿ ಜಗದೀಶ್ ಹೆಗ್ಡೆ, ಕೋಶಾಧಿಕಾರಿ ಅರವಿಂದ ಶೇಣವಿ ಹಾಗು ಕಾರ್ಯಕಾರಿ ಸಮಿತಿಯ ಸದಸ್ಯರಾದ ಮಾಧವ್ ಹೆಗ್ಡೆ, ಲಕ್ಷ್ಮೀನಾರಾಯಣ ಶಾನುಭಾಗ್, ಮಾಯಾ ಆಚಾರ್ಯ ಮತ್ತಿತರರು ಉಪಸ್ತಿತರಿದ್ದರು. ಕು. ಓಂಕಾರ್ ಹೆಗ್ಡೆ ಅವರಿಂದ ಗಣೇಶ ನೃತ್ಯ ನಡೆಯಿತು.
ಅನಂತರ ಪೂಜೆಯ ಪ್ರಸಾದ ವಿತರಣೆ ನಡೆಯಿತು. ಪ್ರಸಾದ ರೂಪದಲ್ಲಿ ಸಮಿತಿಯವರಿಂದ “ಅನ್ನಸಂತರ್ಪಣೆಯ” ವ್ಯವಸ್ತೆಯನ್ನು ಆಯೋಜಿಸಲಾಗಿತ್ತು. ಕಾರ್ಯಕಾರಿ ಸಮಿತಿಯ ಸದಸ್ಯರು, ಸಮಾಜ ಬಾಂಧವರು, ಭಕ್ತಾದಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
The Annual Get-Together function and Sri Satyanarayan Mahapooja was held at Wadala, Sri Ram Mandir’s “Dwaraknath Bhavan” on 20th April 2014. Under the able guidance of Vedamoorthy Sri Anant Bhat pooja rituals were performed by Smt. & Sri.Sandeep Shanbhag.
On this occasion Mumbai’s G.S.B. Samaj, Vasai Road Units, Sri Venkataramana Bhajana Mandali rendered a bhajan seva. Artists created a divine atmosphere by singing bhajans in Konkani, Kannada, Marathi and Hindi and enthralled all devotees gathered.
The accompaniment on instruments were Malpe Vishwanath Pai on Harmonium, Ameya Pai & Vinayak Pai on Tabla, Ganesh Pai on Pakhwaz and Vijayendra Prabhu, M. Vivekanand Bhaktha and Satyendra Nayak on Taal.
Secretary S.A.Shanubhag delivered the annual report and Jt. Secretary Harimani Shanubhag appraised the audience about the Organizations achievements.
President G.M.Hegde, Vice President Kuthpady Jagadish Hegde, Treasurer Aravind Shenvi and Working Committee Members Madhav Hegde, Lakshminarayan Shanubhag, Maya Acharya were present. Omkar Hegde gave a dance performance.
The Samiti, in the form of Prasad made arrangements for “Annasantarpana”. All the members of the committee, Samaj Bandhav’s and Devotees toiled towards the success of this Annual Function.