6th Vardhanti Day held on 24th May 2012
ವಸಾಯಿ ರೋಡ್ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ (ಜಿ. ಎಸ್. ಬಿ) ಬಾಲಾಜಿ ಸೇವಾ ಸಮಿತಿ (ಶ್ರೀ ವೆಂಕಟರಮಣ ಭಜನಾ ಮಂಡಳಿ) ಅವರ ಬಾಲಾಜಿ ಸಭಾಗೃಹ ಮತ್ತು ಪ್ರಾರ್ಥನಾ ಮಂದಿರದ 6 ನೇ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ಮೇ 24 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವೇದಮೂರ್ತಿ ಗಿರಿಧರ್ ಭಟ್ ಅವರ ಮಾರ್ಗದರ್ಶನದಲ್ಲಿ ನೆರವೇರಿತು.
ಆರನೇ ಪ್ರತಿಷ್ಠಾ ವರ್ಧಂತಿಯ ಸವಿನೆನಪಿಗಾಗಿ ಮತ್ತು ದೇವರಿಗೆ ಉಡುಗೊರೆಯ ರೂಪದಲ್ಲಿ ಸಮಾಜ ಎಲ್ಲಾ ಸದಸ್ಯರ ಧನ ಸಹಾಯದಿಂದ ನಿರ್ಮಿಸಿರುವ ಗರ್ಭಗುಡಿಗೆ ಹಿತ್ತಾಳೆಯ ಮಂಟಪ, ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧೀಪತಿ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಅವರ ಹಸ್ತದಿಂದ ಪ್ರತಿಷ್ಠಾಪಿಸಿದ ವೆಂಕಟರಮಣ ಗಂಧದ ಮೂರ್ತಿಗೆ ಚಿನ್ನದ ಕಿರೀಟ, ನಾಮ, ಶಂಖ, ಚಕ್ರ, ಗದಾ, ಪದ್ಮ, ಹಸ್ತ, ಕಣ್ಣು, ಕರ್ಣ ಕುಂಡಲ, ಪಾದಗಳನ್ನು ಸಮಿತಿಯ ಪದಾಧಿಕಾರಿಗಳು ಸಮರ್ಪಿಸಿದರು. ದೇವರಿಗೆ ರಜತದ ಗರುಡ ವಾಹನವನ್ನು ದಾನಿಗಳಾದ ಪ್ರಥ್ವಿ ಮತ್ತು ಶೇಷ್ ಕಾಮತ್ ಅವರ ಹಸ್ತದಿಂದ ಸಮರ್ಪಿಸಲಾಯಿತು.
ದೇವರಿಗೆ ಚಿನ್ನದ ಶೇಷನಾಗವನ್ನು ದಾನಿಗಳಾದ ಮುಲ್ಕಿ ಕೃಷ್ಣ ಗೋಪಾಲ್ ಕಾಮತ್ ಅವರ ಹಸ್ತದಿಂದ ಅವರ ಧರ್ಮಪತ್ನಿ ದಿ| ಸರೋಜಾ ಕಾಮತ್ ಅವರ ಸ್ಮರಣಾರ್ಥ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಆನಂತರ ಶ್ರೀ ವೆಂಕಟರಮಣ ಮತ್ತು ಇತರ ಪರಿವಾರ ದೇವರಿಗೆ ಮಹಾಮಂಗಳಾರತಿ, ಅನ್ನ ಪ್ರಸಾದ ನಡೆಯಿತು. ಕಾರ್ಯಕ್ರಮದಲ್ಲಿ ವಸಾಯಿ ಪರಿಸರದ ಜಿ. ಎಸ್. ಬಿ. ಸಮಾಜದ ಇತರ ಸಂಸ್ಥೆಯ ಸದಸ್ಯರು ಭಾಗವಹಿಸಿದ್ದರು.
ಕಂಡ್ಲೂರು ವಿಜಯೇಂದ್ರ ಪ್ರಭು ಮತ್ತು ವಿನಾಯಕ ಪೈ ಅವರ ನೇತೃತ್ವದಲ್ಲಿ ಅಲಂಕರಿಸಿದ ದೇವರ ಹಿತ್ತಾಳೆ ಮಂಟಪವು ಭಕ್ತಾದಿಗಳ ಮೆಚ್ಚುಗೆಗೆ ಪಾತ್ರವಾಯಿತು. ಸಮಿತಿಯ ಪದಾಧಿಕಾರಿಗಳು, ಮಹಿಳಾ ವಿಭಾಗದ ಪದಾಧಿಕಾರಿಗಳು, ಯುವ ವಿಭಾಗದ ಪದಾಧಿಕಾರಿಗಳು, ಮತ್ತು ಸಮಿತಿಯ ಸಸದಸ್ಯ ಬಾಂಧವರು ಧಾರ್ಮಿಕ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
“Balaji sabhagraha & Prarthana Mandir” celebrated its 6th Vardhanti Day on Thursday, 24th May 2012. The program started with Bhajan from our “Sri Venkataramana Bhajana Mandali” between 6:30 PM to 8:15 PM, which was followed by Maha Arati. Arati was followed by Prasad Vitharana and then proceeded for “Samaradhane” at Jai Amma Annapoorna Hall.