10th Pratishta Vardhanti held on 24th May 2016
ವಸಾಯಿ ರೋಡ್ ನ (ಪ) ಗೌಡ ಸಾರಸ್ವತ ಬ್ರಾಹ್ಮಣ (ಜಿ.ಎಸ್.ಬಿ.) ಬಾಲಾಜಿ ಸೇವ ಸಮಿತಿ ಶ್ರೀ ವೆಂಕಟರಾಮಣ ಭಜನಾ ಮಂಡಳಿ ಅವರ ಬಾಲಾಜಿ ಸಭಾಗ್ರಹ ಮತ್ತು ಪ್ರಾರ್ಥನಾ ಮಂದಿರದ ದಶಮ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಮೇ 24ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ವೇ| ಮೂ| ಗಿರಿಧರ್ ಭಟ್ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 10ನೇ ಪ್ರತಿಷ್ಠಾ ವರ್ಧಂತಿಯ ಸವಿ ನೆನಪಿಗಾಗಿ ದೇವರಿಗೆ ಸಮಾಜದ ಸದಸ್ಯರು, ಪ್ರಶಾಂತ್ ಗೋವಿಂದ ನಾಯಕ್ ಪರಿವಾರದವರ ವೈಯಕ್ತಿಕ ಧನಸಹಾಯದಲ್ಲಿ ನಿರ್ಮಿಸಲಾಗಿರುವ ಗರ್ಭಗುಡಿಯ ಹೊರ ಮಂಟಪಕ್ಕೆ ಹಿತ್ತಾಳೆಯ ಮಂಟಪವನ್ನು ಸಮರ್ಪಿಸಲಾಯಿತು.
ಶ್ರೀ ಕಾಶೀ ಮಠ ಸ೦ಸ್ಥಾನದ ಆರಾಧ್ಯ ಗುರುಗಳಾಗಿದ್ದ ಪರಮ ಪೂಜ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರು ಮ೦ದಿರದ ಉದ್ಘಾಟನೆಯ ದಿನದಂದು ಪ್ರತಿಷ್ಠಾಪಿಸಿರುವ ಬಾಲಾಜಿಯ ಗಂಧದ ಪ್ರಭಾವಳಿಗೆ 500ಗ್ರಾ೦ ಬೆಳ್ಳಿಯ ಅಷ್ಟ ಕಮಲ ಸಿಂಹಾಸನವನ್ನು ದಾನಿಗಳಾದ ವಸಾಯಿ ನಿವಾಸಿ ವೈಭವಿ ಮತ್ತು ರಾಜೇಶ್ ಕುಡ್ವ ದಂಪತಿಯ ಹಸ್ತದಿಂದ ಸಮರ್ಪಿಸಲಾಯಿತು.
ಅಷ್ಠಕಮಲ ಸಿಂಹಾಸನವನ್ನು ಪ್ರಾಯೋಜಿಸಿದ ದ0ಪತಿಯನ್ನು ಸಮಿತಿಯ ಅಧ್ಯಕ್ಶ ತಾರಾನಥ್ ಪೈ ಅವರು ಶಾಲು ಹೊದೆಸಿ ಫಲಪುಷ್ಪ ಮತ್ತು ಬಾಲಾಜಿಯ ಸ್ಮರಣಿಕೆಯನ್ನಿತ್ತು ಗೌರವಿಸಿದರು. ಈ ಸ0ದರ್ಭದಲ್ಲಿ ಸಮಿತಿಯವರಿ0ದ ಭಜನಾ ಕಾರ್ಯಕ್ರಮ ಜರಗಿತು, ಮ0ಡಳಿಯ ಸದಸ್ಯರು ಕನ್ನಡ, ಕೊ0ಕಣಿ, ಮರಾಠಿ, ಹಿ0ದಿ ಭಜನೆಗಳನ್ನು ಹಾಡಿ ಭಕ್ತಾದಿಗಳನ್ನು ರ0ಜಿಸಿದರು. ಹಾರ್ಮೊನಿಯ0ಮನಲ್ಲಿ ಮಲ್ಪೆ ವಿಶ್ವನಾಥ್ ಪೈ, ನಿಡ್ಡೋಡಿ ಪ್ರಕಾಶ್ ಪ್ರಭು, ತಬಲಾದಲ್ಲಿ ಅಮೇಯ ಪೈ, ವಿನಾಯಕ್ ಪೈ, ಪಖ್ವಾಜ್ ನಲ್ಲಿ ಪ್ರಸಾದ್ ಪ್ರಭು, ಅಶೋಕ್ ಶಿ0ದೆ ಸಹಕರಿಸಿದರು.
ವಸಾಯಿ ಪರಿಸರದ ಜಿ.ಎಸ್.ಬಿ. ಸಮಾಜ ಮತ್ತು ಇತರ ಸ0ಘ-ಸ0ಸ್ಥೆಗಳ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದರು. ಕಾರ್ಪೊರೇಷನ್ ಬ್ಯಾ0ಕಿನ ವಸಾಯಿ ಶಾಖೆಯ ಮುಖ್ಯ ಪ್ರಬ0ಧಕ ವೆ0ಕಟೇಶ್ವರಲು ಉಪಸ್ಥಿತರಿದ್ದರು. ಶ್ರೀ ವೆ0ಕಟರಮಣ ಮತ್ತು ಇತರ ಪರಿವಾರ ದೇವರಿಗೆ ಮ0ಗಳಾರತಿ ನಡಯಿತು.
ಸೋಮೆಶ್ವರ ಮ0ಜುನಾಥ ಭಕ್ತ ಮತ್ತು ಸಮಿತಿಯ ಪದಾಧಿಕಾರಿಗಳಿಗೆ ದಾನಿಗಳಿಗೆ ಸೇವಾದಾರರಿಗೆ ವಿವಿಧ ಸ0ಘ ಸ0ಸ್ಥೆಗಳ ಸದಸ್ಯರಿಗೆ ಪ್ರಸಾದ ವಿತರಣೆ ಮಾದಲಾಯಿತು. ಪ್ರಸಾದ ರೂಪದಲ್ಲಿ ಅನ್ನಸ0ತರ್ಪಣೆ ಜರಗಿತು.ಸಮಿತಿಯ ಸಹ ಸ0ಚಾಲಕ ಶ್ರೀಧರ ಪ್ರಭು ಮತ್ತು ಶೋಭಾ ಪರಿವಾರದವರಿ0ದ ಅನ್ನ ಸ0ತರ್ಪಣೆ ಆಯೊಜಿಸಲಾಗಿತ್ತು. ಹಿತ್ತಾಳೆಯ ಮ0ಟಪ ಮತ್ತು ಬೆಳ್ಲಿಯ ಅಷ್ಠಕಮಲ ಸಿ0ಹಾಸನ ನಿರ್ಮಿಸಿದ ಕಾರ್ಕಳ ಮಾಳ ನಿವಾಸಿ ಶ್ರಿ ಸುಧಾಕರ ಡೋ0ಗ್ರೆ ಅವರನ್ನು ಸ0ಚಾಲಕ ದೇವೆ0ದ್ರ ಭಕ್ತ ಅಭಿನ0ದಿಸಿದರು.
ಸಮಿತಿಯ ಅಧ್ಯಕ್ಸ ತಾರಾನಾಥ ಪೈ ಗೌರವಾಧ್ಯಕ್ಶ, ವಸ0ತ್ ನಾಯಕ್, ಕಾರ್ಯದರ್ಶಿ ಪುರುಷೋತ್ತಮ ಶೆಣೈ, ಕೋಶಾಧಿಕಾರಿ ವೆ0ಕಟರಾಯ ಪ್ರಭು, ಮಹಿಳಾ ಹಾಗು ಯುವಾ ವಿಭಾಗದ ಪದಾಧಿಕಾರಿಗಳು ಮತ್ತು ಸದಸ್ಯರು ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ವಿನಾಯಕ ಪೈ ಮತ್ತು ವಿಜಯೆ0ದ್ರ ಪ್ರಭು ಅವರ ನೇತ್ರತ್ವದಲ್ಲಿ ದೆವರ ಮ0ಟಪವನ್ನು ಸು0ದರವಾಗಿ ಅಲ0ಕರಿಸಲಾಯಿತು.