Photo Albums

Photo albums of various activities pertaining to Balaji Seva Samiti

Bhajans

Exclusive collection of the best Indian Devotional songs sung by our community artists

eBooks and Downloads

Treasure trove of research and information

Mahila Vibhaag

Activities from our proactive women’s wing.

Our Festivals and Utsavs

Everything about festivals and utsavs done at Balaji Seva Samiti Vasai

Home » Articles, Bhajans, Featured, Highlight, Our Festivals and Utsavs, Our Saraswath Samaj, Photo Albums, ಅಮ್ಗೆಲೆ ಪರ್ಬೋ ಆನಿ ಸಂಸ್ಕೃತಿ

23rd Annual Get-together & Satyanarayan Mahapooja 14th Dec 2014.

Submitted by on December 23, 2014 – 8:48 PMNo Comment

1 (2)
ವಸಾಯಿ ರೋಡ್ ಪಶ್ಚಿಮದ “ಗೌಡ ಸಾರಸ್ವತ ಬ್ರಾಹ್ಮಣ” ಸಮಾಜದವರ ಬಾಲಾಜಿ ಸೇವಾ ಸಮಿತಿ “ಶ್ರೀ ವೆಂಕಟರಮಣ ಭಜನಾ ಮಂಡಳಿ”ಯ 23 ನೇ ವಾರ್ಷಿಕ ಸ್ನೇಹ ಸಮ್ಮಿಲನ ಮತ್ತು ಸತ್ಯನಾರಾಯಣ ಮಹಾಪೂಜೆ ಭಾನುವಾರ ಡಿಸೆಂಬರ್ 14 ರಂದು ಸಂಸ್ಥೆಯ “ಬಾಲಾಜಿ ಸಭಾಗ್ರಹ ಮತ್ತು ಪ್ರಾರ್ಥನಾ ಮಂದಿರ”ದಲ್ಲಿ ವಿಜ್ರಂಬಣೆಯಿಂದ ಜರಗಿತು.
ವೇದಮೂರ್ತಿ ಶ್ರೀ ಗಿರಿಧರ್ ಭಟ್ ಅವರ ಮಾರ್ಗದರ್ಶನದಲ್ಲಿ, ಪ್ರಭಾ ಮತ್ತು ರಮೇಶ್ ಶೆಣೈ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.
ಸಮಿತಿಯವರಿಂದ ಭಜನಾ ಕಾರ್ಯಕ್ರಮ ಈ ಸಂದರ್ಭದಲ್ಲಿ ನಡೆಯಿತು. ಇವರು ಕೊಂಕಣಿ, ಕನ್ನಡ, ಮರಾಠಿ ಹಾಗು ಹಿಂದಿಯಲ್ಲಿ ಭಜನೆಗಳನ್ನು ಹಾಡಿ ಅಲ್ಲಿ ನೆರೆದ ಎಲ್ಲಾ ಸಭಿಕರ ಮನ ಸೆಳೆದರು. ಹಾರ್ಮೋನಿಯಂನಲ್ಲಿ ರಮಣೇಶ್ ಪ್ರಭು,ತಬಲಾದಲ್ಲಿ ಮನೋಜ್ ಆಚಾರ್ಯ, ಆಮೆಯ ಪೈ, ಅನಿಕೆತ್ ಕಾಮತ್ ಹಾಗು ಪಖ್ವಾಜ್ ನಲ್ಲಿ ಗಣೇಶ್ ಪೈ, ಅಶೋಕ್ ಶಿಂದೆ ಸಾಥಿ ನೀಡಿದರು.
ಮೂಲತಃ ಕಾಸರಗೋಡಿನವರಾದ ಬೆಂಗಳೂರು ನಿವಾಸಿ ಖ್ಯಾತ ಗಾಯಕ ರಮಣೇಶ್ ಪ್ರಭು ತುಂಬಾ ಸುಂದರವಾಗಿ ಹಾಡಿ ಸಭಿಕರ ಮನ ಮೆಚ್ಚುಗೆಗೆ ಪಾತ್ರರಾದರು.
ರಮಣೇಶ್ ಪ್ರಭು ಹಾಗು ಮನೋಜ್ ಆಚಾರ್ಯ ಇವರಿಗೆ ಸಮಿತಿಯವರಿಂದ ಶಾಲು ಹೊದೆಸಿ ಶ್ರೀ ವೆಂಕಟರಮಣ ದೇವರ ಪ್ರತಿಮೆಯನ್ನು ನೀಡಿ ಸನ್ಮಾನಿಸಲಾಯಿತು. ಮಹಿಳಾ ವಿಭಾಗದ ಸದಸ್ಯೆಯರಿಂದ ಅರಶಿನ – ಕುಂಕುಮ ಕಾರ್ಯಕ್ರಮ ನೆರವೇರಿತು.
ವಸಾಯಿ ಜಿ.ಎಸ್.ಬಿ. ಸಮಾಜದ ವರಿಷ್ಠರಾದ ರಾಮಕೃಷ್ಣ ಹೆಗ್ಡೆ, ಮಂಜುನಾಥ್ ಭಕ್ತಾ, ವಿಜಯೇಂದ್ರ ಪ್ರಭು, ವಿನಾಯಕ್ ಪೈ, ಪ್ರಕಾಶ್ ಶೆಣೈ, ಹರಿದಾಸ್ ಕಾಮತ್,ನಾಗೇಶ್ ಪೈ, aಎಲ್.ವಿ.ಪೈ, ಶ್ರೀಧರ ಪ್ರಭು, ಮನೋಹರ ಶೆಣೈ, ಪ್ರಶಾಂತ್ ನಾಯಕ್, ವಿ.ವಿ.ಕಾಮತ್, ಗೋಪಾಲಕೃಷ್ಣ ನಾಯಕ್, ವಿನಾಯಕ್ ಮಹಾಲೆ, ಪುರುಶೊಥಮ್ ಪೈ, ಕೃಷ್ಣ ಕಾಮತ್, ಗಣೇಶ್ ಕಾಮತ್, ಶ್ರೀಪತಿ ಭಟ್, ಅರವಿಂದ್ ಹೊನ್ನಾವರ, ಉಮಾನಾಥ್ ಭಟ್, ವಿ.ವಿ.ಶೆಣೈ, ಕೆ.ವಿ.ಆರ್.ಕಾಮತ್, ಶಿರಿಶ್ ಆಚಾರ್ಯ, ಉಮೇಶ್ ರಾವ್, ಜಗದೀಶ್ ಕಾಮತ್, ಬಾಬಾ ಪೈ, ಆರ್.ಜಿ.ಕಾಮತ್, ಜಗದೀಶ್ ಹೆಗ್ಡೆ, ಸೀತಾರಾಂ ರಾವ್, ಏನ್.ವಿ.ಶೆಣೈ, ಹಾಗು “ಶಾಂತಿಧಾಮ” ಸೇವಾ ಸಮಿತಿಯ ವಿಶ್ವಸ್ಥರಾದ ಲಕ್ಷ್ಮಿ ಮತ್ತು ನರಸಿಂಹ ಪ್ರಭು ಉಪಸ್ತಿತರಿದ್ದರು.
ವಸಾಯಿ-ವಿರಾರ್ ವಲಯದ ಮೇಯರ್ ಶ್ರೀ ನಾರಾಯಣ್ ಮಾಣ್ಕರ್, ವಸಾಯಿ ನಗರ ಸೇವಕ ಸಂದೇಶ್ ಜಾಧವ್ ಸ್ಥಳೀಯ ಕಾರ್ಪೊರೇಟರ್, ಪೋಲಿಸ್ ಅಧಿಕಾರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕರ್ನಾಟಕ ಸಂಘ, ಬಂಟರ ಸಂಘ, ಗುರುನಾರಾಯಣ ಸೇವಾ ಸಮಿತಿ, ಶನಿ ಪೂಜಾ ಸೇವಾ ಸಮಿತಿ, ಬಿಲ್ಲವರ ಅಸೋಸಿಯೇಷನ್ ಪದಾಧಿಕಾರಿಗಳು ಉಪಸ್ತಿತರಿದ್ದರು.
ಜಿ.ಎಸ್.ಬಿ. ಸಮಾಜದ ವಿವಿಧ ಸಂಸ್ಥೆಗಳಾದ ಪಾರ್ನಕಾ ವಸಾಯಿ, ನಾಲಸೋಪಾರಾ, ವಿರಾರ್, ಮೀರಾ-ಭಾಯಂದರ್, ಬೋರಿವಲಿ, ದಹಿಸರ್, ಗೋರೆಗಾಂವ್, ಅಂಧೇರಿ,ಮುಲುಂಡ್, ವಾಶಿ, ಡೊಂಬಿವಲಿ, ಥಾಣೆ, ಕುರ್ಲಾ, ವಡಾಲ ಶ್ರೀ ರಾಮ ಮಂದಿರದಿಂದ ಹರಿಮಣಿ ಶಾನಭಾಗ್ ಉಪಸ್ತಿತರಿದ್ದರು.
ಇದೇ ಸಂದರ್ಭದಲ್ಲಿ ಅಪರಾಹ್ನ ಮನೋರಂಜನೆ ಅಂಗವಾಗಿ ಮಕ್ಕಳಿಂದ, ಸಮಿತಿಯ ಸದಸ್ಯರಿಂದ ಭಕ್ತಿಗೀತೆ, ಛದ್ಮ ವೇಷ, ನಾಟಕ, ನ್ರತ್ಯ ಮತ್ತು ವೈವಿಧ್ಯಮಯ ಕಾರ್ಯಕ್ರಮ ಜರಗಿತು.
ವೈವಿಧ್ಯಮಯ ಕಾರ್ಯಕ್ರಮದ ನಿರ್ವಹಣೆ ಸಮಿತಿಯ ಸಂಚಾಲಕರಾದ ದೇವೇಂದ್ರ ಭಕ್ತಾ ಮತ್ತು ಮಹಿಳಾ ವಿಭಾಗದ ಕಾರ್ಯದರ್ಶಿ ಸ್ಮಿತಾ ಗಣೇಶ್ ಪೈ ನಿರೂಪಿಸಿದರು.
ಡಿಗ್ರಿ, ಡಿಪ್ಲೋಮಾ, ವ್ರತ್ತಿಪರ , ಎಚ್.ಎಸ್.ಸಿ, ಎಸ್.ಎಸ್.ಸಿ ಶಿಕ್ಷಣದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮಾಜದ ಹಿರಿಯರಿಂದ ಪುರಸ್ಕರಿಸಲಾಯಿತು. ಅವರಿಗೆ ಧನ ಸಹಾಯವನ್ನು ಮುಲ್ಕಿ ಕೃಷ್ಣ ಗೋಪಾಲ ಕಾಮತ್ ಅವರ ಧರ್ಮಪತ್ನಿ ದಿ|| ಸರೋಜಾ ಕಾಮತ್ ಸ್ಮರಣಾರ್ಥ ಪ್ರಾಯೋಜಿಸಿದರು. ಹಳದಿ-ಕುಂಕುಮ ವಿಶ್ವನಾಥ್ ಶೆಟ್ಟಿ ಮತ್ತು ಸುಬ್ರಾಯ ಹೊಸಮನೆ ಪರಿವಾರ ಆಯೋಜಿಸಿದರು.
ಮಧ್ಯಾಹ್ನ ಮತ್ತು ರಾತ್ರಿಯ ಸಮಯದಲ್ಲಿ ಸಮಿತಿಯವರು ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ್ದರು.
ಸಮಿತಿಯ ಅಧ್ಯಕ್ಷ ತಾರಾನಾಥ್ ಪೈ, ಉಪಾಧ್ಯಕ್ಷರುಗಳಾದ ವಿಜಯೇಂದ್ರ ಪ್ರಭು, ಗಣೇಶ್ ಕಾಮತ್, ಮನೋಹರ ಶೆಣೈ, ಪುರುಶೋಥಮ ಕುಡ್ವ ಗೌರವಾಧ್ಯಕ್ಷ ವಸಂತ್ ನಾಯಕ್, ಉಪ ಗೌರವಾಧ್ಯಕ್ಷ ವಿನಾಯಕ್ ಪೈ, ಪ್ರವೀಣ್ ನಾಯಕ್, ಕಾರ್ಯದರ್ಶಿ ಪುರುಶೋಥಮ ಶೆಣೈ ಸಹ ಕಾರ್ಯದರ್ಶಿ ವಿವೇಕಾನಂದ್ ಭಕ್ತ, ಲೆಕ್ಷಮಣ ರಾವ್, ಸತ್ಯೇಂದ್ರ ನಾಯಕ್, ರಾಮಚಂದ್ರ ಹೆಗ್ಡೆ, ಕೋಶಾಧಿಕಾರಿ ವೆಂಕಟರಾಯ ಪ್ರಭು ಉಪ ಕೊಶಾಧಿಕಾರಿಗಳಾದ ಶ್ರೀನಿವಾಸ್ ಪಡಿಯಾರ್, ಪ್ರಕಾಶ್ ಕಾಮತ್, ವಿಶ್ವನಾಥ್ ಪೈ, ಗಣೇಶ್ ಪೈ ಸಂಚಾಲಕ ದೇವೇಂದ್ರ ಭಕ್ತ, ಸಹ ಸಂಚಾಲಕ ಶ್ರೀಧರ್ ಪ್ರಭು, ಜಗದೀಶ್ ಹೆಗ್ಡೆ, ಚಂದ್ರಕಾಂತ ಕುಡ್ವ, ದೇವದಾಸ್ ಭಟ್, ಸಮಿತಿಯ ಪ್ರಬಂಧಕರಾದ ಪ್ರಕಾಶ್ ಶೆಣೈ, ರಾಮಕೃಷ್ಣ ಹೆಗ್ಡೆ, ಮಹಿಳಾ ವಿಭಾಗದ ಪದಾಧಿಕಾರಿಗಳು, ಯುವ ವಿಭಾಗದ ಪದಾಧಿಕಾರಿ ಮತ್ತು ಸಮಿತಿಯ ಎಲ್ಲಾ ಸದಸ್ಯರ ಉಪಸ್ತಿಥಿಯಲ್ಲಿ ಈ ಧಾರ್ಮಿಕ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿ ನಡೆಯಿತು.
ವಿನಾಯಕ್ ಪೈ, ವಿಜಯೇಂದ್ರ ಪ್ರಭು ಮತ್ತು ಶ್ರೀಪತಿ ಭಟ್ ಅವರ ನೇತ್ರತ್ವದಲ್ಲಿ ಅಲಂಕರಿಸಿದ ಶ್ರೀ ಬಾಲಾಜಿ ಮತ್ತು ಸತ್ಯನಾರಾಯಣ ಮಂಟಪ ನೆರೆದ ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು.

23rd “Annual Get-Together” & “Satyanarayan Mahapooja” of Balaji Seva Samiti, a GSB Samaj Unit of, Vasai Road, was held on, Sunday 14th December 2014
Programme began with Satyanarayan Pooja at 9 AM under the able guidance of Vedamoorthy Sri. Giridhar Bhat, Vedamoorthy Sri. Sripati Bhat, pooja proceedings were performed by Prabha Shenoy and Ramesh Shenoy

There was bhajan seva by our Sri Venkataramana Bhajana Mandali, devotees who gathered enjoyed variety of bhajans in Konkani, Kannada, Marathi and Hindi. Accompanying Harmonium was Ramnesh Prabhu who is basically from Kasargod, but Bengaluru resident, a very talented upcoming artiste, on Tabla were Manoj Acharya, Ameya Pai & Aniket Kamath and on Pakhwaz were Ganesh Pai and Ashok Shinde. Ramnesh Prabhu and Manoj Acharya were honoured by offering shawl & idol of Lord Sri Venkataramana.
Mahila Vibhag members had arranged for “Haldi KumKum” programme, sponsered by our well wisher, Industrialist Sri. P. Vishwanath Shetty and G. Subraya Hosamane.
There was representation from various GSB Institutions like Parnaka Vasai, Nalasopara, Virar, Meera-Bhayander, Borivali, Dahisar, Goregaon, Andheri, Mulund, Vashi, Dombivali, Thane, Kurla, Harimani Shanbhag from Sri Rama Mandir, Wadala and Laxmi & Narasimha Prabhu from Shantidham Seva Samiti were present. Also members from Karnataka Sangha, Bantara Sangha, Gurunarayana Seva Samiti, Shani Pooja Samiti, Billavara Association were present.
It was our pleasure to have Sri Narayan Mankar, Mayor of Vasai-Virar Muncipal Corporation, Sandesh Jadhav Nagar Sevak, Local Corporators and Police Officers who made their presence inspite of their busy schedule.
Then from 3:30 PM onwards there was Variety Entertainment Programme like Singing, Dancing, Monoacting, Instruments, Games, Drama and Comedy skit, the programme was hosted by Sri. Someshwar Devendra Bhakta and Smt. Smita G Pai. finally Meritorious Students of SSC/HSC/Degree/Engineering/Diploma/Professional courses were honoured by our Samaj’s Senior Citizens. A little financial help was to them, from our “Education Fund” the main donor of which being, Mulki Krishna Gopal Kamath, in loving memory of his wife Late. Smt. Saroja Kamath

The Balaji & Satyanarayan Mantap were beautifully decorated by Vinayak Pai, Sripati Bhat & Vijayendra Prabhu. Arrangements were made for “Anna Santarpana” during both aftenoon and night.

Photos of Entertainment programme post lunch

Honarary office bearers, members of Jumbo Committee worked hard towards making this function uneventful and a grand success like every year. Balaji Seva Samiti takes this opportunity to thank each and everyone who contributed directly or indirectly towards making this function successfull. Thanks to Lekshmana Rao for capturing moments of the days entire event.

Leave a comment!

Add your comment below, or trackback from your own site. You can also Comments Feed via RSS.

Be nice. Keep it clean. Stay on topic. No spam.

You can use these tags:
<a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

This is a Gravatar-enabled weblog. To get your own globally-recognized-avatar, please register at Gravatar.