Photo Albums

Photo albums of various activities pertaining to Balaji Seva Samiti

Bhajans

Exclusive collection of the best Indian Devotional songs sung by our community artists

eBooks and Downloads

Treasure trove of research and information

Mahila Vibhaag

Activities from our proactive women’s wing.

Our Festivals and Utsavs

Everything about festivals and utsavs done at Balaji Seva Samiti Vasai

Home » Articles, Featured, Highlight, Our Saraswath Samaj, Photo Albums, Project and Progress

Adoption of a Zilla Parishad School by Balaji Seva Samiti, Vasai Road on, 15th August 2107.

Submitted by on September 6, 2017 – 11:10 AMNo Comment

ವಸಾಯಿರೋಡ್ ಜಿ. ಸ್. ಬಿ.ಯವರ ಬಾಲಾಜಿ ಸೇವಾ ಸಮಿತಿಯವರಿಂದ ಈ ವರ್ಷದ ಸ್ವಾತಂತ್ರ ದಿನಾಚರಣೆಯ ಶುಭ ದಿನದಂದು ವಸಯಿ ಶಹರದ ದಿವಾನ್ ಮಾನ್ ನಲ್ಲಿರುವ ಜಿಲ್ಲಾ ಪರಿಷದ್ ಶಾಲೆಯನ್ನು ದತ್ತು ಸ್ವೀಕರಿಸಲಾಯಿತು. ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸುತ್ತಾ ಬಂದಿರುವ ಈ ವಸಯಿ ಜಿ.ಸ್.ಬಿ.ಯವರ ಬಾಲಾಜಿ ಸೇವಾ ಸಮಿತಿಯು ಸಮಾಜಪರ ಕಾರ್ಯಗಳಲ್ಲಿ ಕೂಡ ಜವಾಬ್ದಾರಿಯನ್ನು ಹೊಂದುತ್ತಾ, ಈಗ ಸುಮಾರು 80 ಆದಿವಾಸಿ ವಿಧ್ಯಾರ್ಥಿಗಳು ವಿದ್ದ್ಯಾರ್ಚನೆ ಮಾಡುತ್ತಿರುವ ಈ ಶಾಲೆಯನ್ನು ದತ್ತು ಸ್ವೀಕರಿಸಿ, ತಮ್ಮ ಸೇವೆಯ ಮೊದಲ ಹಂತದಲ್ಲಿ ಶಾಲೆಯ ವಿಧ್ಯಾರ್ಥಿಗಳಿಗೆ ಒಂದು ಜೋಡಿ ಸಮವಸ್ತ್ರ ಹಾಗೂ ಶಾಲೆಗೆ ಅಗತ್ಯವಿರುವ ವಸ್ತುಗಳು – ಅಂದರೆ 2 ಕಪಾಟು, 7 ಗೋಡೆ ಗಡಿಯಾರಗಳು, ಒಂದು ಐ-ಪ್ಯಾಡ್, ಹಾಗೂ ಎಲ್ಲಾ ವಿಧ್ಯಾರ್ಥಿಗಳಿಗೆ ಬಿಸ್ಕತ್ತು ,ಎಪ್ಪಲ್, ತಂಪು ಪಾನಿಯ ಮತ್ತು ಸಮೋಸಾದೊಂದಿಗೆ ಖಾದ್ಯ ಪೊಟ್ಟಣಗಳನ್ನು ನೀಡಿ ಸಹಕರಿಸಿದರು. ಕಾರ್ಯಕ್ರಮದ ಅಂಗವಾಗಿ ಸಮಿತಿಯ ಅಧ್ಯಕ್ಷರಾದ ಶ್ರೀ ತಾರಾನಾಥ ಪೈಯವರಿಂದ ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ಮಾಡಲಾಯಿತು. ನಂತರ ವಿಧ್ಯಾರ್ಥಿಗಳು, ನೆರೆದ ಸಮಿತಿಯ ಸದಸ್ಯರು ಹಾಗೂ ಸಾರ್ವಜನಿಕರಿಂದ ಸ್ವಚ್ಚ ಭಾರತ ನಿರ್ಮಾಣದ ಬಗ್ಗೆ ಪ್ರತಿಜ್ನೆಯನ್ನು ಸ್ವೀಕರಿಸಲಾಯಿತು. ಧ್ವಜ ವಂದನೆಯನಂತರ ಸಮಿತಿಯ ವತಿಯಿಂದ 2 ಕಪಾಟನ್ನು ಸಮಿತಿಯ ಉಪಾಧ್ಯಕ್ಷರಾದ ಶ್ರೀ ಮೂಲ್ಕಿ ಕ್ರಷ್ಣ ಕಾಮತ್ ರವರ ಅಮ್ರತ ಹಸ್ತದಿಂದ ಶಾಲೆಯ ಮುಖ್ಯೊಪಾಧ್ಯಾಯಿನಿಯವರಿಗೆ ಹಸ್ತಾಂತರಿಸಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನವನ್ನು ಸ್ಥಳೀಯ ನಗರ ಸೇವಕರಾದ ಶ್ರೀ ಕಲ್ಪೇಶ್ ನಾರಾಯಣ ಮಾಂಣ್ಕರ್ ವಹಿಸಿದರು. ವೇದಿಕೆಯಲ್ಲಿ ಬಾಲಾಜಿ ಸೇವಾಸಮಿತಿಯ ಅಧ್ಯಕ್ಷರಾದ ಶ್ರೀ ತಾರಾನಾಥ ಪೈಯವರು ಮುಖ್ಯ ಅತಿಥಿಗಳಾಗಿ ಹಾಗೂ ಸಮಿತಿಯ ಸಂಚಾಲಕ ಶ್ರೀ ದೇವೇಂದ್ರ ಭಕ್ತ ಹಾಗೂ ಶಿಕ್ಕ್ಷಣ ವಿಭಾಗದ ಮಾಣಿಕ್ಪುರ ಕೆಂದ್ರದ ಪ್ರಮುಖರಾದ ಶ್ರೀಮತಿ ಸುನಂದಾ ನರೆಂದ್ರ ಚೌಧರಿ ಹಾಗೂ ಮಾಜಿ ನಗರ ಸೇವಕಿ ಶ್ರೀಮತಿ ಗೀತಾ ಕಾಂತಿ ಮಾಂಣ್ಕರ್ ಉಪಸ್ಥಿತರಿದ್ದರು. ಕಾರ್ಯಕ್ರಮವು ಶಾಲಾ ವಿಧ್ಯಾರ್ಥಿ ವಿಧ್ಯಾರ್ಥಿನಿಯವರಿಂದ ಸ್ವಾಗತ ಭಾಷಣ ಹಾಗೂ ಇತರ ವಿವಿದ ಚಟುವಟಿಕೆಗಳ ಪ್ರದರ್ಶನ ಮತ್ತು ಧನ್ಯವಾದ ಅರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ಕೇಂದ್ರ ಪ್ರಮುಖರಾದ ಶ್ರೀಮತಿ ಸುನಂದಾ ಚೌಧರಿಯವರು ತಮ್ಮ ಭಾಷಣದಲ್ಲಿ ಈ ಶಾಲೆಯ ಮುಖ್ಯೋಪಾಧ್ಯಾಯಿನಿ ಹಾಗೂ ಶಿಕ್ಷಕಿ ವ್ರಂದದವರಿಂದ ಅತ್ತ್ಯುತ್ತಮ ಮಟ್ಟದ ಶಿಕ್ಶಣವನ್ನು ಆದಿವಾಸಿ ವಿಧ್ಯಾರ್ಥಿಗಳಿಗೆ ನೀಡಲಾಗುತ್ತಿದ್ದು ಮಾಣಿಕ್ಪುರ ಕೇಂದ್ರದಲ್ಲಿ ಈ ಶಾಲೆಯು ಅಗ್ರಸ್ಥಾನವನ್ನು ಪಡೆದಿದೆ ಎಂದು ತಿಳಿಸಿದರು. ಈಗ ಬಾಲಾಜಿ ಸೇವಾ ಸಮಿತಿಯವರು ಶಾಲೆಯನ್ನು ದತ್ತು ಸ್ವೀಕಾರ ಮಾಡಿರುವುದರಿಂದ ಸಮಿತಿಯ ಸಹಕಾರದಿಂದ ಈ ಶಾಲೆಯು ಇನ್ನೂ ಹೆಚ್ಚಿನ ಪ್ರಗತಿಯನ್ನು ಪಡೆಯುವಂತೆ ಆಶಿಸಿದರು, ಅಲ್ಲದೆ ಸಮಿತಿಯವರಿಗೆ ಧನ್ಯವಾದ ನೀಡಿದರು. ಬಾಲಾಜಿ ಸಮಿತಿಯ ಅಧ್ಯಕ್ಷ ಶ್ರೀ ತಾರಾನಾಥ್ ಪೈಯವರು ಮುಖ್ಯ ಅಥಿತಿಯಾಗಿ ಮಾತನಾಡಿ ಶಾಲೆಯ ವಿಧ್ಯಾರ್ಥಿಗಳ ಚಟುವಟಿಕೆ ಹಾಗೂ ಶಿಕ್ಷಣದ ಬಗ್ಗೆ ಆಸಕ್ತಿ ಇರುವುದನ್ನು ಶ್ಲಾಘಿಸಿ, ಎಲ್ಲಾ ವಿಧ್ಯಾರ್ಥಿ ವಿಧ್ಯಾರ್ಥಿನಿಯರು ಮುಂದೆ ಉತ್ತಮ ಪ್ರಜೆಗಳಾಗುವಂತೆ ಆಶೀರ್ವದಿಸಿದರು. ಶಾಲೆಯ ಮುಖ್ಯೊಪಾಧ್ಯಾಯಿನಿಯವರಾದ ಶ್ರೀಮತಿ ವರ್ಷಾ ಕ್ರಿಷ್ಣ ಸಾಳುಂಕೆ ಅವರು ಮಾತನಾಡಿ ಶಾಲೆಯಲ್ಲಿ ಶಿಕ್ಷಣ ಕೊಡುವ ರೀತಿಯ ಬಗ್ಗೆ ಹಾಗೂ ವಿಧ್ಯಾಥಿಗಳು ಆದಿವಾಸಿಗಳಾದರೂ ಉತ್ತಮ ರೀತಿಯ ಶಿಕ್ಷಣ ಅಲ್ಲದೆ ಇತರ ಪಾಠೇತರ ಚಟುವಟಿಕೆಯಲ್ಲಿ ಆಸಕ್ತಿ ನೀಡಿ ಭಾಗವಹಿಸುವ ಬಗ್ಗೆ ಮಾಹಿತಿ ನೀಡಿದರು ಹಾಗೂ ವಸಯಿ ಜಿ.ಸ್.ಬಿ. ಸಮಾಜದ ಬಾಲಾಜಿ ಸೇವಾ ಸಮಿತಿಯವರಿಗೆ ಈ ಶಾಲೆಯನ್ನು ದತ್ತು ಸ್ವೀಕಾರ ಮಾಡಿದ ಬಗ್ಗೆ ಸಂತೋಷವನ್ನು ವ್ಯಕ್ತ ಪಡಿಸಿ ಧನ್ಯವಾದ ನೀಡುತ್ತಾ, ಸಮಿತಿಯ ಸಹಕಾರದಿಂದ ಮುಂಬರುವ ದಿನಗಳಲ್ಲಿ ಶಾಲೆಯು ಇನ್ನೂ ಹೆಚ್ಚಿನ ಪ್ರಗತಿಯನ್ನು ಹೊಂದುವುದರ ಬಗ್ಗೆ ಆಶಿಸಿದರು. ಸಮಿತಿಯ ಸಂಚಾಲಕರಾದ ಶ್ರೀ ದೇವೆಂದ್ರ ಭಕ್ತರು ಮಾತನಾಡಿ ಸಮಿತಿಯು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ತಮ್ಮ ಸಮಾಜ ಪರ ಕಾರ್ಯಕ್ರಮಗಳಲ್ಲಿ ಒಂದಾದ ಶಾಲೆಯ ದತ್ತು ಸ್ವೀಕಾರ ಮಾಡುವ ಬಗ್ಗೆ ಮತ್ತು ಶಾಲೆಗೆ ಹಾಗೂ ವಿಧ್ಯಾರ್ಥಿಗಳಿಗೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅಗತ್ಯವಾದ ವಸ್ತುಗಳು ಮತ್ತು ಸೌಕರ್ಯವನ್ನು ಸಮಿತಿಗೆ ಸಾಧ್ಯವಾದ ಪ್ರಮಾಣದಲ್ಲಿ ನೀಡುವುದಾಗಿ ಆಶ್ವಾಸನೆ ನೀಡಿದರು. ಅಲ್ಲದೆ ಶಾಲೆಯ ಇನ್ನೂ ಹೆಚ್ಚಿನ ಪ್ರಗತಿಯ ಬಗ್ಗೆ ದೇವರಲ್ಲಿ ಪ್ರಾರ್ಥಿಸಿದರು ಹಾಗೂ ವಿಧ್ಯಾರ್ಥಿ ವಿಧ್ಯಾರ್ಥಿನಿಯರಿಗೆ ಒಳ್ಳೆಯ ರೀತಿಯಲ್ಲಿ ಶಿಕ್ಷಣ ಪಡೆದು ಉತ್ತಮ ಪ್ರಜೆಯಾಗುವಂತೆ ಆಶೀರ್ವದಿಸಿದರು. ನಂತರ ಎಲ್ಲಾ ವಿಧ್ಯಾರ್ಥಿ ವಿಧ್ಯಾರ್ಥಿನಿಯರಿಗೆ ಸಮಿತಿಯ ವತಿಯಿಂದ ಭಾಗವಹಿಸಿದ ಸಮಿತಿಯ ಸದಸ್ಯರಿಂದ ಖಾದ್ಯ ಪೊಟ್ಟಣಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ,ಶಾಲೆಯ ಶಿಕ್ಷಕಿ ವರ್ಗ, ಬಾಲ ವಿಕಾಸ ಮಂಡಳಿಯ ಸದಸ್ಯರು, ದಿವಾನ್ಮನ್ ಪರಿಸರದ ಇತರ ನಾಗರಿಕರು ಹಾಗು ವಸಯಿ ಜಿ.ಸ್.ಬಿ. ಬಾಲಾಜಿ ಸೇವಾ ಸಮಿತಿಯ ಕಾರ್ಯದರ್ಶಿ ಶ್ರೀ ಪುರುಷೊತ್ತಮ ಶೆಣೈ ಹಾಗು ಇತರ ಪದಾದಿಕಾರಿಗಳಾದ ಶ್ರೀ ಮನೋಹರ ಶೆಣೈ,ಶ್ರೀ ವಿಜಯೇಂದ್ರ ಪ್ರಭು, ಶ್ರೀ ವಿವೇಕಾನಂದ ಭಕ್ತ, ಶ್ರೀ ಲಕ್ಷ್ಮಣ ರಾವ್, ಶ್ರೀ ಶಿರಿಶ್ ಆಚಾರ್ಯ, ಶ್ರೀ ಶ್ರಿನಿವಾಸ ಪಡಿಯಾರ್, ಶ್ರೀ ರಾಮಚಂದ್ರ ಹೆಗ್ಡೆ, ಶ್ರೀ ಅರವಿಂದ ಹೊನ್ನಾವರ್,ಶ್ರೀ ಯಶವಂತ ಕಾಮತ್ ಹಾಗೂ ಮಹಿಳಾ ವಿಭಾಗದ ಶ್ರೀಮತಿ ಸುಧಾ ಭುಜ್ಲೆ ಮತ್ತು ಯುವ ವಿಭಾಗದ ಶ್ರೀ ಸಚಿನ್ ಪಡಿಯಾರ್ ಮತ್ತು ಕು.ಅಪೇಕ್ಷಾ ಭಕ್ತ ಹಾಗೂ ಇತರ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಕೊನೆಯಲ್ಲಿ ರಾಷ್ತ್ರ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

____________________________________________________________________________________
On an auspicious day of 15th August 2017, as an initiative of taking social responsibility and in an endeavor to render seva to the society Balaji Seva Samiti, Vasai Road unanimously decided to adopt a zilla parishad school, located near Deewanman talav. Even though it is an aided school the aid is insufficient to effectively run the school. The school has 80 tribal students whose parents work on a meager salary. They work on daily wages and find it very difficult to make their ends meet.
Our committee met the Principal of the school Smt. Varsha Krishna Salunkhe and inquired regarding their immediate requirements on priority. Accordingly we decided to donate two huge steel cupboards, 7 wall clocks, a digital pad, and a set of uniform to all students.
The program started with hoisting of our National Flag by our Hon. President Sri. Taranath Pai. Later on a small function was arranged where the dias was shared by Chief Guest Sri. Taranath Pai Hon. President of Balaji Seva Samiti, Nagar Sevak Sri. Kalapesh Narayan Mankar, Smt. Sunanda Chaudhari from education Dept., Manikpur center, ex Nagar Sevaki Smt. Geeta Kanti Mankar, Principal of the school Smt. Varsha Krishna Salunkhe and Convener of Balaji Seva Samiti Sri. S. Devendra Bhakta. After an inspiring speech by chief guest, Balaji Seva Samiti’s convener spoke on the long standing wish of the Samiti to extend support to a school as a part of social responsibility and also assured to support in every possible way within the Samiti’s capability. Every one on the dais opined that education is must be made mandatory to every children as it shapes these young children to become a responsible citizens of India. Smt. Sunanda Chaudhari from education Dept., praised the Principal of the school Smt. Varsha Krishna Salunkhe and all the teachers for running the school very effectively due to their total dedication and hardwork. The children of the school also gave welcome speech and thanks giving. After the speeches from all the guetsts, all the children were handed with food packets comprising an Apple, buiscuits, Samosa and a fruit drink. The smile on their faces was just priceless.
As an initial step and immediate requirement two steel cupboards were handed over to the school by Balaji Seva Samiti’s Vice President Sri. Mulki Krishna Kamath.
The program ended by singing of National Anthem.

Leave a comment!

Add your comment below, or trackback from your own site. You can also Comments Feed via RSS.

Be nice. Keep it clean. Stay on topic. No spam.

You can use these tags:
<a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

This is a Gravatar-enabled weblog. To get your own globally-recognized-avatar, please register at Gravatar.