26th Annual Get-Together & Satyanarayan Mahapooja on 10th Dec 2017.
ವಸಾಯಿ ರೊಡ್ ಪಶ್ಚಿಮದ ಗೌಡ ಸಾರಸ್ವಥ ಬ್ರಾಹ್ಮಣ (ಜಿ.ಯೆಸ್.ಬಿ.) ಬಾಲಾಜಿ ಸೇವಾ ಸಮಿತಿಯ (ಶ್ರೀ ವೆ೦ಕಟರಮಣ ಭಜನಾ ಮ೦ಡಳಿ) ೨೬ನೆ ವಾರ್ಷಿಕ ಸ್ನೇಹ ಸ೦ಮ್ಮಿಲನ ಮತ್ತು ಶ್ರೀ ಸತ್ಯನಾರಯಣ ಮಹಾಪೂಜೆ ಡಿ|| ೧೦ ರ೦ದು, ರವಿವಾರ ಸಮಿತಿಯ ಮ೦ದಿರದಲ್ಲಿ ವಿಜ್ರ೦ಭಣೆಯಿ೦ದ ಜರಗಿತು.
ಪೂರ್ವಾಹ್ನ ವೇದಮೂರ್ತಿ ಗಿರಿಧರ ಭಟ್ ಅವರ ಮಾರ್ಗದರ್ಶನದಲ್ಲಿ ಮತ್ತು ಸಮಿತಿಯ ಗೌರವ ಉಪಾದ್ಯಕ್ಷ ಉದ್ಯಾವರ ಪ್ರವೀಣ್ ಗೋವಿಂದ ನಾಯಕ್ ಹಾಗೂ ಸುನಂದಾ ನಾಯಕ್ ಅವರು ಪೂಜ ವಿಧಿವಿಧಾನಗಳನ್ನು ನೆರವೇರಿಸಿದರು. ಸಮಿತಿಯವರಿಂದ ಭಜನಾ ಕಾರ್ಯಕ್ರಮವು ಇದೇ ಸಂದರ್ಭದಲ್ಲಿ ಜರಗಿತು. ಬೆಂಗಳೂರಿನ ಖ್ಯಾತ ಗಾಯಕರಾದ ಶ್ರೀ ರಮಣೇಶ್ ಪ್ರಭು ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಹಾರ್ಮೊನಿಯಂನಲ್ಲಿ ಪ್ರಸಾದ್ ಪ್ರಭು, ಪ್ರಕಾಶ್ ಪ್ರಭು, ತಬಲಾದಲ್ಲಿ ಮನೋಜ್ ಆಚಾರ್ಯ ಮತ್ತು ರಾಜೆಶ್ ಪೈ ಹಾಗು ಪಖ್ವಾಜನಲ್ಲಿ ಗಣೇಶ್ ಪೈ, ಅಶೋಕ್ ಶಿಂದೆ ಸಹಕರಿಸಿದರು.
ಮಹಿಳೆಯವರಿಂದ ಅರಸಿನ ಕುಂಕುಮ ಕಾರ್ಯಕ್ರಮ ನಡೆಯಿತು. ಸಮಾಜದ ಹಿರಿಯರಾದ ರಾಮಕ್ರಷ್ಣ ಹೆಗ್ಡೆ, ವಿಜಯೇಂದ್ರ ಪ್ರಭು, ಯೆಚ್. ವಿನಾಯಕ್ ಪೈ, ಯೆಲ್. ವಿ. ಪೈ, ಗಣೇಶ್ ಕಾಮತ್, ಜದೀಶ್ ಹೆಗ್ಡೆ, ಕ್ರಷ್ಣ ಕಾಮತ್, ನಾಗೆಶ್ ಪೈ, ಪ್ರಕಾಶ್ ಶೆಣೈ, ಪ್ರಮೊದ್ ಶೆಣೈ, ಪ್ರಶಾಂತ್ ನಾಯಕ್, ವಾಮನ್ ಕಾಮತ್, ಸುರೇಶ್ ಕಾಮತ್, ಶ್ರೀಪತಿ ಭಟ್, ಅರವಿಂದ ಹೊನ್ನಾವರ್, ಗೋಪಾಲ್ಕ್ರಷ್ಣ ನಾಯಕ್, ದೇವೇಂದ್ರ ಹೆಗ್ಡೆ, ಉಮಾನಥ್ ಭಟ್, ಬಾಬಾ ಪೈ, ನಾಗೇಶ್ ಪ್ರಭು, ಸತೀಶ್ ಬಾಳಿಗಾ, ಪ್ರಭಾಕರ ಭಟ್, ಸೀತಾರಾಮ್ ರಾವ್, ಪ್ರಭಾಕರ ಜೋಶಿ, ಸದಾಶಿವ ನಾಯಕ್, ವಿವೇಕಾನಂದ ಭಕ್ತ, ಲಕ್ಶಮಣ ರಾವ್, ಸತ್ಯೇಂದ್ರ ನಾಯಕ್, ಕೆ.ವಿ.ಕಾಮತ್, ದತ್ತಾತ್ರೇಯ ನಾಯಕ್, ಆರ್.ಜಿ.ಕಾಮತ್, ರಾಮಚಂದ್ರ ಹೆಗ್ಡೆ, ಗಣಪತಿ ಭಕ್ತ, ವಿಜಯಾನಂದ ಶೆಣೈ, ಪುರುಶೋತ್ತಮ ಕುಡ್ವಾ, ಶ್ರೀನಿವಾಸ ಪಡಿಯಾರ್, ದೇವದಾಸ್ ಭಟ್, ಬಾಲಕ್ರಷ್ಣ ಪೈ, ಶಿರಿಷ್ ಆಚಾರ್ಯ, ಶ್ರಿಧರ ಪ್ರಭು, ವಿ.ಕೆ.ಕಾಮತ್, ವೆಂಕಟೇಶ್ ಪೈ, ಆರ್. ವಿ.ಶೆಣೈ, ಚಂದ್ರಕಾತ್ ಕುಡ್ವಾ, ಗಣೇಶ್ ಪೈ, ಸತೀಶ್ ಕಾಮತ್, ಮಾಧವ್ ನಾಯಕ್, ಸುರೇಶ್ ಪೈ, ವಾಸುದೇವ್ ಶೆಣೈ, ಜಗದೀಶ್ ಕಾಮತ್, ಯೋಗೇಶ್ ಶೆಣೈ, ಚಂದ್ರಕಾಂತ್ ಹೆಗ್ಡೆ, ಕಾರ್ತಿಕ್ ನಾರಾಯಣ್ ಪೈ, ಶ್ಯಾಮಸುಂದರ್ ಆಚಾರ್ಯ, ಉಪೇಂದ್ರ ಆಚಾರ್ಯ ಉಪಸ್ಠಿತರಿದ್ದರು.
ಜಿ.ಯೆಸ್.ಬಿ ಸಮಾಜ ಬಾಂಧವರಾದ ವಿಶ್ವನಾಥ್ ಕುಡ್ವ ನಲಾಸೊಪಾರಾ, ವಾಲ್ಕೆಶವರ ಕಾಶೀಮಠ, ದಹಿಸರ್ ಕಾಶೀಮಠ, ವಸಯಿ ಕರ್ನಾಟಕ ಸಂಘದ ಅಧ್ಯಕ್ಷ ಓ.ಪಿ.ಪೂಜಾರಿ, ಉಪಾಧ್ಯಕ್ಷ ಪಾಂಡು ಶೆಟ್ಟಿ, ಶನಿ ಪೂಜಾ ಸಮಿತಿಯ ಜಯ ಶೆಟ್ಟಿ, ಬಂಟರ ಸಂಘ, ಶ್ರಿ ಗುರುರಾಜ ಮಾನವ ಜಾಗ್ರತಿ ಕೆಂದ್ರದ, ಗುರುನಾರಾಯಣ ಸೇವಾ ಸಮಿತಿ, ಬಿಲ್ಲವರ ಅಸೊಸಿಯೇಶನ್ ಸ್ಠಳೀಯ ಸಮಿತಿ, ಮೊಗವೀರ ಸ್ಠಳೀಯ ಸಮಿತಿಯ ಪದಾಧಿಕಾರಿಗಳು ಉಪಸ್ಠಿತರಿದ್ದರು.
ವಿವಿಧ ಬ್ಯಾಂಕಗಳ ಪದಾಧಿಕಾರಿಗಳು, ದೇನಾ ಬ್ಯಾಂಕಿನ ವಿಭಾಗಿಯ ಪ್ರಬಂದಕ ಸುನಿಲ್ ಪೈ, ಕಾರ್ಪೊರೇಷನ್ ಬ್ಯಾಂಕಿನ ವ್ಯವಸ್ಠಾಪಕ ವೆಂಕಟೇಶ್ವರಲು, ಪಾಲ್ಗರ್ ಜಿಲ್ಲಾ ಪೋಲಿಸ್ ಅಧಿಕಾರಿಗಳಾದ ಯೆಸ್.ಪಿ. ಶ್ರೀ ಮಂಜುನಾಥ್ ಸಿಂಗೆ ಪರಿವಾರ, ಯೆಸ್.ಐ. ಶ್ರೀ ಹೆಗಾಜೆ ಪರಿವಾರ, ಯೆಸ್.ಐ. ಶ್ರೀ ಅನಂತ್ ಪಾಟಿಲ್, ನಗರ ಸೇವಕರಾದ ಶ್ರೀ ಸಂದೇಶ್ ಜಾಧವ್ ಮಂದಿರಕ್ಕೆ ಭೇಟಿಯನ್ನಿತ್ತರು.
ಇದೇ ಸಂದರ್ಭದಲ್ಲಿ ಏಚ್.ಯೆಸ್.ಸಿ, ಯೆಸ್.ಯೆಸ್.ಸಿ ಮತ್ತು ಪದವಿ ತರಗತಿಗಳಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಸಮಾಜದ ಮಕ್ಕಳನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಸಮಾಜದ ಹಿರಿಯ ನಾಗರಿಕರನ್ನು ಗೌರವಿಸಲಾಯಿತು. ಮುಲ್ಕಿ ಕ್ರಷ್ಣ ಗೋಪಾಲ ಕಾಮತ್ ಅವರ ಧರ್ಮ ಪತ್ನಿ ದಿ|| ಸರೋಜಾ ಕಾಮತ್ ಹಾಗೂ ವಾಮನ್ ಕಾಮತ್ ಅವರ ತಂದೆ ದಿ|| ಅನಂತ್ ಕಾಮತ್ ಸ್ಮರಣಾರ್ಥ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಉದ್ಯಮಿ ವಿಶ್ವನಾಥ ಶೆಟ್ಟಿ ಅವರ ಪರಿವಾರದ ವತಿಯಿಂದ ಹಳದಿ-ಕುಂಕುಮಕ್ಕೆ ಸ್ಟೀಲ್ ಬೊವ್ಲ್ ವಿತರಿಸಲಾಯಿತು. ಸಮಾಜದ ಆರ್ಥಿಕವಾಗಿ ಹಿಂದುಳಿದ ವಿಧವೆಯರಿಗೆ, ಮಾಲಾ ನಾಯಕ್ ಅವರ ದಿ|| ಪದ್ಮಜ್ ನಾಯಕ್ ಸ್ಮರಣಾರ್ಥ್ ಮತ್ತು ಶ್ರೀಮತಿ ಮುಲ್ಕಿ ಗೀತಾ ನರಸಿಂಹ ಪ್ರಭು ಇವರಿಂದ ಧನ ಸಹಾಯ ವಿತರಿಸಲಾಯಿತು.
ಮಹಿಳಾ ವಿಭಾಗ, ಯುವ ವಿಭಾಗದಿಂದ, ವರಿಷ್ಠ ನಾಗರಿಕರಿಂದ ನ್ರತ್ಯ, ಸಂಗೀತ, ಛದ್ಮ ವೇಷ, ನಾಟಕ ಇನ್ನಿತರ ಕಾರ್ಯಕ್ರಮಗಳು ಜರಗಿತು.
ಸಮಿತಿಯ ಸದಸ್ಯರಿಂದ ವಿಠಲ್ ಪ್ರಭು ಅವರ ಮಾರ್ಗದರ್ಶನದಲ್ಲಿ ಕೊಂಕಣಿಯಲ್ಲಿ ಶ್ರೀ ಕ್ರಷ್ಣಲೀಲೆ-ಕಂಸ ವಧೆ ಎಂಬ ಯಕ್ಷಗಾನ ಪ್ರದರ್ಶನಗೊಂಡಿತು. ಬೆಳಗ್ಗೆ ಫಲಹಾರ, ಮಧ್ಯಹ್ನ ಭೋಜನ, ಸಂಜೆ ಉಪಹಾರ ಹಾಗು ರಾತ್ರಿ ಅನ್ನ ಸಂತರ್ಪಣೆಯು ಭಜನೆ ಸಮಿತಿಯವರಿಂದ ನಡೆಯಿತು. ಪ್ರವೀಣ್ ನಾಯಕ್ ಮತ್ತು ಸುನಂದಾ ನಾಯಕ್ ಅವರಿಂದ ಸಿಹಿ ತಿಂಡಿಯ ವ್ಯವಸ್ಥೆಯನ್ನು ಆಯೊಜಿಸಲಾಗಿತ್ತು.
ಸಮಿತಿಯ ಅಧ್ಯಕ್ಷ ತಾರಾನಥ್ ಪೈ, ಗೌರವಾಧ್ಯಕ್ಷ ವಸಂತ್ ನಾಯಕ್, ಕಾರ್ಯದರ್ಶಿ ಪುರುಶೋತ್ತಮ ಶೆಣೈ, ಕೋಶಾಧಿಕಾರಿ ವೆಂಕಟ್ರಾಯ ಪ್ರಭು, ಸಂಚಾಲಕ ದೇವೇಂದ್ರ ಭಕ್ತ, ಮಹಿಳಾ ವಿಭಾಗದ ಪದಾಧಿಕಾರಿಗಳು ಮತ್ತು ಸಮಿತಿಯ ಎಲ್ಲಾ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಶ್ರೀ ಸತ್ಯನಾರಾಯಣ ದೇವರ ಮತ್ತು ಬಾಲಾಜಿ ದೇವರ ಅಲಂಕ್ರತ ಮಂಟಪಕ್ಕೆ ಹೂವನ್ನು ಮಹಿಳಾ ವಿಭಾಗದವರು ಸಂಯೊಜಿಸಿದ್ದು ಹೆಚ್. ವಿನಾಯಕ್ ಪೈ, ವಿಜಯೆಂದ್ರ ಪ್ರಭು, ಶ್ರೀಪತಿ ಭಟ್ಟ್, ದೇವದಾಸ್ ಭಟ್ಟ್ ಅವರ ನೇತ್ರತ್ವದಲ್ಲಿ ಮಂಟಪವನ್ನು ಅಲಂಕರಿಸಲಾಗಿತ್ತು. ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
- ಅಲಂಕ್ರತ ಮಂಟಪ
- ಪೂಜಾ ದಂಪತಿ – ಪ್ರವೀಣ್ ಗೋವಿಂದ ನಾಯಕ್ ಹಾಗೂ ಸುನಂದಾ ನಾಯಕ್